ನವದೆಹಲಿ : ಟೀಂ ಇಂಡಿಯಾದ (Team India) ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳಪೆ ಪ್ರದರ್ಶನ ಮುಂದುವರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ (Rishab Pant) ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ 34 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು. ರಿಷಭ್ ಪಂತ್ ಅವರ ಈ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಜನವರಿ 3 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯದಿಂದ ರಿಷಬ್ ಪಂತ್  ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. 


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದ (Team India) ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ (Rishab Pant) ಅವರ ಬ್ಯಾಟ್ ಬಹುಕಾಲದಿನದ ಅಬ್ಬರಿಸುತ್ತಿಲ್ಲ. ರಿಷಬ್ ಪಂತ್ ಟೆಸ್ಟ್ ಪಂದ್ಯಗಳಲ್ಲಿ  ದೀರ್ಘ ಸಮಯದಿಂದ ಫ್ಲಾಪ್ ಆಗಿದ್ದಾರೆ. ಕಳೆದ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರಿಷಬ್ ಪಂತ್ 4, 41, 25, 37, 22, 2, 1, 9, 50, 34, 8 ರನ್ ಗಳಿಸಿದ್ದಾರೆ. ರಿಷಬ್ ಪಂತ್‌ನಿಂದಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್‌ಅಪ್ ಮೇಲೆ ಪರಿಣಾಮ ಬೀರುತ್ತಿದೆ. ರಿಷಬ್ ಪಂತ್ ಕಳಪೆ ಪ್ರದರ್ಶನದಿಂದಾಗಿ ಅವರ ಸ್ಥಾನದ ಮೇಲೆ ತೂಗುಗತ್ತಿ ನೇತಾಡುತ್ತಿದೆ. 


ಇದನ್ನೂ ಓದಿ : ಈ ಕ್ರಿಕೆಟಿಗನ ವೃತ್ತಿಜೀವನ ಪ್ರಾರಂಭವಾಗುವ ಮೊದಲೇ ಅಂತ್ಯ: 1 ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ!


1. ಕೆಎಲ್ ರಾಹುಲ್ :
ದಕ್ಷಿಣ ಆಫ್ರಿಕಾದಲ್ಲಿ ಕೆಎಲ್ ರಾಹುಲ್ (KL Rahul) ಕೂಡ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಟೆಸ್ಟ್ ವಿಕೆಟ್ ಕೀಪರ್ ಜವಾಬ್ದಾರಿ ನೀಡಿದರೆ ಟೀಂ ಇಂಡಿಯಾಗೆ ಭರ್ಜರಿ ಲಾಭವಾಗಲಿದೆ. ಟೆಸ್ಟ್ ನಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದರೆ ರಿಷಬ್ ಪಂತ್ ಬದಲಿಗೆ ಬೇರೆ ಆಲ್ ರೌಂಡರ್ ಗೆ ಅವಕಾಶ ನೀಡಬಹುದಾಗಿದೆ. ಏಕದಿನದಲ್ಲಿ ಟೀಂ ಇಂಡಿಯಾ ಪರ ವಿಕೆಟ್ ಕೀಪಿಂಗ್ ನಲ್ಲೂ ಕೆಎಲ್ ರಾಹುಲ್ ಅದ್ಭುತ ಸಾಧನೆ ಮಾಡಿದ್ದಾರೆ. ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ನೆಲೆಯೂರಿದರೆ, ರಿಷಬ್ ಪಂತ್ ಹೊರಗುಳಿಯುವುದು ಗ್ಯಾರಂಟಿಯಾಗಲಿದೆ.


2. ಕೆಎಸ್ ಭರತ್ :
ರಿಷಬ್ ಪಂತ್ ಕಳಪೆ ಪ್ರದರ್ಶನದಿಂದಾಗಿ ಟೆಸ್ಟ್ ತಂಡದಲ್ಲಿ ಅವರ ಸ್ಥಾನದ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ದೇಶಿ ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಮಾಡಿರುವ ಈ ಬ್ಯಾಟ್ಸ್ ಮನ್ ಆಂಧ್ರಪ್ರದೇಶ ಪರ ತ್ರಿಶತಕವನ್ನೂ ಬಾರಿಸಿದ್ದಾರೆ. ಕೆಎಸ್ ಭರತ್ (KS Bharat) ಅವರ ಬ್ಯಾಟಿಂಗ್ ತಂತ್ರವು ರಿಷಬ್ ಪಂತ್ ಅವರಿಗಿಂತ ಉತ್ತಮವಾಗಿದೆ. ಕೆಎಸ್ ಭರತ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಆರ್‌ಸಿಬಿ (RCB) ತಂಡದಲ್ಲೂ ಆಡಿದ್ದಾರೆ. ಕೆಎಸ್ ಭರತ್ 78 ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ರ ಸರಾಸರಿಯಲ್ಲಿ 4283 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 9 ಶತಕ ಮತ್ತು 23 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. 


ಇದನ್ನೂ ಓದಿ : Virat Kohli : 2021 ರ ಈ 2 ವೈಫಲ್ಯಗಳು ಕೊಹ್ಲಿ ಜೀವನದುದ್ದಕ್ಕೂ ಮರೆಯುವುದು ಕಷ್ಟ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.