Ind Vs WI Series: ಭಾರತ ತಂಡವು ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಸರಣಿಯನ್ನು ಆರಂಭಿಸಲಿದೆ. ಇದಕ್ಕಾಗಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ನಾಯಕತ್ವದ ತಂಡವು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲನ್ನು ಎದುರಿಸಿದೆ. ಇದು ಡಬ್ಲ್ಯುಟಿಸಿ ಫೈನಲ್ ನಂತರ ಭಾರತದ ಮೊದಲ ಸರಣಿಯಾಗಿದೆ.


COMMERCIAL BREAK
SCROLL TO CONTINUE READING

ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ
ಭಾರತದ ವೆಸ್ಟ್ ಇಂಡೀಸ್ ಪ್ರವಾಸವು 2 ಟೆಸ್ಟ್ ಪಂದ್ಯಗಳೊಂದಿಗೆ ಆರಂಭವಾಗಲಿದೆ, ಇದು 2023-2025 ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್ ಆರಂಭ ಎಂದೂ ಕೂಡ ಗುರುತಿಸಲಾಗುತ್ತಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಜುಲೈ 12 ರಿಂದ ಮೊದಲ ಟೆಸ್ಟ್ ಆತಿಥ್ಯ ವಹಿಸಲಿದೆ. ಇದೇ ವೇಳೆ ಎರಡನೇ ಟೆಸ್ಟ್ ಜುಲೈ 20 ರಿಂದ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಕುತೂಹಲಕಾರಿಯಾಗಿ, ಎರಡನೇ ಟೆಸ್ಟ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಒಟ್ಟಾರೆ 100 ನೇ ಟೆಸ್ಟ್ ಪಂದ್ಯವಾಗಿದೆ. ಇದಾದ ಬಳಿಕ ಏಕದಿನ ಹಾಗೂ ಟಿ20 ಸರಣಿಯೂ ನಡೆಯಲಿದೆ.


ಇದನ್ನೂ ಓದಿ-Asia Cup 2023 ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ!


ಜುಲೈ 3 ರಂದು ಪ್ರವಾಸ ಕೈಗೊಳ್ಳಲಿದೆ ತಂಡ
ಮಾಧ್ಯಮ ವರದಿಗಳ ಪ್ರಕಾರ ಭಾರತೀಯ ಟೆಸ್ಟ್ ತಂಡ ಜುಲೈ 3 ರಂದು ವೆಸ್ಟ್ ಇಂಡೀಸ್‌ಗೆ ತೆರಳಲಿದೆ. ಇದರ ನಂತರ, ಇತರ ಸ್ವರೂಪಗಳ ತಂಡಗಳು ವೆಸ್ಟ್ ಇಂಡೀಸ್ ತಲುಪಲಿವೆ. ಈ ಸರಣಿಯು ಭಾರತಕ್ಕೂ ಮುಖ್ಯವಾಗಿದೆ ಏಕೆಂದರೆ ಇದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಸೈಕಲ್ ಕೂಡ ಆರಂಭವಾಗುತ್ತಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ. 


ಇದನ್ನೂ ಓದಿ-Partition Of India: 'ನೇತಾಜಿ ಬದುಕಿದ್ದರೆ ಭಾರತದ ವಿಭಜನೆಯಾಗುತ್ತಿರಲಿಲ್ಲ' ಜಿನ್ನಾ ಕೂಡ... ಎಂದ NSA ಅಜಿತ್ ದೊವಲ್


ಎರಡು ತಂಡಗಳ ನಡುವೆ ಮೂರು ODI
ಟೆಸ್ಟ್ ನಂತರ, ಮೂರು ಪಂದ್ಯಗಳ ODI ಸರಣಿ ಕೂಡ ಆರಂಭಗೊಳ್ಳಲಿದೆ, ಇದರಲ್ಲಿ ಮೊದಲ ಎರಡು ಪಂದ್ಯಗಳು ಬಾರ್ಬಡೋಸ್‌ನಲ್ಲಿ ಜುಲೈ 27 ಮತ್ತು 29 ರಂದು ನಡೆಯಲಿದೆ. ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಆಗಸ್ಟ್ 1 ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಟಿ20 ಸರಣಿಯ ಪಂದ್ಯಗಳು ಆಗಸ್ಟ್ 3, 6, 8, 12 ಮತ್ತು 13 ರಂದು ನಡೆಯಲಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ