ಆಯ್ಕೆದಾರರಿಗೆ ಸಿಕ್ಕಿದ್ದಾರೆ ಹೊಸ ಹಿಟ್‌ಮ್ಯಾನ್; ಈ ಬ್ಯಾಟ್ಸ್‌ಮನ್ ರೋಹಿತ್‌ಗಿಂತ ಹೆಚ್ಚು ಅಪಾಯಕಾರಿ!

ಕೆಲವೇ ವರ್ಷಗಳಲ್ಲಿ ಅನೇಕ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ. ರೋಹಿತ್ ಶರ್ಮಾಗೂ ವಯಸ್ಸಾಗಿದ್ದು, ಇನ್ನು ಕೆಲ ವರ್ಷಗಳು ಮಾತ್ರ ಅವರು ಕ್ರಿಕೆಟ್ ಆಡಬಹುದು.

Written by - Puttaraj K Alur | Last Updated : Mar 18, 2022, 09:52 AM IST
  • ಆಯ್ಕೆಗಾರರಿಗೆ ಸಿಕ್ಕಿದ್ದಾರೆ ರೋಹಿತ್ ಶರ್ಮಾ ಬದಲಿ ಆಟಗಾರ
  • ಭವಿಷ್ಯದಲ್ಲಿ ಈ ಆಟಗಾರ ಟೀಂ ಇಂಡಿಯಾದ ಹಿಟ್‌ಮ್ಯಾನ್ ಆಗಬಹುದು
  • IPL ಟೂರ್ನಿಯಲ್ಲಿ ಮಿಂಚಿರುವ ಈ ಆಟಗಾರ ಸ್ಫೋಟಕ ಆಟಕ್ಕೆ ಹೆಸರುವಾಸಿ
ಆಯ್ಕೆದಾರರಿಗೆ ಸಿಕ್ಕಿದ್ದಾರೆ ಹೊಸ ಹಿಟ್‌ಮ್ಯಾನ್; ಈ ಬ್ಯಾಟ್ಸ್‌ಮನ್ ರೋಹಿತ್‌ಗಿಂತ ಹೆಚ್ಚು ಅಪಾಯಕಾರಿ! title=
ಭಾರತೀಯ ಕ್ರಿಕೆಟ್ ತಂಡದ ಹೊಸ ಹಿಟ್‌ಮ್ಯಾನ್

ನವದೆಹಲಿ: ಸದ್ಯ ರೋಹಿತ್ ಶರ್ಮಾ(Rohit Sharma)ಗಿಂತ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್ ಇಡೀ ಜಗತ್ತಿನಲ್ಲಿ ಬಹುಶಃ ಇಲ್ಲ. ಕಳೆದ ಹಲವು ವರ್ಷಗಳಿಂದ ರೋಹಿತ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ನೂತನ ಕ್ಯಾಪ್ಟನ್ ಆಗಿರುವ ಹಿಟ್ ಮ್ಯಾನ್ ಏಕದಿನ ಕ್ರಿಕೆಟ್ ನಲ್ಲಿ 3 ದ್ವಿಶತಕ ಬಾರಿಸಿದ್ದಾರೆ. ಆದರೆ ಆತಂಕದ ವಿಷಯವೆಂದರೆ ರೋಹಿತ್ ನಂತರ ವಿಶ್ವ ಕ್ರಿಕೆಟ್‌ನಲ್ಲಿ ದೀರ್ಘಕಾಲ ತನ್ನ ಛಾಪು ಮೂಡಿಸಬಲ್ಲ ಬ್ಯಾಟ್ಸ್‌ಮನ್ ಯಾರು? ರೋಹಿತ್‌ಗೆ ಈಗಾಗಲೇ 34 ವರ್ಷ ಆಗಿದ್ದು, ಭಾರತ ತಂಡಕ್ಕೆ ಶೀಘ್ರವೇ ಹೊಸ ಮಾರಕ ಆರಂಭಿಕ ಆಟಗಾರನ ಅಗತ್ಯವಿದೆ. ಈ ಕೊರತೆಯನ್ನು ತುಂಬುವ ಬ್ಯಾಟ್ಸ್‌ಮನ್ ಒಬ್ಬರು ಇದ್ದಾರೆ.    

ಈ ಆಟಗಾರ ಮುಂದಿನ ಹಿಟ್‌ಮ್ಯಾನ್ ಆಗಬಹುದು

ಕೆಲವೇ ವರ್ಷಗಳಲ್ಲಿ ಅನೇಕ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ. ರೋಹಿತ್ ಶರ್ಮಾಗೂ ವಯಸ್ಸಾಗಿದ್ದು, ಇನ್ನು ಕೆಲವೇ ವರ್ಷಗಳು ಮಾತ್ರ ಅವರು ಕ್ರಿಕೆಟ್ ಆಡಬಹುದು. 2023ರ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಕ್ರಿಕೆಟ್ ಆಡುವುದನ್ನು ನಿಲ್ಲಿಸಬಹುದು. ಈ ಜವಾಬ್ದಾರಿಯನ್ನು ಸಿಎಸ್‌ಕೆಯ ಯುವ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ (Ruturaj Gaikwad)ನಿಭಾಯಿಸಬಲ್ಲರು. ಆದರೆ ಗಾಯಕ್ವಾಡ್ ಅವರಿಗೆ ಅದೃಷ್ಟ ಕೈಹಿಡಿಯುತ್ತಿಲ್ಲ. ಗಾಯಕ್‌ವಾಡ್‌ಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ, ಸಿಕ್ಕಿದ್ದರೂ ಗಾಯಗೊಂಡು ಬೆಂಚ್ ಕಾಯಬೇಕಾಗಿತ್ತು. ರೋಹಿತ್ ಗೆ ಗಾಯಕ್ವಾಡ್‌ಗಿಂತ ಇಶಾನ್ ಕಿಶನ್ ಮತ್ತು ಕೆ.ಎಲ್,ರಾಹುಲ್ ಹೆಚ್ಚು ಇಷ್ಟ.

ಇದನ್ನೂ ಓದಿ: Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ!

ಅದ್ಭುತ ಬ್ಯಾಟಿಂಗ್ ಪ್ರದರ್ಶನ  

ಗಾಯಕ್ವಾಡ್(CSK Explosive Batsman) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿಯೂ ಅವರು ಹಲವಾರು ಶತಕಗಳನ್ನು ಗಳಿಸಿದ್ದರು. ಕೇವಲ 24 ವರ್ಷಗಳ ಈ ಬ್ಯಾಟ್ಸ್‌ಮನ್ ಟೀಂ ಇಂಡಿಯಾದ ಭವಿಷ್ಯ. ಇತ್ತೀಚಿನ ಐಪಿಎಲ್‌ನಲ್ಲೂ ಅವರ ಬ್ಯಾಟಿಂಗ್ ಎಲ್ಲರ ಮನ ಗೆದ್ದಿತ್ತು. ಆದರೆ ಅವರ ದುರಾದೃಷ್ಟವೆಂದರೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ.  

2021ರ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್

ಚೆನ್ನೈ ಸೂಪರ್ ಕಿಂಗ್ಸ್‌(Chennai Super Kings)ನ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 2021ರ ಐಪಿಎಲ್ ಟೂರ್ನಿ(IPL 2021)ಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 16 ಪಂದ್ಯಗಳಲ್ಲಿ ಅರು 45.35 ಸರಾಸರಿ ಮತ್ತು 136.26 ಸ್ಟ್ರೈಕ್ ರೇಟ್‌ನಲ್ಲಿ 635 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ವೃತ್ತಿಜೀವನದ ಮೊದಲ IPL ಶತಕವನ್ನು ಸಹ ಗಳಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ಕೆ.ಎಲ್.ರಾಹುಲ್ ರಂತಹ ಅನುಭವಿ ಆಟಗಾರರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಗೆದ್ದುಕೊಂಡರು. ಅವರ ಬ್ಯಾಟಿಂಗ್ ಪ್ರದರ್ಶನ ನೋಡಿದರೆ ಮುಂಬರುವ ದಿನಗಳಲ್ಲಿ ಅವರು ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: T20 ಕ್ರಿಕೆಟ್‌ನಲ್ಲಿ ವಿಶ್ವದ ಈ 3 ಬ್ಯಾಟ್ಸ್‌ಮನ್‌ಗಳು ಅತ್ಯಂತ ಅಪಾಯಕಾರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News