IND vs ENG: ರಾಜ್’ಕೋಟ್’ನಲ್ಲಿ ಯಶಸ್ವಿ ಬ್ಯಾಟಿಂಗ್ ಅಬ್ಬರ… ಮತ್ತೊಂದು ಟೆಸ್ಟ್ ಶತಕ ಸಿಡಿಸಿದ ಜೈಸ್ವಾಲ್
IND vs ENG 3rd Test: ಯಶಸ್ವಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್ ಅನ್ನು ನಿಧಾನವಾಗಿ ಆರಂಭಿಸಿದ್ದರು. ತಮ್ಮ ಇನ್ನಿಂಗ್ಸ್ ಆರಂಭದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಜೈಸ್ವಾಲ್ 73 ಎಸೆತಗಳಲ್ಲಿ ಮೊದಲ 35 ರನ್ ಗಳಿಸಿದರು. ಇದಾದ ನಂತರ ಬೌಂಡರಿ ಹಾಗೂ ಸಿಕ್ಸರ್’ಗಳ ಸುರಿಮಳೆ ಸುರಿಸಿದ ಅವರು, ಕೊನೆಯ 75 ರನ್’ಗಳನ್ನು ಕೇವಲ 49 ಎಸೆತಗಳಲ್ಲಿ ಪೂರ್ಣಗೊಳಿಸಿದರು.
IND vs ENG 3rd Test: ರಾಜ್’ಕೋಟ್ ಟೆಸ್ಟ್ ಪಂದ್ಯದ ಮೂರನೇ ದಿನ, ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ಸೃಷ್ಟಿಸಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಈ ಬ್ಯಾಟ್ಸ್’ಮನ್ ಮತ್ತೊಂದು ಶತಕವನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. 5 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ತಮ್ಮ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಅಂದಹಾಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಇದು ಅವರ ಮೂರನೇ ಶತಕವಾಗಿದ್ದು, ಜೈಸ್ವಾಲ್ ಈ ಶತಕ ಪೂರೈಸಲು 122 ಎಸೆತಗಳನ್ನು ಎದುರಿಸಿದ್ದಾರೆ.
ಇದನ್ನೂ ಓದಿ: “ಅಶ್ವಿನ್ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾನೆ”- ಇಂಗ್ಲೆಂಡ್ ಮಾಜಿ ಆಟಗಾರ ಆರೋಪ
ಯಶಸ್ವಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್ ಅನ್ನು ನಿಧಾನವಾಗಿ ಆರಂಭಿಸಿದ್ದರು. ತಮ್ಮ ಇನ್ನಿಂಗ್ಸ್ ಆರಂಭದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಜೈಸ್ವಾಲ್ 73 ಎಸೆತಗಳಲ್ಲಿ ಮೊದಲ 35 ರನ್ ಗಳಿಸಿದರು. ಇದಾದ ನಂತರ ಬೌಂಡರಿ ಹಾಗೂ ಸಿಕ್ಸರ್’ಗಳ ಸುರಿಮಳೆ ಸುರಿಸಿದ ಅವರು, ಕೊನೆಯ 75 ರನ್’ಗಳನ್ನು ಕೇವಲ 49 ಎಸೆತಗಳಲ್ಲಿ ಪೂರ್ಣಗೊಳಿಸಿದರು.
ಇದನ್ನೂ ಓದಿ: ಅನುಷ್ಕಾಗೂ ಮೊದಲು ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಕೊಹ್ಲಿ! ಅದ್ರಲ್ಲಿ ಒಬ್ಬಳು ಕನ್ನಡದ ಹೆಸರಾಂತ ನಟಿ
ಭಾರತಕ್ಕೆ ಬೃಹತ್ ಮುನ್ನಡೆ:
ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್’ನಿಂದಾಗಿ ಭಾರತ ಈ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದೆ. ಸುದ್ದಿ ಬರೆಯುವ ಹೊತ್ತಿಗೆ ಇನಿಂಗ್ಸ್’ನ 43 ಓವರ್’ಗಳು ಮುಗಿದಿದ್ದವು. ಯಶಸ್ವಿ 104 ರನ್ ಮತ್ತು ಶುಭ್ಮನ್ 56 ರನ್ ಗಳಿಸಿ ಕ್ರೀಸ್’ನಲ್ಲಿದ್ದರು. ಭಾರತ 1 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿದೆ ಎಂಬುದು ಗಮನಾರ್ಹ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ