ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಕನಿಷ್ಠ ಮೊತ್ತವನ್ನು ದಾಖಲಿಸಿದ ಕುಖ್ಯಾತಿಗೆ ಪಾತ್ರವಾದ ಭಾರತ ತಂಡದ ಪ್ರದರ್ಶನಕ್ಕೆ ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ.


COMMERCIAL BREAK
SCROLL TO CONTINUE READING

Australia vs India, 3rd T20I: ಕೊಹ್ಲಿ ಆಟ ವ್ಯರ್ಥ,ಆಸಿಸ್ ಗೆ 12 ರನ್ ಗಳ ರೋಚಕ ಗೆಲುವು


ಈಗ ಭಾರತ ತಂಡದ ಪ್ರದರ್ಶನವನ್ನು ಟ್ರೋಲ್ ಮಾಡಿರುವ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಯಾವುದೇ ಬ್ಯಾಟ್ಸ್‌ಮನ್‌ಗೆ ಡಬಲ್ ಅಂಕಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಯಾರೂ ನೆನಪಿಟ್ಟುಕೊಳ್ಳಲು ಇಷ್ಟಪಡದ ಒಟಿಪಿಗೆ ಹೋಲಿಸುವ ಮೂಲಕ ತಂಡದ ಕೆಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ಟ್ರೋಲ್ ಮಾಡಿದ್ದಾರೆ.'ಇದನ್ನು ಮರೆಯುವ ಒಟಿಪಿ 49204084041 ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.


Australia vs India, 1st Test: ರಾತ್ರಿ ಕಾವಲುಗಾರನಾದ ಬುಮ್ರಾ, ಹೇಗಿತ್ತು ಉಳಿದ ಆಟಗಾರ ಪ್ರತಿಕ್ರಿಯೆ...!


ಮೊದಲ ಇನಿಂಗ್ಸ್ ನಲ್ಲಿ 244 ರನ್ ಗಳನ್ನು ಗಳಿಸಿದ್ದ ಭಾರತ ತಂಡವು ಆಶ್ವಿನ್ ಹಾಗೂ ಉಮೇಶ್ ಯಾದವ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಮೂಲಕ ಆಸಿಸ್ ತಂಡವನ್ನು 191 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ಮೊದಲ ಇನಿಂಗ್ಸ್ ಮುನ್ನಡೆಯನ್ನು ಸಾಧಿಸಿತು. ಎರಡನೇ ದಿನದಾಂತ್ಯಕ್ಕೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡವು 9 ರನ್ ಗಳಾಗುವಷ್ಟರಲ್ಲಿ 1 ವಿಕೆಟ್ ನ್ನು ಕಳೆದುಕೊಂಡಿತು. ಮೂರನೇ ದಿನಕ್ಕೆ ಭಾರತದ ಇನ್ನಿಂಗ್ಸ್ 36/9 ಕ್ಕೆ ಕೊನೆಗೊಂಡಿತು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾವು 90 ರನ್‌ಗಳ ಸುಲಭ ಗುರಿಯನ್ನು ಪಡೆದುಕೊಂಡಿತು. ಈ ಗುರಿಯನ್ನು ಆಸಿಸ್ ತಂಡವು ಎರಡು ವಿಕೆಟ್ ಕಳೆದುಕೊಳ್ಳುವುದರ ಮೂಲಕ 93 ರನ್ ಗಳನ್ನು ಗಳಿಸಿತು.