Team India: ಈ ಆಟಗಾರನೇ ಟೀಂ ಇಂಡಿಯಾದ ಮುಂದಿನ ವಿರಾಟ್ ಕೊಹ್ಲಿ..!
India vs Bangladesh: ಭಾರತ ತಂಡದ ಮುಂದಿನ ವಿರಾಟ್ ಕೊಹ್ಲಿ ಶುಬ್ಮನ್ ಗಿಲ್ ಆಗಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ. ಬಾಂಗ್ಲಾದೇಶದ ಟೆಸ್ಟ್ ಪಂದ್ಯದಲ್ಲಿ ಗಿಲ್ ಬಿರುಸಿನ ಶತಕ ಗಳಿಸಿ ಮಿಂಚಿದ್ದರು.
ನವದೆಹಲಿ: ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. ಟೀಂ ಇಂಡಿಯಾಗೆ ಹಲವು ಪಂದ್ಯಗಳಲ್ಲಿ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ಇನ್ನೇನು ಕೆಲವೇ ವರ್ಷಗಳಲ್ಲಿ ಕ್ರಿಕೆಟ್‍ಗೆ ಕೊಹ್ಲಿ ವಿದಾಯ ಹೇಳಲಿದ್ದಾರೆ. ಆಗ ಟೀಂ ಇಂಡಿಯಾಗೆ ರನ್ ಮಷಿನ್ ಕೊರತೆಯುಂಟಾಗುತ್ತದೆ. ವಿರಾಟ್ ಕೊಹ್ಲಿ ಸ್ಥಾನ ತುಂಬುವ ಆಟಗಾರ ಯಾರು?
ಈ ಪ್ರಶ್ನೆಗೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಉತ್ತರ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ಮುಂದಿನ ವಿರಾಟ್ ಕೊಹ್ಲಿ ಆಗಬಲ್ಲ ಆಟಗಾರನಿದ್ದಾನೆಂದು ಅವರು ಹೇಳಿದ್ದಾರೆ. ಈ ಆಟಗಾರ ಕೊಹ್ಲಿಯಂತೆಯೇ ಸ್ಫೋಟಕ ಬ್ಯಾಟಿಂಗ್ ನಲ್ಲಿ ಪರಿಣತಿ ಪಡೆದಿದ್ದಾರೆ. ಈ ಆಟಗಾರನ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ODI World Cup 2023: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್..!
ಶುಭ್‌ಮನ್ ಗಿಲ್
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ 2ನೇ ಬಿರುಸಿನ ಶತಕ ಸಿಡಿಸಿದ್ದಾರೆ. ಆತ ಕ್ಲಾಸ್ ಪ್ಲೇಯರ್ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಸಾಲಿಗೆ ಸೇರುವ ಮುಂದಿನ ಬ್ಯಾಟ್ಸ್‌ಮನ್ ಗಿಲ್ ಎಂದು ನಾನು ಹೇಳುತ್ತೇನೆ. ಆತ ಎಲ್ಲಾ 3 ಸ್ವರೂಪಗಳ ಉತ್ತಮ ಆಟಗಾರ. ಈ ಯುವ ಆಟಗಾರನಿಂದ ಉತ್ತಮ ಪ್ರದರ್ಶನ ಕಾಣುವ ಭರವಸೆ ನನಗಿದೆ’ ಎಂದು ಹೇಳಿದ್ದಾರೆ.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಶುಭಮನ್ ಗಿಲ್ ಸೂಕ್ತ ಬ್ಯಾಟ್ಸ್‌ಮನ್. ಏಕೆಂದರೆ ದೇಶೀಯ ಕ್ರಿಕೆಟ್‌ನಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯಕ್ಕೆ ಸ್ಪಿನ್ನರ್ ಕೊರತೆಯಾಗಬಹುದು. ಆದರೆ ಬ್ಯಾಟಿಂಗ್‍ನಲ್ಲಿ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆಂದು ಜಾಫರ್ ಹೇಳಿದ್ದಾರೆ.
ಇದನ್ನೂ ಓದಿ: Pro Kabaddi League Season 9 : ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್!
ಬಿರುಸಿನ ಇನ್ನಿಂಗ್ಸ್ ಆಡಿದ ಗಿಲ್!
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಶುಭಮನ್ ಗಿಲ್ 110 ರನ್ ಗಳಿಸುವ ಮೂಲಕ ಬಿರುಸಿನ ಬ್ಯಾಟಿಂಗ್ ನಡೆಸಿದರು. ತಮ್ಮ ಅತ್ಯುತ್ತಮ ಆಟದಿಂದ ಗಿಲ್ ಎಲ್ಲರ ಮನ ಗೆದ್ದರು. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಗಿಲ್, ಯಾವುದೇ ರೀತಿಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಗಿಲ್ ಭಾರತದ ಪರ 11 ಟೆಸ್ಟ್ ಪಂದ್ಯಗಳಲ್ಲಿ 579 ರನ್ ಗಳಿಸಿದ್ದಾರೆ. 2022ರಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.