Australia vs India, 1st Test: ರಾತ್ರಿ ಕಾವಲುಗಾರನಾದ ಬುಮ್ರಾ, ಹೇಗಿತ್ತು ಉಳಿದ ಆಟಗಾರ ಪ್ರತಿಕ್ರಿಯೆ...!

ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಕಬಳಿಸಿ ಬೌಲಿಂಗ್ ಮೂಲಕ ಮಿಂಚಿದ ಜಸ್ಪ್ರಿತ್ ಬುಮ್ರಾ ಏಕಾಏಕಿ ಮೂರನೇ ಕ್ರಮಾಂಕದಲ್ಲಿ ರಾತ್ರಿ ಕಾವಲುಗಾರನಾಗಿ ಕಣಕ್ಕೆ ಇಳಿದಿದ್ದು, ಒಂದು ಕ್ಷಣ ಎಲ್ಲರಲ್ಲಿಯೂ ಅಚ್ಚರಿ ಮೂಡಿದೆ.

Last Updated : Dec 18, 2020, 09:06 PM IST
Australia vs India, 1st Test: ರಾತ್ರಿ ಕಾವಲುಗಾರನಾದ ಬುಮ್ರಾ, ಹೇಗಿತ್ತು ಉಳಿದ ಆಟಗಾರ ಪ್ರತಿಕ್ರಿಯೆ...!  title=
Photo Courtesy: Twitter

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಕಬಳಿಸಿ ಬೌಲಿಂಗ್ ಮೂಲಕ ಮಿಂಚಿದ ಜಸ್ಪ್ರಿತ್ ಬುಮ್ರಾ ಏಕಾಏಕಿ ಮೂರನೇ ಕ್ರಮಾಂಕದಲ್ಲಿ ರಾತ್ರಿ ಕಾವಲುಗಾರನಾಗಿ ಕಣಕ್ಕೆ ಇಳಿದಿದ್ದು, ಒಂದು ಕ್ಷಣ ಎಲ್ಲರಲ್ಲಿಯೂ ಅಚ್ಚರಿ ಮೂಡಿದೆ.

 
 
 
 

 
 
 
 
 
 
 
 
 
 
 

A post shared by Team India (@indiancricketteam)

ಬುಮ್ರಾ ಬ್ಯಾಟಿಂಗ್ ಆಡಲು ತೆರಳುತ್ತಿದ್ದಾಗ ಸಹ ಆಟಗಾರ ಮಂದ ಸ್ಮಿತರಾಗಿರುವುದನ್ನು ನಾವು ಕಾಣಬಹುದು. ಪೃಥ್ವಿ ಶಾ ಅವರ ವಿಕೆಟ್ ನ್ನು ಬೇಗನೆ ಕಳೆದುಕೊಂಡ ತಕ್ಷಣ ಮೂರನೇ ಕ್ರಮಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಆಡಲು ಧಾವಿಸಿದರು. ಭಾರತ ತಂಡವು ಈಗ ಒಂದು ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ. ಕ್ರಿಸ್ ನಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮಾಯಂಕ್ ಅಗರವಾಲ್ ಆಡುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆಗೈದ ಜಸ್ಪ್ರಿತ್ ಬುಮ್ರಾ

ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಅವರು ಜಸ್ಪ್ರೀತ್ ಡ್ರಾವಿಡ್ ಮೂರನೇ ಕ್ರಮಾಂಕದಲ್ಲಿ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ #BumrahCanDoAnything ಎನ್ನುವ ಹ್ಯಾಶ್ ಟ್ಯಾಗ್ ನ್ನು ಹಾಕಿಕೊಂಡಿದ್ದಾರೆ.ಇನ್ನೊಂದೆಡೆ ಭಾರತ ಕ್ರಿಕೆಟ್ ತಂಡದ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಸೇರಿದಂತೆ ಹಲವು ಬ್ಯಾಟ್ ಹಿಡಿದಿರುವ ಬುಮ್ರಾನನ್ನು ನೋಡಿ ನಗುತ್ತಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. 

Trending News