Impact of Shreyas Iyer's Form on Team India : ಹೈದರಾಬಾದ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಹಿನ್ನಡೆಯಲ್ಲಿದ್ದರೂ,ಇಂಗ್ಲೆಂಡ್ ಭಾರತವನ್ನು 28 ರನ್‌ಗಳಿಂದ ಸೋಲಿಸಿತು. ಈ ಸೋಲು ಭಾರತದ ಅಭಿಮಾನಿಗಳನ್ನು ಘಾಸಿಗೊಳಿಸಿದೆ. ಟೀಂ ಇಂಡಿಯಾದ ಈ ಸೋಲಿನ ನಂತರ ಶ್ರೇಯಸ್ ಅಯ್ಯರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಭಾರತ ಟೆಸ್ಟ್ ತಂಡದ ಪ್ಲೇಯಿಂಗ್ ಹನ್ನೊಂದರಲ್ಲಿ ಶ್ರೇಯಸ್ ಅಯ್ಯರ್ ಇನ್ನು ಮುಂದೆ ಸ್ಥಾನ  ಪಡೆಯುತ್ತಾರೆ ಎಂದು ಹೇಳುವುದು ಸಾಧ್ಯವಿಲ್ಲ. ಇವರು ತಮ್ಮ ಕೊನೆಯ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ 40 ರನ್‌ಗಳ ಗಡಿ ದಾಟಿಯೇ ಇಲ್ಲ.  


COMMERCIAL BREAK
SCROLL TO CONTINUE READING

ಟೆಸ್ಟ್‌ ಗೆ ಅಯ್ಯರ್ ವಿದಾಯ ಹೇಳುವ ಸಮಯ ಸನ್ನಿಹಿತ :    
ಕಳಪೆ ಪ್ರದರ್ಶನದ ಹೊರತಾಗಿಯೂ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಯ್ಯರ್ ಗೆ ನಿರಂತರವಾಗಿ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ ನೀಡಿರುವ ದೊಡ್ಡ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ಇದರಿಂದಾಗಿ ಟೆಸ್ಟ್ ತಂಡದಲ್ಲಿ ಇನ್ನು ಮುಂದೆ ಅವರಿಗೆ ಸ್ಥಾನ ನೀಡಬೇಕೆ ಎನ್ನುವ ಪ್ರಶ್ನೆಗಳು ಎದ್ದಿವೆ. ಹೈದರಾಬಾದ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 35 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 13 ರನ್ ಗಳಿಸಿ ಶ್ರೇಯಸ್ ಅಯ್ಯರ್ ಔಟಾದರು. ಶ್ರೇಯಸ್ ಅಯ್ಯರ್ ಭಾರತದ ಮಧ್ಯಮ ಕ್ರಮಾಂಕದ ದೊಡ್ಡ ದೌರ್ಬಲ್ಯವಾಗಿ ಹೊರಹೊಮ್ಮಿದ್ದಾರೆ. 


ಇದನ್ನೂ ಓದಿ : ಟಾಮ್ ಹಾರ್ಟ್ಲಿ ಕೈಚಳಕಕ್ಕೆ ಟೀಮ್ ಇಂಡಿಯಾ ಕಂಗಾಲು, ಇಂಗ್ಲೆಂಡ್ ಗೆ 28 ರನ್ ಗಳ ರೋಚಕ ಜಯ 


ಎಚ್ಚರಿಕೆ ನೀಡುತ್ತಿದೆ ಕಳಪೆ ಪ್ರದರ್ಶನ  :
5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ವೈಫಲ್ಯದಿಂದಾಗಿ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಕಡೆ ಮುಖ ಮಾಡುವಂತಾಯಿತು.ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೇಜವಾಬ್ದಾರಿ ಆಟ ಪ್ರದರ್ಶನ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೇಯಸ್ ಅಯ್ಯರ್ ಕಳೆದ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 29*, 4, 12, 0, 26, 31, 6, 0, 4*, 35 ಮತ್ತು 13 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಅವಕಾಶಕ್ಕಾಗಿ ಕಾಯುತ್ತಿದ್ದು, ಕಳಪೆ ಪ್ರದರ್ಶನ ಇದೀಗ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನಕ್ಕೆ ಎಚ್ಚರಿಕೆ ನೀಡುವಂತಾಗಿದೆ.  


ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ರಜತ್ ಪಾಟಿದಾರ್ ಅರ್ಹ : 
ರಜತ್ ಪಾಟಿದಾರ್ ಇತ್ತೀಚೆಗೆ ದೇಶೀಯ ಕ್ರಿಕೆಟ್ ಮತ್ತು ಇಂಗ್ಲೆಂಡ್ ಲಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಬಹುದು. ರಜತ್ ಪಾಟಿದಾರ್  ಶ್ರೇಯಸ್ ಅಯ್ಯರ್‌ಗಿಂತ ಬಲಿಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಜತ್ ಪಾಟಿದಾರ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರೆಂದೇ ಹೇಳಲಾಗುತ್ತಿದೆ. ರಜತ್ ಪಾಟಿದಾರ್ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.97 ಸರಾಸರಿಯಲ್ಲಿ 4000 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್ ಪ್ರಥಮ ದರ್ಜೆ ಪಂದ್ಯಗಳಲ್ಲಿ 12 ಶತಕ ಮತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ.


ಇದನ್ನೂ ಓದಿ : Hardik Pandya: ಟೀಂ ಇಂಡಿಯಾಗೆ ಮತ್ತೆ ಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ! ಈ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.