Tokyo Paralympics : ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ ಪದಕ ಖಚಿತ, ಟೇಬಲ್ ಟೆನಿಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ Bhavina Patel

ಅಹಮದಾಬಾದ್‌ನ ಭಾವಿನಾ ಪಟೇಲ್,  (Bhavina Patel) 2016 ರಿಯೊ ಪ್ಯಾರಾಲಿಂಪಿಕ್  (Paralympics) ಚಿನ್ನದ ಪದಕ ವಿಜೇತ ಸೆರ್ಬಿಯಾದ ಬೋರಿಸ್ಲಾವಾ ಪೆರಿಚ್ ರಾಂಕೋವಿಚ್ ಅವರನ್ನು ನೇರ ಗೇಮ್‌ಗಳಲ್ಲಿ 3-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.  

Written by - Ranjitha R K | Last Updated : Aug 27, 2021, 07:23 PM IST
  • ಟೋಕಿಯೊ ಪ್ಯಾರಾಲಿಂಪಿಕ್ ಒಲಿಂಪಿಕ್ಸ್ 2021
  • ಇತಿಹಾಸ ಸೃಷ್ಟಿಸಿದ ಭಾರತದ ಭಾವಿನ ಪಟೇಲ್
  • ಮಹಿಳಾ ಟೇಬಲ್ ಟೆನಿಸ್‌ನ ಸೆಮಿಫೈನಲ್‌ನಲ್ಲಿ ಪ್ರವೇಶ
Tokyo Paralympics : ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ ಪದಕ ಖಚಿತ, ಟೇಬಲ್ ಟೆನಿಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ Bhavina Patel title=
Bhavina Patel (file photo)

ಟೋಕಿಯೊ:  ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಒಲಿಂಪಿಕ್ಸ್‌ನಲ್ಲಿ ಭಾರತದ ಭಾವಿನಾ ಪಟೇಲ್ (Bhavina Patel) ಅದ್ಭುತ ಸಾಧನೆ ಮಾಡಿದ್ದಾರೆ. ಭಾವಿನಾ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್ ಕ್ಲಾಸ್ 4 ರ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿದ್ದಾರೆ. 

ಪ್ಯಾರಾಲಿಂಪಿಕ್ ನಲ್ಲಿ ಭಾರತದ ಪದಕ ಖಚಿತ:
ಅಹಮದಾಬಾದ್‌ನ ಭಾವಿನಾ ಪಟೇಲ್,  (Bhavina Patel) 2016 ರಿಯೊ ಪ್ಯಾರಾಲಿಂಪಿಕ್  (Paralympics) ಚಿನ್ನದ ಪದಕ ವಿಜೇತ ಸೆರ್ಬಿಯಾದ ಬೋರಿಸ್ಲಾವಾ ಪೆರಿಚ್ ರಾಂಕೋವಿಚ್ ಅವರನ್ನು ನೇರ ಗೇಮ್‌ಗಳಲ್ಲಿ 3-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.  19 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾವಿನಾ 11-5, 11-6, 11-7ರಲ್ಲಿ ರಾಂಕೋವಿಚ್ ಅವರನ್ನು ಸೋಲಿಸಿದ್ದಾರೆ. 

 

ಇದನ್ನೂ ಓದಿ: India vs Eng 3rd Test: ಭಾರತ ಈ ಟೆಸ್ಟ್ ಪಂದ್ಯದಲ್ಲಿ ಸೋಲಲಿದೆ-ಮೈಕಲ್ ವಾನ್

ಪ್ಯಾರಾಲಿಂಪಿಕ್ (Tokyo Paralympics) ಕ್ರೀಡಾಕೂಟದ ಸೆಮಿಫೈನಲ್‌ಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಆಗಿದ್ದು,   ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಚೀನಾದ ಜಾಂಗ್ ಮಿಯಾ ಅವರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್ ಪ್ರವೇಶಿಸಿದ  ಭಾವಿನಾ  :
ಭಾವಿನ ಪಟೇಲ್ ಎ ಗುಂಪಿನ ಪಂದ್ಯದಲ್ಲಿ ಚೀನಾದ ಜೊವು ಯಿಂಗ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನಂತರ, ಅವರು ಉತ್ತಮ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಎರಡು ನಾಕೌಟ್ ಪಂದ್ಯಗಳನ್ನು ಗೆದ್ದು, ಪದಕ ಖಚಿತಪಡಿಸಿದ್ದಾರೆ. 

ರೌಂಡ್ -16 ರಲ್ಲಿ 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾವಿನಾ ಪಟೇಲ್ ಅವರು, ಬ್ರೆಜಿಲ್‌ನ ಜಿಯೋಸಿ ಡಿ ಒಲಿವೇರಿಯಾ ಅವರನ್ನು 12-10, 13-11, 11-6ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು.

ಇದನ್ನೂ ಓದಿ: Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್

ಟೋಕಿಯೊ ಪ್ಯಾರಾಲಿಂಪಿಕ್ ಟೇಬಲ್ ಟೆನಿಸ್‌ನಲ್ಲಿ (Table tennies)ಕಂಚಿನ ಪದಕದ ಪ್ಲೇ-ಆಫ್ ಪಂದ್ಯ ಇರುವುದಿಲ್ಲ ಮತ್ತು ಸೆಮಿಫೈನಲ್‌ನಲ್ಲಿ ಸೋತ ಇಬ್ಬರೂ ಆಟಗಾರರು ಕಂಚಿನ ಪದಕಗಳನ್ನು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News