Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್

Ind Vs Eng Test Series - ಇತ್ತೀಚಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಫಾರ್ಮ್ ಕಳವಳಕಾರಿ ಸಂಗತಿಯಾಗಿದೆ. ವಿರಾಟ್ ನವೆಂಬರ್ 2019 ರಿಂದ ಶತಕ ಗಳಿಸಿಲ್ಲ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ, ಅವರು ಮತ್ತೊಮ್ಮೆ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಎಸೆತಗಳನ್ನು ಎದುರಿಸುವಲ್ಲಿ ಹೆಣಗಾಡುತ್ತಿರುವುದು ಕಂಡುಬಂದಿದೆ. 

Written by - Nitin Tabib | Last Updated : Aug 27, 2021, 01:28 PM IST
  • ಸತತವಾಗಿ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿಗೆ ಗಾವಸ್ಕರ್ ಸಲಹೆ.
  • ವಿರಾಟ್ ಕೂಡಲೇ ಸಚಿನ್ ತೆಂಡೂಲ್ಕರ್ ಜೊತೆ ಮಾತನಾಡಬೇಕು.
  • 2003 ರಲ್ಲಿ ಸಿಡ್ನಿಯಲ್ಲಿ ಸಚಿನ್ ಮಾಡಿದ್ದನ್ನೇ ವಿರಾಟ್ ಪುನರಾವರ್ತಿಸಬೇಕು.
Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್ title=
Ind Vs Eng Test Series (File Photo)

Ind Vs Eng Test Series - ಇತ್ತೀಚಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಫಾರ್ಮ್ ಕಳವಳಕಾರಿ ಸಂಗತಿಯಾಗಿದೆ. ವಿರಾಟ್ ನವೆಂಬರ್ 2019 ರಿಂದ ಶತಕ ಗಳಿಸಿಲ್ಲ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ, ಅವರು ಮತ್ತೊಮ್ಮೆ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಎಸೆತಗಳನ್ನು ಎದುರಿಸುವಲ್ಲಿ ಹೆಣಗಾಡುತ್ತಿರುವುದು ಕಂಡುಬಂದಿದೆ. ಲೀಡ್ಸ್‌ ನಲ್ಲಿರುವ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಸಿ ಔಟಾಗಿದ್ದಾರೆ. ಹೀಗಿರುವಾಗ ಭಾರತದ ಮಾಜಿ ನಾಯಕ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್ ಗಳಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್ (Sunil Gavaskar) ವಿರಾಟ್‌ಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ಸಿಡ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ್ದನ್ನು ವಿರಾಟ್ ಮಾಡಬೇಕು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-IND vs ENG 3rd Test: ಮೊಹಮ್ಮದ್ ಸಿರಾಜ್ ಮೇಲೆ ಚೆಂಡು ಎಸೆದು ಇಂಗ್ಲೆಂಡ್ ಪ್ರೇಕ್ಷಕರ ದುರ್ವರ್ತನೆ..!

'ಸೋನಿ ಸ್ಪೋರ್ಟ್ಸ್' ಚಾನಲ್ ನಲ್ಲಿ ನಡೆದ ಚರ್ಚೆಯೊಂದರಲ್ಲಿ ಮಾತನಾಡಿರುವ ಸುನೀಲ್ ಗಾವಸ್ಕರ್, 2003 ರಲ್ಲಿ ಸಿಡ್ನಿಯಲ್ಲಿ ಸಚಿನ್ (Sachin Tendulkar) ಮಾಡಿದ್ದನ್ನೇ, ವಿರಾಟ್ ಕೊಹ್ಲಿ ಕೂಡ ಪುನರಾವರ್ತಿಸಬೇಕು ಎಂದಿದ್ದಾರೆ.  "ವಿರಾಟ್ (Virat Kohli) ಶೀಘ್ರದಲ್ಲೇ ಸಚಿನ್ ತೆಂಡೂಲ್ಕರ್ ಜೊತೆಗೆ ದೂರವಾಣಿಯಲ್ಲಿ ಮಾತನಾಡಬೇಕು ಮತ್ತು ಸಚಿನ್ ಸಿಡ್ನಿಯಲ್ಲಿ ಮಾಡಿದ ಸಂಗತಿಯನ್ನು ವಿರಾಟ್ ಕೂಡ ಮಾಡಬೇಕು" ಎಂದಿದ್ದಾರೆ. ನಾನು ಕವರ್ ಡ್ರೈವ್‌ಗಳನ್ನು ಆಡುವುದಿಲ್ಲ ಎಂದು ಅವನು ಸ್ವತಃ ಹೇಳಿಕೊಳ್ಳಬೇಕು. ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ 10,000 ರನ್ ಗಡಿ ದಾಟಿದ ಗವಾಸ್ಕರ್, ಇದು ನನ್ನ ಪಾಲಿಗೆ ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ವಿರಾಟ್ ಕೊಹ್ಲಿ ‘ಬ್ಲ್ಯಾಕ್ ವಾಟರ್’ ಕುಡಿಯುತ್ತಾರಂತೆ! ಇದರ ಬೆಲೆ ಎಷ್ಟು ಗೊತ್ತಾ?

"ಇದು ನನ್ನ ಪಾಲಿಗೆ ಚಿಂತೆ ಹೆಚ್ಚುಸುವ ವಿಷಯವಾಗಿದೆ. ಏಕೆಂದರೆ ವಿರಾಟ್ ಐದನೇ, ಆರನೇ, ಏಳನೇ ಬಿಡಿ ಎಂಟನೆ ಸ್ಟಂಪ್ ಲೈನ್ ನಲ್ಲಿ ಬರುತ್ತಿರುವ ಚೆಂಡಿಗೆ ತಮ್ಮ ವಿಕೆಟ್ ಒಪ್ಪಿಸುತ್ತಿದ್ದಾರೆ. 2014ರಲ್ಲಿಯೂ ಕೂಡ ವಿರಾಟ್ ಆಫ್ ಸ್ಟಂಪ್ ಬೌಲಿಗೆ ಔಟಾಗುತ್ತಿದ್ದರು" ಎಂದು ಗಾವಸ್ಕರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಈ ಸರಣಿಯ ಮೊದಲ ಟೆಸ್ಟ್ ನಲ್ಲಿ ಗೋಲ್ಡನ್ ಡಕ್ ಗೆ ಬಲಿಯಾಗಿದ್ದರು. ಎರಡನೇ ಟೆಸ್ಟ್ ನಲ್ಲಿ(Ind Vs Eng Test) ಅವರು ಕ್ರಮವಾಗಿ 42 ಹಾಗೂ 20 ರನ್ ಗಳಿಸಿದ್ದಾರೆ.

ಇದನ್ನೂ ಓದಿ-IND vs ENG: ಮೊಹಮ್ಮದ್ ಸಿರಾಜ್ ‘ಸಿಗ್ನೇಚರ್ ಸ್ಟೈಲ್’ ನ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News