ನವದೆಹಲಿ: ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನದ ದಕ್ಷಿಣ ಆಫ್ರಿಕಾ ವಿರುದ್ಧ ಕೆ.ಎಲ್.ರಾಹುಲ್ ಅವರ ಅಜೇಯ ಶತಕದ ಆಟಕಕ್ಕೆ ಈಗ ಮೆಚ್ಚುಗೆಯ ಸುರಿಮಳೆ ಬಂದಿವೆ.
ಈಗ ಕೆ.ಎಲ್.ರಾಹುಲ್ ಅವರು ಆರಂಭಿಕ ಆಟಗಾರರಾಗಿ ಶತಕಗಳಿಸುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದೆ ಎರಡನೇ ಆರಂಭಿಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
India’s most versatile batter—K L Rahul. Seven Test centuries. Has scored Test century in every country that he’s played in. Top top player. 👌👏👏 #SAvInd
— Aakash Chopra (@cricketaakash) December 26, 2021
ಇದನ್ನೂ ಓದಿ: South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ
ಇದಕ್ಕೂ ಮೊದಲು 2007ರಲ್ಲಿ ಕೇಪ್‌ಟೌನ್‌ನಲ್ಲಿ ವಾಸಿಂ ಜಾಫರ್ 116 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು.ರಾಹುಲ್ 248 ಎಸೆತಗಳಲ್ಲಿ 122 ರನ್ ಗಳಿಸಿ ದಿನದಾಟವನ್ನು ಅಂತ್ಯಗೊಳಿಸಿದರು.ಭಾರತ ತಂಡವು ದಿನದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.
Well played @klrahul11 Top class 👌👌👏👏 @BCCI #INDvsSA pic.twitter.com/oshNekD9Xr
— Harbhajan Turbanator (@harbhajan_singh) December 26, 2021
ಈಗ ಕೆ.ಎಲ್.ರಾಹುಲ್ ಅವರ ಆಟಕ್ಕೆ ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಪಾರ್ಥಿವ್ ಪಟೇಲ್ ವಿದೇಶದಲ್ಲಿ ರಾಹುಲ್ ಶತಕಗಳಿಸುವುದು ಹೊಸದೇನಲ್ಲ, ಆದರೆ ಸರಣಿ ಮತ್ತು ಪರಿಸ್ಥಿತಿಗಳ ಸಂದರ್ಭದ ಕಾರಣದಿಂದ ಇದು ವಿಶೇಷವಾದದ್ದು ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: South Africa vs India, 1st Test: ಹರಿಣಗಳ ನಾಡಿನಲ್ಲಿ ಅಬ್ಬರಿಸಿದ ಕನ್ನಡಿಗದ್ವಯರು ..!
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ, ರಾಹುಲ್ ಅವರು ಈಗ ಆಡಿದ ಪ್ರತಿಯೊಂದು ದೇಶದಲ್ಲಿ ಟೆಸ್ಟ್ ಶತಕ ಗಳಿಸಿದ್ದಾರೆ ಎಂದು ಹೇಳಿದರು.ಭಾರತದ ಬಹುಮುಖ ಬ್ಯಾಟ್ಸ್ಮನ್ -ಕೆ ಎಲ್ ರಾಹುಲ್.ಏಳು ಟೆಸ್ಟ್ ಶತಕಗಳು.ಅವರು ಆಡಿದ ಪ್ರತಿಯೊಂದು ದೇಶದಲ್ಲಿ ಟೆಸ್ಟ್ ಶತಕ ಗಳಿಸಿದ್ದಾರೆ.ಅಗ್ರಮಾನ್ಯ ಆಟಗಾರ ಎಂದು ಹೇಳಿದ್ದಾರೆ.ಭಾರತದ ಮಾಜಿ ವೇಗದ ಬೌಲರ್‌ಗಳಾದ ಆರ್‌ಪಿ ಸಿಂಗ್ ಮತ್ತು ಇರ್ಫಾನ್ ಪಠಾಣ್ ಕೂಡ ರಾಹುಲ್ ಅವರನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.