ನವದೆಹಲಿ: ನೆನಪಿನ ದೋಣಿಯಲ್ಲಿ 9 ವರ್ಷಗಳ ಸಮಯ ತುಂಬಾ ಹಳೆಯದೇನಲ್ಲ. ಇಷ್ಟು ವರ್ಷಗಳ ಹಿಂದಿನ ನೆನಪು ಎಲ್ಲರ ಮನಸ್ಸಿನಲ್ಲಿ ತಾಜಾವಾಗಿರುತ್ತವೆ. 2011 ರಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ವಿಶ್ವಕಪ್ ಪಂದ್ಯದಲ್ಲಿ ಪಾಲ್ಗೊಂಡಿದ್ದವು. ಈ ಮೆಗಾ ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ಸಚಿನ್ ಗಾಗಿ ಈ ವಿಶ್ವಕಪ್ ಗೆಲ್ಲಲು ಬಯಸುವುದಾಗಿ ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಸಚಿನ್ ಆರನೇ ಬಾರಿಗೆ ದಾಖಲೆಯ ವಿಶ್ವಕಪ್ ಆಡಲು ತಯಾರಿ ನಡೆಸಿದ್ದರು. ಅವರು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಸರಿಗಟ್ಟಲು ಹೊರಟಿದ್ದರು. ತಮ್ಮ ಹೆಸರಿನಲ್ಲಿ ಸಾಕಷ್ಟು ಕ್ರಿಕೆಟ್ ದಾಖಲೆಗಳನ್ನು ಹೊಂದಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಮ್ಮ ವೃತ್ತಿಜೀವನದಲ್ಲಿ ಒಂದು ವಿಶ್ವಕಪ್ ಅನ್ನು ಗೆದ್ದಿರಲಿಲ್ಲ. ಇದು ಕ್ರಿಕೆಟ್ ದೇವರು ಎಂದು ಖ್ಯಾತಿ ಪಡೆದಿದ್ದ ಸಚಿನ್ ಅವರಿಗಷ್ಟೇ ಅಲ್ಲ ಅವರ ಅಭಿಮಾನಿಗಳಿಗೂ ಒಂದು ಕೊರಗಾಗಿತ್ತು.


ವಿಶ್ವಕಪ್ 2011: 'ಧೋನಿ ಫೈನಲ್‌ನಲ್ಲಿ ಈ ವಿಷಯ ನೆನಪಿಸಿದರು, ಹಾಗಾಗಿ ನಾನು ಔಟ್ ಆಗಿದ್ದೆ' - ಗಂಭೀರ್

ಧೋನಿಯ ಹೊಡೆತವು ರವಿಶಾಸ್ತ್ರಿ ಅವರ ವ್ಯಾಖ್ಯಾನದಿಂದ ಸ್ಮರಣೀಯವಾಗಿದ್ದರಿಂದ ಅದು ಜನರ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿ ಉಳಿದಿದೆ. 91 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಾಗಿ ಧೋನಿ ಅವರಿಗೆ 'ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ' ನೀಡಲಾಯಿತು. ಅದೇ ಸಮಯದಲ್ಲಿ, ಯುವರಾಜ್ ಸಿಂಗ್ ಅವರನ್ನು ಇಡೀ ವಿಶ್ವಕಪ್‌ನಲ್ಲಿ ಸರ್ವಾಂಗೀಣ ಪ್ರದರ್ಶನಕ್ಕಾಗಿ 'ಟೂರ್ನಿಯ ಆಟಗಾರ' ಎಂದು ಘೋಷಿಸಲಾಯಿತು. ಪಂದ್ಯದ ನಂತರ, ಯೂಸುಫ್ ಪಠಾಣ್ ಸಚಿನ್ ಅವರನ್ನು ಭುಜದ ಮೇಲೆ ಹೊತ್ತು ಟೀಮ್ ಇಂಡಿಯಾದ ಎಲ್ಲ ಸದಸ್ಯರೊಂದಿಗೆ ಮೈದಾನವನ್ನು ಪ್ರದಕ್ಷಿಣೆ ಹಾಕಿದರು. ಇದು ಕಿರಿಯರ ಪರವಾಗಿ ಸಚಿನ್‌ಗೆ ದೊಡ್ಡ ಗೌರವವಾಗಿತ್ತು. 28 ವರ್ಷಗಳ ನಂತರ ಭಾರತ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತು ಮತ್ತು ಧೋನಿ ಭರವಸೆ ನೀಡಿದಂತೆ ಸಚಿನ್ ಅವರ ದೊಡ್ಡ ಕನಸನ್ನು ಈಡೇರಿಸಿದ್ದರು.