ನವದೆಹಲಿ: ಭಾರತದ ಮಹಿಳಾ ಕ್ರಿಕೆಟಿಗರಿಗೆ ಇನ್ಮುಂದೆ ಪುರುಷ ಕ್ರಿಕೆಟ್ ಆಟಗಾರರಿಗೆ ನೀಡುವಂತೆಯೇ ಸಮಾನ ಅಂತರಾಷ್ಟ್ರೀಯ ಪಂದ್ಯ ಶುಲ್ಕವನ್ನು ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ ಸಗಣಿ ಎರೆಚಾಟ-ಅಶ್ಲೀಲ ಬೈದಾಟ.. ತಮಿಳುನಾಡಲ್ಲಿ ಕನ್ನಡಿಗರ ಸಂಭ್ರಮ!!


ಈ ಕುರಿತಾಗಿ ಟ್ವೀಟ್ ಮಾಡಿರುವ ಜಯ್ ಶಾ “ತಾರತಮ್ಯವನ್ನು ತೊಡೆದುಹಾಕುವ ಮೊದಲ ಪ್ರಯತ್ನದ ಭಾಗವಾಗಿ ನಾವು ಈಗ ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ಶುಲ್ಕ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಇದರ ಅನ್ವಯ ಪುರುಷರು ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ಶುಲ್ಕ ಇರಲಿದೆ. ಆ ಮೂಲಕ ಈಗ ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ತೆರೆದುಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.


UK Prime Minister: ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿ ರಿಷಿ ಸುನಕ್‌ ಆಯ್ಕೆ


ಈ ವರ್ಷದ ಆರಂಭದಲ್ಲಿ, ನ್ಯೂಜಿಲೆಂಡ್ ಕೂಡ ಅಲ್ಲಿನ ಆಟಗಾರರ ಸಂಘದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮಹಿಳಾ ಕ್ರಿಕೆಟಿಗರು ಪುರುಷರ ಆಟಗಾರರಷ್ಟೇ ಗಳಿಸಲು ಅನುವು ಮಾಡಿಕೊಟ್ಟಿತು, ಅದೇ ರೀತಿಯಾಗಿ ಆಸ್ಟ್ರೇಲಿಯಾ ಸಹ ಲಿಂಗ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಹೆಜ್ಜೆಯನ್ನಿರಿಸಿದೆ.


ಈಗ ಬಿಸಿಸಿಐನ ಈ ಐತಿಹಾಸಿಕ ಘೋಷಣೆಗೆ ಪ್ರತ್ರಿಕ್ರಿಯಿಸಿದ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, “ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ನಿಜವಾಗಿಯೂ ಕೆಂಪು ಅಕ್ಷರದಲ್ಲಿ ಬರೆದಿಡಬೇಕಾಗಿರುವ ದಿನವಾಗಿದ್ದು, ಮಹಿಳೆಯರು ಮತ್ತು ಪುರುಷರಿಗೆ ವೇತನ ಸಮಾನತೆಯನ್ನು ಘೋಷಿಸಲಾಗಿದ್ದು, ಇದಕ್ಕಾಗಿ ಬಿಸಿಸಿಐ ಮತ್ತು ಜಯ್ ಶಾ ಅವರಿಗೆ ಧನ್ಯವಾದಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.