Asia Cup 2023 ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ!

Asia Cup 2023: ಏಷ್ಯಾ ಕಪ್-2023 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ, ಪಾಕಿಸ್ತಾನ ಒಂದೇ ದೇಶ ಈ ಪಂದ್ಯಾವಳಿಯ ಆತಿಥ್ಯ ವಹಿಸುತ್ತಿಲ್ಲ. ಎರಡು ವಿವಿಧ ದೇಶದಲಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.   

Written by - Nitin Tabib | Last Updated : Jun 15, 2023, 05:27 PM IST
  • ಪಂದ್ಯಾವಳಿಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ.
  • ಚಾಂಪಿಯನ್‌ಶಿಪ್‌ನಲ್ಲಿರುವ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
  • ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಲಿವೆ.
Asia Cup 2023 ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ! title=

Asia Cup Schedule 2023: ಮುಂಬರುವ ಏಷ್ಯಾ ಕಪ್ 2023 ರ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಆದರೆ ಈ ಬಾರಿಯ ಏಷ್ಯಾ ಕಪ್ ಕೇವಲ ಕೇವಲ ಪಾಕಿಸ್ತಾನ ಒಂದೇ ವಹಿಸುತ್ತಿಲ್ಲ. ಏಕೆಂದರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) 2023 ರ ಏಷ್ಯಾ ಕಪ್‌ಗಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದೆ. ಈ ಮೊದಲು ಕೇವಲ ಪಾಕಿಸ್ತಾನ ಒಂದೇ ದೇಶಕ್ಕೆ ಈ ಪಂದ್ಯಾವಳಿಯ ಆತಿಥ್ಯ ನೀಡಲಾಗಿತ್ತು.  

ಹೈಬ್ರಿಡ್ ಮಾಡೆಲ್ ಗೆ ಸಿಕ್ತು ಅನುಮೋದನೆ
ಇದರರ್ಥ ಈ ಬಾರಿ ಈ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಎರಡು ದೇಶಗಳಲ್ಲಿ ನಡೆಯಲಿದೆ - ಪಾಕಿಸ್ತಾನ ಮತ್ತು ಶ್ರೀಲಂಕಾ. ಈಗಾಗಲೇ ಆತಿಥೇಯ ದೇಶವಾಗಿದ್ದ ಪಾಕಿಸ್ತಾನದ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಮಾದರಿಯನ್ನು ಜಯ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸಿಸಿ ಸಭೆಯಲ್ಲಿ ಅಂಗೀಕರಿಸಲಾಗಿದೆ. ಜಯ್ ಷಾ ಬಳಿ ಬಿಸಿಸಿಐ ಸಚಿವ ಸ್ಥಾನ ಕೂಡ ಇದೆ. 

ಇದನ್ನೂ ಓದಿ-Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ

ಈ ದಿನಾಂಕದಿಂದ ಟೂರ್ನಿ ಆರಂಭಗೊಳ್ಳಲಿದೆ
ಪಂದ್ಯಾವಳಿಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಚಾಂಪಿಯನ್‌ಶಿಪ್‌ನಲ್ಲಿರುವ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಲಿವೆ. ಇದಾದ ನಂತರ ಅಗ್ರ-2 ತಂಡಗಳು ಫೈನಲ್‌ನಲ್ಲಿ ಆಡಲಿವೆ. 13-ಪಂದ್ಯಗಳ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಗಳನ್ನು ಸಮರ್ಥವಾಗಿ ಆಡಲು ಭಾರತ ಮತ್ತು ಪಾಕಿಸ್ತಾನವು ಒಂದೇ ಗುಂಪಿನಲ್ಲಿರುವ ನಿರೀಕ್ಷೆಯಿದೆ. ಚಾಂಪಿಯನ್ಶಿಪ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಪಂದ್ಯಗಳು ಲಾಹೋರ್ ನಲ್ಲಿ ನಡೆಯಲಿವೆ.

ಇದನ್ನೂ ಓದಿ-Uniform Civil Code ಕುರಿತು ಸಮಾಲೋಚನೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಕಾನೂನು ಆಯೋಗ

ಭಾರತ ಮತ್ತು ಪಾಕಿಸ್ತಾನದ ಹೊರತಾಗಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಟೂರ್ನಿಯಲ್ಲಿ ಆಡಲಿವೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮೊದಲು ಈ ಟೂರ್ನಿಯನ್ನು ಮುಖ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News