ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಕ್ಕಾಗಿ ಗುಜರಾತ್ ಸರ್ಕಾರ ಭಾನುವಾರ ಪೆಡಲರ್ ಭಾವಿನಾ ಪಟೇಲ್ ಗೆ 3 ಕೋಟಿ ರೂ.ಬಹುಮಾನ ಘೋಷಿಸಿದೆ.


COMMERCIAL BREAK
SCROLL TO CONTINUE READING

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸುಂಧಿಯಾ ಗ್ರಾಮದ ಪಟೇಲ್, ಭಾನುವಾರ ತನ್ನ ಮೊದಲ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 0-3 ಅಂತರದಿಂದ ಚೀನಾದ ಯಿಂಗ್ ಜೌ ವಿರುದ್ಧ ಸೋಲನ್ನು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.


ಇದನ್ನೂ ಓದಿ: India vs Eng 3rd Test: ಭಾರತ ಈ ಟೆಸ್ಟ್ ಪಂದ್ಯದಲ್ಲಿ ಸೋಲಲಿದೆ-ಮೈಕಲ್ ವಾನ್


"ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಗಳು ಭಾವಿನಾ ಪಟೇಲ್ (Bhavina Patel) ಅವರನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ" ಎಂದು ಮುಖ್ಯಮಂತ್ರಿ ಕಚೇರಿ ಟಿಪ್ಪಣಿಯಲ್ಲಿ ತಿಳಿಸಿದೆ.


ತನ್ನ ಕ್ರೀಡಾ ಕೌಶಲ್ಯದಿಂದ ಜಾಗತಿಕ ಮಟ್ಟದಲ್ಲಿ ಗುಜರಾತ್ ಮತ್ತು ಭಾರತವನ್ನು ಹೆಮ್ಮೆ ಪಡುವಂತೆ ಮಾಡಲು ರಾಜ್ಯ ಸರ್ಕಾರದ 'ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೋತ್ಸಾಹನ್ ಪುರಸ್ಕಾರ ಯೋಜನೆ' ಅಡಿಯಲ್ಲಿ ಪಟೇಲರಿಗೆ ಪ್ರೋತ್ಸಾಹಕವಾಗಿ 3 ಕೋಟಿ ಬಹುಮಾನವನ್ನು ಸಿಎಂ ಘೋಷಿಸಿದ್ದಾರೆ ಎಂದು ಅದು ಹೇಳಿದೆ.


12 ತಿಂಗಳ ಮಗುವಾಗಿದ್ದಾಗ ಪೋಲಿಯೊಗೆ ಒಳಗಾದ ಪಟೇಲ್, ಶನಿವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾದ 7-11 11-7 11-4 9-11 11-8 ರಲ್ಲಿ ವಿಶ್ವದ 3 ನೇ ಶ್ರೇಯಾಂಕಿತ ಮಿಯಾವೊ ಜಾಂಗ್ ಅವರನ್ನು ಸೋಲಿಸಿದ್ದರು. ಆದರೆ, ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಅವರು ಚೀನಾದ ಜೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಚಿನ್ನದ ಪದಕ ಸೋತರು.ವಿಶ್ವದ ನಂಬರ್ ಒನ್ ಜೌ ಯಿಂಗ್ ಕೇವಲ 19 ನಿಮಿಷಗಳಲ್ಲಿ ಭಾವಿನ ಪಟೇಲ್ ಅವರನ್ನು 3-0 (11-7, 11-5, 11-6) ನೇರ ಸೆಟ್ ಗಳಲ್ಲಿ ಮಣಿಸಿದರು.


ಇದನ್ನೂ ಓದಿ: Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್


ಏತನ್ಮಧ್ಯೆ, ಭಾವಿನಾ ಈ ಕ್ರೀಡಾಕೂಟದಲ್ಲಿ ಭಾರತದ ಮೊದಲ ಪದಕ ವಿಜೇತರಾದರು.ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಜೊತೆಗೆ ಪಿಸಿಐ ಮುಖ್ಯಸ್ಥೆ ದೀಪಾ ಮಲಿಕ್ ನಂತರ ಈ ಸಾಧನೆ ಮಾಡಿದ ಎರಡನೇ ಮಹಿಳಾ ಕ್ರೀಡಾಪಟು ಎನ್ನುವ ಶ್ರೇಯಕ್ಕೆ ಪಾತ್ರರಾದರು.2016 ರ ರಿಯೋದಲ್ಲಿ ಮಹಿಳೆಯರ ಶಾಟ್ ಪುಟ್ ನಲ್ಲಿ ಮಲಿಕ್ ಅವರು ಬೆಳ್ಳಿ ಗೆದ್ದಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ