ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಟಿ -20 ಸರಣಿಯನ್ನು 3-2ರಿಂದ ಗೆದ್ದ ನಂತರ ವಿರಾಟ್ ಕೊಹ್ಲಿ (Virat Kohli) ಪಡೆ ಏಕದಿನ ಸರಣಿ ಬಗ್ಗೆ ಬಹಳ ಉತ್ಸುಕವಾಗಿದೆ. ಈಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಟೀಮ್ ಇಂಡಿಯಾ (Team India) ಪುಣೆ ತಲುಪಿದೆ.


COMMERCIAL BREAK
SCROLL TO CONTINUE READING

ಪಿಪಿಇ ಕಿಟ್‌ಗಳಲ್ಲಿ ಸಿಬ್ಬಂದಿ ಸದಸ್ಯರು:
ಈ ಮಧ್ಯೆ ಬಿಸಿಸಿಐ (BCCI) ತನ್ನ ಟ್ವಿಟ್ಟರ್ ಖಾತೆ ಟೀಮ್ ಇಂಡಿಯಾದ ಹಾರಾಟದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್  (Ahmedabad) ನಿಂದ ಪುಣೆ (Pune) ಗೆ ಪ್ರಯಾಣಿಸುತ್ತಿರುವ ಭಾರತೀಯ ಕ್ರಿಕೆಟಿಗರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದಲ್ಲದೆ ಈ ವೀಡಿಯೊದಲ್ಲಿ ವಿಮಾನದ ಸಿಬ್ಬಂದಿ ಪಿಪಿಇ ಕಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


Ind Vs Eng: ODI ಸರಣಿಗೂ ಮುನ್ನ England ತಂಡಕ್ಕೆ ಭಾರಿ ಹಿನ್ನಡೆ!


ಮಹಾರಾಷ್ಟ್ರದಲ್ಲಿ ಕರೋನಾ ಆತಂಕ :
ಭಾನುವಾರ, ಮಹಾರಾಷ್ಟ್ರದಲ್ಲಿ ಕೋವಿಡ್ -19 (Covid 19) ನ 30,535 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಇದುವರೆಗೆ ದಾಖಲಾದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.


Ind vs Eng: 4 ಓವರ್‌ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma


ಪ್ರೇಕ್ಷಕರಿಲ್ಲದೇ ನಡೆಯಲಿರುವ ಪಂದ್ಯ: 
ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮಹಾರಾಷ್ಟ್ರದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿರುವ  ಭಾರತ ಮತ್ತು ಇಂಗ್ಲೆಂಡ್  (IND vs ENG) ನಡುವಿನ 3 ಏಕದಿನ ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ಯಾವುದೇ ಪ್ರೇಕ್ಷಕರು ಹಾಜರಾಗಲು ಅನುಮತಿ ನೀಡಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.