Rishabh Pant ಟೀಂ ಇಂಡಿಯಾ ಕ್ಯಾಪ್ಟನ್!
ಭಾರತಕ್ಕಾಗಿ 20 ಟೆಸ್ಟ್, 18 ಏಕದಿನ ಮತ್ತು 32 ಟಿ 20 ಪಂದ್ಯಗಳನ್ನು ಆಡಿದ ರಿಷಭ್ ಪಂತ್ ಐಪಿಎಲ್ 2021 ರಲ್ಲಿ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.
ನವದೆಹಲಿ: ಐಪಿಎಲ್ 2021 ರಲ್ಲಿ ಗಾಯಗೊಂಡ ಶ್ರೇಯಸ್ ಅಯ್ಯರ್ ಬದಲಿಗೆ ರಿಷಭ್ ಪಂತ್ ಅವರಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಲಾಗಿತ್ತು. ರಿಷಬ್ ಪಂತ್ ನಾಯಕತ್ವದಲ್ಲಿ ದೆಹಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 6 ರಲ್ಲಿ ಜಯಗಳಿಸಿತು. ಸದ್ಯ ಐಪಿಎಲ್ ಪಾಯಿಂಟ್ ಟೇಬಲ್ಸ್ ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಈ ಮಧ್ಯೆ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಸ್ಪೋರ್ಟ್ಸ್‌ಸ್ಟಾರ್‌ನಲ್ಲಿ ತಮ್ಮ ಅಂಕಣದಲ್ಲಿ ರಿಷಬ್ ಪಂತ್ (Rishabh Pant) ಅವರನ್ನು ಹಾಡಿ ಹೊಗಳಿದ್ದಾರೆ. ರಿಷಭ್ ಪಂತ್ ಅವರಿಗೆ ಕಲಿಯುವ ಬಯಕೆ ಇದೆ. ನಾನು ಅವರಲ್ಲಿ ಒಂದು ಸ್ಪಾರ್ಕ್ ಅನ್ನು ನೋಡುತ್ತೇನೆ. ಅವರ ಈ ಗುಣ ಮುಂದುವರೆದರೆ ಪಂತ್ ಮುಂದೊಂದು ದಿನ ದೊಡ್ಡ ಬೆಳಕಾಗಬಹುದು. ಹೌದು, ಅವರು ತಪ್ಪುಗಳನ್ನು ಮಾಡಿದ್ದಾರೆ, ಯಾರು ತಾನೇ ತಪ್ಪು ಮಾಡುವುದಿಲ್ಲ? ಪಂತ್ ನಾಯಕತ್ವದಲ್ಲಿ ದೆಹಲಿ ಕ್ಯಾಪಿಟಲ್ಸ್ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ - BCCI: ವಿರಾಟ್ ಕೊಹ್ಲಿ ಅಂಡ್ ಟೀಂಗೆ ಬಿಗ್ ರಿಲೀಫ್ ನೀಡಿದ ಬಿಸಿಸಿಐ
ರಿಷಭ್ ಪಂತ್ ಭವಿಷ್ಯದ ನಾಯಕ:
'ರಿಷಭ್ ಪಂತ್ (Rishabh Pant) ಭವಿಷ್ಯದ ನಾಯಕ, ಇದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಬರೆದಿರುವ ಸುನೀಲ್ ಗವಾಸ್ಕರ್, ಪ್ರತಿಭೆಗೆ ತಕ್ಕ ಪ್ರತಿಫಲ ಒಂದಲ್ಲಾ ಒಂದು ದಿನ ಸಿಗಲೇಬೇಕು ಎಂದಿದ್ದಾರೆ.
ಈ ಐಪಿಎಲ್ ಋತುವಿನಲ್ಲಿ ನಾಯಕನಾಗಿ ಮಿಂಚಿದ ರಿಷಬ್ ಪಂತ್:
ಈ ಐಪಿಎಲ್ ಋತುವಿನಲ್ಲಿ ನಾಯಕನಾಗಿ ಮಿಂಚಿದ ರಿಷಭ್ ಪಂತ್ ನಾಯಕನಾಗಿ 8 ಇನ್ನಿಂಗ್ಸ್‌ಗಳಲ್ಲಿ 213 ರನ್ ಗಳಿಸಿದರೆ, ಈ ಋತುವಿನಲ್ಲಿ 2 ಬಾರಿ ಅಜೇಯರಾಗಿ ಉಳಿದಿದ್ದಾರೆ. ಈ ಸಮಯದಲ್ಲಿ ಅವರು 2 ಅರ್ಧಶತಕಗಳನ್ನು ಗಳಿಸಿದರು. ಪಂತ್ ಇದುವರೆಗೆ 76 ಐಪಿಎಲ್ ಪಂದ್ಯಗಳಲ್ಲಿ 1 ಶತಕ ಮತ್ತು 14 ಅರ್ಧಶತಕಗಳ ಸಹಾಯದಿಂದ 2292 ರನ್ ಗಳಿಸಿದ್ದಾರೆ. ಈ ಲೀಗ್‌ನಲ್ಲಿ ಅವರು 50 ಕ್ಯಾಚ್‌ಗಳು ಮತ್ತು 13 ಸ್ಟಂಪ್ ಔಟ್‌ಗಳನ್ನು ಸಹ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ - Rishabh Pant- ತಮ್ಮ 23ನೇ ವಯಸ್ಸಿಗೆ ಐಷಾರಾಮಿ ಮನೆ ನಿರ್ಮಿಸಿದ ರಿಷಭ್ ಪಂತ್
ರಿಷಭ್ ಪಂತ್ ಅವರ ಅಂತರರಾಷ್ಟ್ರೀಯ ಪ್ರದರ್ಶನದ ನೋಟ:
ರಿಷಭ್ ಪಂತ್ 20 ಟೆಸ್ಟ್ ಪಂದ್ಯಗಳ 33 ಇನ್ನಿಂಗ್ಸ್ ಗಳಲ್ಲಿ 3 ಬಾರಿ ಅಜೇಯರಾಗಿ 1358 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 3 ಶತಕಗಳು ಮತ್ತು 6 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಗರಿಷ್ಠ ಸ್ಕೋರ್ 159 ಆಗಿದೆ. 18 ಏಕದಿನ ಪಂದ್ಯಗಳಲ್ಲಿ ಪಂತ್ 529 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಟಿ 20 ಸ್ವರೂಪದ 32 ಪಂದ್ಯಗಳಲ್ಲಿ, ಅವರು 2 ಅರ್ಧಶತಕಗಳ ಸಹಾಯದಿಂದ 512 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.