ಈ ಕ್ರಿಕೆಟಿಗನ ವೃತ್ತಿಜೀವನ ಪ್ರಾರಂಭವಾಗುವ ಮೊದಲೇ ಅಂತ್ಯ: 1 ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ!

ಐಪಿಎಲ್ 2021ರ ದ್ವಿತೀಯಾರ್ಧ ಮತ್ತು ನಂತರ ನಡೆದ ಟಿ-20 ವಿಶ್ವಕಪ್ ಎರಡರಲ್ಲೂ ಸೂರ್ಯಕುಮಾರ್ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು.

Written by - Puttaraj K Alur | Last Updated : Dec 29, 2021, 07:46 PM IST
  • ಸೂರ್ಯಕುಮಾರ್ ಯಾದವ್ ಅವರ ವೃತ್ತಿ ಜೀವನ ಅಪಾಯದಲ್ಲಿದೆ
  • ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗದ ಸೂರ್ಯಕುಮಾರ್ ಯಾದವ್
  • ಮುಂಬೈ ತಂಡವು ಮುಂಬರುವ ಐಪಿಎಲ್ ಟೂರ್ನಿಗೆ ಸೂರ್ಯಕುಮಾರ್ ರನ್ನು ಉಳಿಸಿಕೊಂಡಿದೆ
ಈ ಕ್ರಿಕೆಟಿಗನ ವೃತ್ತಿಜೀವನ ಪ್ರಾರಂಭವಾಗುವ ಮೊದಲೇ ಅಂತ್ಯ: 1 ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ! title=
ಸೂರ್ಯಕುಮಾರ್ ಯಾದವ್ ವೃತ್ತಿ ಜೀವನ ಅಪಾಯದಲ್ಲಿದೆ

ನವದೆಹಲಿ: ಭಾರತ ತಂಡದಲ್ಲಿ ಸ್ಥಾನ(Team Indian Squad) ಪಡೆಯುವುದು ತುಂಬಾ ಕಷ್ಟದ ಕೆಲಸ. ಟೀಂ ಇಂಡಿಯಾ ಪರ ಕ್ರಿಕೆಟ್ ಆಡಬೇಕೆಂಬುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹಲವು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದೇ ವೇಳೆ ಈ ಒಬ್ಬ ಆಟಗಾರನಿಗೆ ಯಾವುದೇ ಪಂದ್ಯವನ್ನಾಡಲು ಅವಕಾಶ ಸಿಕ್ಕಿಲ್ಲ. ಹಾಗಾದರೆ ಈ ಆಟಗಾರ ಯಾರು..? ಇಲ್ಲಿದೆ ನೋಡಿ ಮಾಹಿತಿ.  

ವೃತ್ತಿಜೀವನ ಪ್ರಾರಂಭವಾಗುವ ಮೊದಲೇ ಅಂತ್ಯ!

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಸೇರಿಸಲಾಗಿತ್ತು. ಆದರೆ ಈ ಪ್ರವಾಸಗಳಲ್ಲಿ ಅವರು ಬೆಂಚ್ ಕಾಯಬೇಕಾಯಿತು. ಅವರಿಗೆ ಯಾವುದೇ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಮೊದಲ ಸ್ಥಾನ ನೀಡಲಾಗಿತ್ತು. ಟಿ-20 ಮತ್ತು ಏಕದಿನ ಪಂದ್ಯಗಳ ನಂತರ ಟೆಸ್ಟ್ ಪಂದ್ಯಗಳಲ್ಲಿ ಸೂರ್ಯಕುಮಾರ್ ಕಾಣಿಸಿಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅಲ್ಲಿ ಏನೂ ನಡೆಯಲಿಲ್ಲ ಮತ್ತು ಯಾವುದೇ ಟೆಸ್ಟ್ ಪಂದ್ಯಕ್ಕೂ ಅವಕಾಶ ನೀಡದೆ ಅವರನ್ನು ತಂಡದಿಂದ ಕೈಬಿಡಲಾಯಿತು. ಆ ನಂತರ ನ್ಯೂಜಿಲೆಂಡ್ ವಿರುದ್ಧವೂ ಸೂರ್ಯಕುಮಾರ್ ತಂಡಕ್ಕೆ ಸೇರಿಕೊಂಡರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರನ ವೃತ್ತಿಜೀವನ(Indian Test Team)ದ ಮೇಲೆ ತೂಗುಕತ್ತಿ ನೇತಾಡುತ್ತದೆ.

ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ವೃತ್ತಿ ಜೀವನ ಕೊನೆಗೊಳಿಸಲಿದ್ದಾರೆಯೇ ಈ ಆಟಗಾರ!

ಸೂರ್ಯಕುಮಾರ್ ಕಳಪೆ ಫಾರ್ಮ್‌ನಲ್ಲಿದ್ದಾರೆ!

ಸೂರ್ಯಕುಮಾರ್ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯಂತ ಕಳಪೆ ಸ್ವರೂಪ(Suryakumar Yadav Career)ವನ್ನು ಎದುರಿಸುತ್ತಿದ್ದಾರೆ. ಐಪಿಎಲ್ 2021ರ ದ್ವಿತೀಯಾರ್ಧ ಮತ್ತು ನಂತರ ನಡೆದ ಟಿ-20 ವಿಶ್ವಕಪ್ ಎರಡರಲ್ಲೂ ಸೂರ್ಯಕುಮಾರ್ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಸೂರ್ಯಕುಮಾರ್ ಬ್ಯಾಟಿಂಗ್‌ನಿಂದ ಯಾವುದೇ ದೊಡ್ಡ ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ. ಆಯ್ಕೆದಾರರು ಅವಕಾಶ ಕೊಟ್ಟಾಗಲೆಲ್ಲಾ ಅವರು ನಿರೀಕ್ಷೆಗೆ ತಕ್ಕಂತೆ ಇರಲು ವಿಫಲರಾದರು. ಸೂರ್ಯಕುಮಾರ್ ಅವರ ಮೊದಲಿನ ಫಾರ್ಮ್ ಕಂಡುಬರಲಿಲ್ಲ. ಅವರಿಗೆ ಶಾರ್ಟ್ ಪಿಚ್ ಎಸೆತಗಳನ್ನು ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಅವರು ಕಳೆದ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.   

ಮುಂಬೈ ತಂಡ ಉಳಿಸಿಕೊಂಡಿದೆ

ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ತಂಡವು ಮುಂಬರುವ ಐಪಿಎಲ್ ಟೂರ್ನಿ(IPL 2022)ಗೆ ಉಳಿಸಿಕೊಂಡಿದೆ. ಐಪಿಎಲ್‌ನಲ್ಲಿ ಈ ಬ್ಯಾಟ್ಸ್‌ ಮನ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮುಂಬೈ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 2021ರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಸೂರ್ಯಕುಮಾರ್ ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅವರು ಉತ್ತಮ ಪ್ರದರ್ಶನ ನೀಡಲು ವೈಫಲ್ಯ ಅನುಭವಿಸಿದರು. ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲೂ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಈಗ ಟೀಂ ಮ್ಯಾನೇಜ್ಮೆಂಟ್ ಅವರಿಗೆ ಭಾರತ ತಂಡದಿಂದ ಹೊರಬರುವ ಮಾರ್ಗವನ್ನು ತೋರಿಸಿದೆ. ಅವಕಾಶಗಳ ಕೊರತೆಯಿಂದ ಸೂರ್ಯಕುಮಾರ್ ಅವರ ವೃತ್ತಿಜೀವನ ಅಂತ್ಯವಾಗಲಿದೆಯಾ..? ಅನ್ನೋ ಪ್ರಶ್ನೆ ಮೂಡಿದೆ.  ಸದ್ಯ ಸೂರ್ಯಕುಮಾರ್ ಯಾದವ್ ಏಕದಿನ ಮತ್ತು ಟಿ-20 ತಂಡದ ಸಾಮಾನ್ಯ ಸದಸ್ಯರಾಗಿದ್ದಾರೆ. ರೋಹಿತ್ ಶರ್ಮಾ(Rohit Sharma) ಅವರ ವಿಶೇಷ ಆಟಗಾರರಲ್ಲಿ ಸೂರ್ಯ ಅವರನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ: Virat Kohli : 2021 ರ ಈ 2 ವೈಫಲ್ಯಗಳು ಕೊಹ್ಲಿ ಜೀವನದುದ್ದಕ್ಕೂ ಮರೆಯುವುದು ಕಷ್ಟ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News