ನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 12 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
Australia vs India, 2nd T20I: ಭಾರತಕ್ಕೆ 2-0 ಅಂತರದಲ್ಲಿ ಸರಣಿ ಗೆಲುವು
ಭಾರತ ತಂಡವು ಟಾಸ್ ಗೆದ್ದು ಆಸ್ಟ್ರೇಲಿಯಾಗೆ ಬ್ಯಾಟಿಂಗ್ ಅವಕಾಶವನ್ನು ಮಾಡಿಕೊಟ್ಟಿತು, ಆಸ್ಟ್ರೇಲಿಯಾ ತಂಡವು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳನ್ನು ಗಳಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವಾಡೆ ಕೇವಲ 53 ಎಸೆತಗಳಲ್ಲಿ 80 ರನ್ ನೀಡಿಸಿದರು.ಕೊನೆಯಲ್ಲಿ ಮ್ಯಾಕ್ಸ್ ವೆಲ್ 36 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ತಂಡದ ಮೊತ್ತ 180 ರ ಗಡಿ ದಾಟುವಲ್ಲಿ ನೆರವಾದರು.
T20 ಫಾರ್ಮ್ಯಾಟ್ ನಲ್ಲಿ ಅತ್ಯಂತ ವೇಗವಾಗಿ 1500 ರನ್ಸ್ ಗಳಿಸಿದವರ ಕ್ಲಬ್ ಸೇರಿದ ಕನ್ನಡಿಗ K.L.Rahul
Virat Kohli's luck finally runs out...
Andrew Tye gets him for 85 in the 19th over ☝️ #AUSvIND pic.twitter.com/ZNhtnfPVqR
— ICC (@ICC) December 8, 2020
186 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಮೊದಲನೇ ಓವರ್ ನಲ್ಲಿನ ಎರಡನೇ ಎಸೆತದಲ್ಲಿಯೇ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು. ಇದಾದ ನಂತರ ಕೊಹ್ಲಿ ಕೇವಲ 61 ಎಸೆತಗಳಲ್ಲಿ 85 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಗಡಿಗೆ ತಂದಿಟ್ಟಿದ್ದರು. ಆದರೆ ಕೊನೆಗೆ ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 174 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.ಆ ಮೂಲಕ ಆಸಿಸ್ ತಂಡವು ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ನಿಟ್ಟುಸಿರುವ ಬಿಟ್ಟಿತು.