IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..!

ಲಕ್ನೋ ತಂಡಕ್ಕೆ ಐಪಿಎಲ್ ಟೂರ್ನಿ ಪ್ರಾರಂಭವಾಗುವ ಮೊದಲೇ ಭಾರಿ ಆಘಾತವಾಗಿದೆ.

Last Updated : Mar 18, 2022, 03:42 PM IST
  • ಲಕ್ನೋ ತಂಡಕ್ಕೆ ಐಪಿಎಲ್ ಟೂರ್ನಿ ಪ್ರಾರಂಭವಾಗುವ ಮೊದಲೇ ಭಾರಿ ಆಘಾತವಾಗಿದೆ.
IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..! title=
Photo Courtesy: Twitter

ನವದೆಹಲಿ: ಲಕ್ನೋ ತಂಡಕ್ಕೆ ಐಪಿಎಲ್ ಟೂರ್ನಿ ಪ್ರಾರಂಭವಾಗುವ ಮೊದಲೇ ಭಾರಿ ಆಘಾತವಾಗಿದೆ.

ಹೌದು, ಈಗ ವಿದೇಶಿ ಆಟಗಾರ ಮಾರ್ಕ್ ವುಡ್ ಅವರು ಗಾಯಗೊಂಡಿರುವುದರಿಂದಾಗಿ ಐಪಿಎಲ್ 2022 ರಿಂದ ಹೊರಗೆ ಉಳಿಯಲಿದ್ದಾರೆ.

ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಲ ಮೊಣಕೈಗೆ ಗಾಯವಾದ ನಂತರ ಮಾರ್ಚ್ 26 ರಿಂದ ಪ್ರಾರಂಭವಾಗುವ IPL 2022  ನಲ್ಲಿ ವುಡ್ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಪ್ರತಿನಿಧಿಸುವುದಿಲ್ಲ ಎಂದು 'Espncricinfo' ವರದಿ ಮಾಡಿದೆ.

ಇದನ್ನೂ ಓದಿ: IPL 2022 ರಲ್ಲಿ ಬುಮ್ರಾಗಿಂತ ಬಲಿಷ್ಠ ಈ 3 ಬ್ಯಾಟ್ಸ್‌ಮನ್‌ಗಳು, ಇವರಿದ್ದರೆ ಬೌಂಡರಿ - ಸಿಕ್ಸರ್‌ಗಳ ಮಳೆನೆ

ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಲಕ್ನೋ ತಂಡವು ಮಾರ್ಕ್ ವುಡ್ ಅವರನ್ನು 7.5 ಕೋಟಿ ರೂಗೆ ಖರೀದಿಸಿತ್ತು. ಆದರೆ ನಾರ್ತ್ ಸೌಂಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರಿಂದಾಗಿ ಅವರು ಕೇವಲ 17 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಗಿದೆ.

ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸಲಿದ್ದು, ಆಂಡಿ ಫ್ಲವರ್ ಅವರು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : IPL 2022 ಗೆ ದಿಡೀರ್ ಎಂಟ್ರಿ ನೀಡಿದ ಅಪಾಯಕಾರಿ ಬೌಲರ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News