ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾದ ವಿರುದ್ಧ 28 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ಸಿಕ್ಕು ಕೇವಲ 246 ರನ್ ಗಳಿಗೆ ಸರ್ವಪತನವನ್ನು ಕಂಡಿತು.ಇದೆ ವೇಳೆ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ರವಿಂದ್ರ ಜಡೇಜಾ 87,ಕೆ.ಎಲ್.ರಾಹುಲ್ 86, ಹಾಗೂ ಯಶಸ್ವಿ ಜೈಶ್ವಾಲ್ ಅವರ 80 ರನ್ ಗಳ ನೆರವಿನಿಂದ 436 ರನ್ ಗಳನ್ನು ಗಳಿಸಿತು.
ಇದಕ್ಕೆ ಉತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ಈ ಇನಿಂಗ್ಸ್ ನಲ್ಲಿ ಮಾಡದೆ ಎಚ್ಚರಿಕೆ ಆಟಕ್ಕೆ ಮುಂದಾಯಿತು.ಇಂಗ್ಲೆಂಡ್ ತಂಡದ ಪರವಾಗಿ ಒಲ್ಲಿ ಪೋಪ್ ಅವರು 196 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.ಇದರ ಪರಿಣಾಮವಾಗಿ ಅಂತಿಮವಾಗಿ ಇಂಗ್ಲೆಂಡ್ ತಂಡವು 420 ರನ್ ಗಳನ್ನು ಗಳಿಸಿತು.
Two young stars sizzled in a remarkable win for England in Hyderabad ✨#WTC25 | #INDvENG Report 👇https://t.co/wDTVIPlCWL
— ICC (@ICC) January 28, 2024
ಇಂಗ್ಲೆಂಡ್ ತಂಡವು ನೀಡಿದ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಟಾಮ್ ಹಾರ್ಟ್ಲಿ ಆರಂಭಿಕ ಆಘಾತವನ್ನು ನೀಡಿದರು.ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಹಾಗೂ ಯಶಸ್ವಿ ಜೈಸ್ವಾಲ್ ರಂತಹ ಘಟಾನುಘಟಿಗಳ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಗೆಲುವಿನ ಮುನ್ನಡಿಯನ್ನು ಬರೆದರು.ಅಚ್ಚರಿ ಎಂದರೆ ಈ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಯಾವ ಆಟಗಾರನು ಸಹಿತ 40 ರ ಗಡಿ ದಾಟುವಲ್ಲಿ ವಿಫಲರಾದರು.
ಇದರ ಪರಿಣಾಮವಾಗಿ ಟೀಮ್ ಇಂಡಿಯಾ ಕೇವಲ 202 ರನ್ ಗಳಿಗೆ ಸರ್ವಪತನವನ್ನು ಕಾಣುವ ಮೂಲಕ 28 ರನ್ ಗಳಿಂದ ಸೋಲನ್ನು ಅನುಭವಿಸಿತು. ಇನ್ನೊಂದೆಡೆಗೆ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಟಾಮ್ ಹಾರ್ಟ್ಲಿ 7 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.