Pro Kabaddi League Season 9 : ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್!

Pro Kabaddi League Season 9 : ಪ್ರೊ ಕಬಡ್ಡಿ ಸೀಸನ್ 9 ರ 72 ದಿನಗಳ, 137 ಪಂದ್ಯಗಳ ಲೀಗ್ ಇಂದು ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ಇಂದು ನಡೆದ ಫೈನಲ್ ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 32-29 ರಿಂದ ಪುಣೇರಿ ಪಲ್ಟಾನ್ಸ್ ಅನ್ನು ಸೋಲಿಸಿ ಸೀಸನ್ 9 ರ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

Written by - Channabasava A Kashinakunti | Last Updated : Dec 17, 2022, 10:35 PM IST
  • ಪ್ರೊ ಕಬಡ್ಡಿ ಲೀಗ್ ಸೀಸನ್ 9
  • 72 ದಿನಗಳ, 137 ಪಂದ್ಯಗಳ ಲೀಗ್
  • ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್!
Pro Kabaddi League Season 9 : ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್! title=

Pro Kabaddi League Season 9 : ಪ್ರೊ ಕಬಡ್ಡಿ ಸೀಸನ್ 9 ರ 72 ದಿನಗಳ, 137 ಪಂದ್ಯಗಳ ಲೀಗ್ ಇಂದು ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ಇಂದು ನಡೆದ ಫೈನಲ್ ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 32-29 ರಿಂದ ಪುಣೇರಿ ಪಲ್ಟಾನ್ಸ್ ಅನ್ನು ಸೋಲಿಸಿ ಸೀಸನ್ 9 ರ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಸೀಸನ್ ನ ಆರಂಭದಲ್ಲಿ ಅಬ್ಬರಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಅಂತಿಮ ಹೋರಾಟದಲ್ಲೂ ಅದೇ ವೇಗವನ್ನು ಮುಂದುವರಿಸಿತು. ಪುಣೇರಿ ಪಲ್ಟನ್ ಅನ್ನು 33-29 ಅಂಕಗಳಿಂದ ಸೋಲಿಸಿತು ಮತ್ತು ಪ್ರೊ ಕಬಡ್ಡಿ ಲೀಗ್ 2022ರ ಚಾಂಪಿಯನ್ ಆಗಿದೆ. 

ಇದನ್ನೂ ಓದಿ : IPL 2023 ರ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಗೇಲ್, ರೈನಾ ಮತ್ತು ಎಬಿಡಿ!

ಪಿಂಕ್ ಪ್ಯಾಂಥರ್ಸ್‌ನಲ್ಲಿ ಅರ್ಜುನ್ ದೇಸ್ವಾಲ್ ಮತ್ತು ಅಜಿತ್ ಕುಮಾರ್ 6 ರೈಡಿಂಗ್ ಪಾಯಿಂಟ್‌ಗಳೊಂದಿಗೆ ಹೀರೋ ಆದರು. ಸುನೀಲ್ ಕುಮಾರ್ ಮತ್ತೊಬ್ಬ ಜೈಪುರ ಹೀರೋ ಆದರು. ಅವರು 5 ಟ್ಯಾಕಲ್‌ ಮಾಡಿ, ಒಟ್ಟು 6 ಪಾಯಿಂಟ್‌ ಗಳಿಸಿದರು. ಜೈಪುರ ಪಿಂಕ್ಸ್ ಪ್ಯಾಂಥರ್ಸ್‌ಗೆ ಇದು ಎರಡನೇ ಪ್ರೊ ಕಬಡ್ಡಿ ಲೀಗ್ ನ ಪ್ರಶಸ್ತಿಯಾಗಿದೆ.

ಇನ್ನೂ ಪುಣೇರಿ ಪಲ್ಟಾನ್ಸ್ ನ ಆದಿತ್ಯ ಶಿಂಧೆ 5 ರೇಡ್ ಪಾಯಿಂಟ್ ನಿಂದ ಮಿಂಚಿದರು.ಆಕಾಶ್ ಶಿಂಧೆ 4 ರೇಡ್ ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಅಭಿನೇಶ್ ಮತ್ತು ಇಸ್ಮಾಯಿಲ್ ನಭಿಬಕ್ಷ್ 4 ಟ್ಯಾಕಲ್ ಪಾಯಿಂಟ್‌ ಗಳಿಸಿ ಪುಣೇರಿ ಪಲ್ಟಾನ್ಸ್ ತಂಡಕ್ಕೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 14-12 ರಿಂದ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಯಾವುದೇ ತಂಡದ ಪರವಾಗಿ ಪಂದ್ಯ ನಿಲ್ಲಲಿಲ್ಲ. ನಂತರ ಜೈಪುರ 7 ರೇಡ್ ಪಾಯಿಂಟ್ಸ್ ಗಳಿಸಿತು, ಆಗ ಪುಣೇರಿ ಪಲ್ಟನ್ 3 ಪಾಯಿಂಟ್ಸ್ ಗಳಿಸಿತು. 

ಟ್ಯಾಕಲ್ಸ್ ವಿಚಾರಕ್ಕೆ ಬಂದರೆ, ಜೈಪುರ 6 ಅಂಕ ಗಳಿಸಿತು. ಪುಣೇರಿ ಪಲ್ಟಾನ್ 7 ಅಂಕ ಗಳಿಸಿತು. ಪುಣೇರಿ 2 ಹೆಚ್ಚುವರಿ ಅಂಕ ಪಡೆದರೆ, ಜೈಪುರ ಒಂದು ಅಂಕ ಮಾತ್ರ ಪಡೆಯಿತು. ಅಲ್ಲದೆ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ತೀವ್ರ ಮುಖಾಮುಖಿಯಾದವು. ಆದರೆ, ದ್ವಿತೀಯಾರ್ಧದಲ್ಲಿ ಪುಣೇರಿ ಪಲ್ಟನ್ ಆಲ್​ ಔಟಾದ ನಂತರ ಜೈಪುರ ಪಿಂಕ್ ಪ್ಯಾಂಥರ್ಸ್ 2 ಅಂಕ ಗಳಿಸಿತು.

ಇದನ್ನೂ ಓದಿ : Team India : ರೋಹಿತ್ ಟೀಂ ಇಂಡಿಯಾಗೆ ಮರಳಿದರೆ ತಂಡದಿಂದ ಈ ಆಟಗಾರ ಔಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News