ನವದೆಹಲಿ: ರಾಜಸ್ತಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ ನ ದೇವದತ್ ಪಡಿಕ್ಕಲ್ ಸಿಡಿಸಿದ ಭರ್ಜರಿ ಶತಕ ಈಗ ಕ್ರಿಕೆಟ್ ನ ದಂತಕಥೆಗಳ ಮೆಚ್ಚುಗೆ ಗಳಿಸಿದೆ.ಅದರಲ್ಲೂ ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಗುರುವಾರ ಪಡಿಕ್ಕಲ್ ಅವರ ಪ್ರದರ್ಶನದಿಂದ ಪ್ರಭಾವಿತರಾಗಿ ಪಡಿಕಲ್ ಟೀಮ್ ಇಂಡಿಯಾ ಪರ 'ಶೀಘ್ರದಲ್ಲೇ' ಆಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Bangalore vs Rajasthan: ದೇವದತ್, ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಗೆ ರಾಜಸ್ತಾನ ತತ್ತರ
'ಅವರು ಯಾವುದೇ ಸ್ವರೂಪಗಳಲ್ಲಿ ಭಾರತಕ್ಕಾಗಿ ಆಡಿದರೆ ಆಶ್ಚರ್ಯಪಡಬೇಕಾಗಿಲ್ಲ, ಏಕೆಂದರೆ ಅವರಿಗೆ ಕ್ಲಾಸ್ ಇದೆ ಮತ್ತು ಅದನ್ನು ನಿರ್ವಹಿಸುವ ಸಾಮರ್ಥ್ಯ ಸಿಕ್ಕಿದೆ.ಅವರು ಪ್ರಥಮ ದರ್ಜೆ ಕ್ರಿಕೆಟ್ ಮತ್ತು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ್ದಾರೆ.ಬೃಹತ್ ಶತಕಗಳನ್ನು ಗಳಿಸಿದ್ದಾರೆ. 50 ಓವರ್ ನಲ್ಲಿ ಅವರು ಸಾಕಷ್ಟು ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ.ಇಲ್ಲಿ, ಟಿ 20 ದೇಶೀಯ ಪಂದ್ಯಾವಳಿಗಳಲ್ಲಿ ಅವರು ಸಾಕಷ್ಟು ರನ್ ಗಳಿಸಿದ್ದಾರೆ.ಆದ್ದರಿಂದ, ಅವರು ಶೀಘ್ರದಲ್ಲೇ ಅಲ್ಲಿಗೆ ಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ "ಎಂದು ಗವಾಸ್ಕರ್ (Sunil Gavaskar) ಹೇಳಿದರು.
ಇದನ್ನೂ ಓದಿ: IPL 2021: ಕ್ರಿಸ್ ಮೊರಿಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೇವಿನ್ ಪಿಟರ್ಸನ್
ಇನ್ನೂ ಮುಂದುವರೆದು ಕರ್ನಾಟಕ ಸೃಷ್ಟಿಸಿರುವ ಬ್ಯಾಟ್ಸಮನ್ ಗಳ ಕುರಿತಾಗಿ ಮಾತನಾಡಿದ ಗವಾಸ್ಕರ್ "ಕರ್ನಾಟಕವು ಯಾವಾಗಲೂ ಭಯಂಕರವಾದ ಬ್ಯಾಟ್ಸ್‌ಮನ್‌ಗಳನ್ನು ನಿರ್ಮಿಸಿದೆ. ಗುಂಡಪ್ಪ ವಿಶ್ವನಾಥ್, ರಾಹುಲ್ ದ್ರಾವಿಡ್… ನಂತರ ಕೆಎಲ್ ರಾಹುಲ್. ಮತ್ತು ಕೆಎಲ್ ರಾಹುಲ್ ನಿಮಗೆ ತಿಳಿದಿದ್ದರೆ, ಕೆಲವು ಸ್ಟಾರ್ ಗಳು ತಮ್ಮನ್ನು ಸ್ವಲ್ಪ ಹೆಚ್ಚು ನಂಬುವ ಅವಶ್ಯಕತೆಯಿದೆ. ಕೆಲವೊಮ್ಮೆ ಅವರು ತಮ್ಮನ್ನು ನಂಬುವುದಿಲ್ಲ. ಅವರು ಅಂತಹ ಪ್ರತಿಭಾವಂತ ಆಟಗಾರ ಮತ್ತು ಮಾಯಾಂಕ್ ಅಗರ್ವಾಲ್, ಟ್ರಿಪಲ್ ಸೆಂಚುರಿ ಸಿಡಿಸಿದ ಕರುಣ್ ನಾಯರ್ ಇದ್ದಾರೆ, ಕರ್ನಾಟಕದ ಅದ್ಭುತ ಬ್ಯಾಟಿಂಗ್ ಹೊಂದಿರುವ ತಂಡವಾಗಿದೆ,ದೇವದತ್ ಪಡಿಕ್ಕಲ್ ಅವರು ಭಾರತೀಯ ಕ್ರಿಕೆಟ್ ಪ್ರಿಯರನ್ನು ಸಂತೋಷಪಡಿಸಿದ ಬ್ಯಾಟ್ಸ್‌ಮನ್‌ಗಳ ದೀರ್ಘ ಸಾಲಿನಲ್ಲಿ ಇನ್ನೊಬ್ಬರಾಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.