T20 World Cup 2024 Points Table: T20 ವಿಶ್ವಕಪ್‌’ನಲ್ಲಿ ಗುಂಪು ಸುತ್ತಿನ ಅತಿದೊಡ್ಡ ಪಂದ್ಯವು ಭಾನುವಾರ (ಜೂನ್ 9) ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ನ್ಯೂಯಾರ್ಕ್‌’ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಪಾಯಿಂಟ್ಸ್ ಟೇಬಲ್ ಬಗ್ಗೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!


ಟೂರ್ನಿಯಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿದ್ದು, ಹಂತ ಹಂತವಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ವ್ಯತ್ಯಾಸಗಳು ಕಾಣುತ್ತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೇರಿದಂತೆ ಮೂರು ತಂಡಗಳ ಸ್ಥಿತಿ ಕೆಟ್ಟದಾಗಿದ್ದು, ಪಂದ್ಯಾವಳಿಯಿಂದ ಹೊರಬೀಳುವ ಸಾಧ್ಯತೆ ಕಾಣಿಸುತ್ತಿದೆ.


ಎ ಗುಂಪು:


ಮೊದಲನೆಯದಾಗಿ, ಎ ಗುಂಪಿನ ಬಗ್ಗೆ ಮಾತನಾಡುವುದಾದರೆ, ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ, ಆತಿಥೇಯ ಅಮೆರಿಕ, ಕೆನಡಾ ಮತ್ತು ಐರ್ಲೆಂಡ್ ಈ ಗುಂಪಿನಲ್ಲಿದೆ. ಇನ್ನು ಪಾಕ್ ತಂಡವನ್ನು ಸೋಲಿಸಿದ್ದ ಅಮೆರಿಕಾ 2 ಪಂದ್ಯಗಳಲ್ಲಿ 2ರಲ್ಲಿಯೂ ಗೆದ್ದು ಮೊದಲ ಸ್ಥಾನದಲ್ಲಿದೆ. ಈ ಮೂಲಕ 4 ಅಂಕಗಳನ್ನು ಪಡೆದಿದೆ. ಇನ್ನುಳಿದಂತೆ ಭಾರತ ಮತ್ತು ಕೆನಡಾ ತಲಾ 2 ಅಂಕ ಹೊಂದಿವೆ. ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದ್ದು, ಕೆನಡಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಗೆದ್ದಿಲ್ಲ. ಎರಡೂ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. 2009ರ ಚಾಂಪಿಯನ್ ತಂಡ ಪಾಕಿಸ್ತಾನದ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಇಂದು ಭಾರತ ವಿರುದ್ಧ ಸೋತರೆ ಸೂಪರ್-8 ಹಾದಿ ಕಠಿಣವಾಗಲಿದೆ.


ಬಿ ಗುಂಪು:


ಆಸ್ಟ್ರೇಲಿಯವನ್ನು ಹೊರತುಪಡಿಸಿ, ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಒಮನ್ ತಂಡಗಳಿವೆ. ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಸ್ಕಾಟ್ಲೆಂಡ್ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಮಾನ್ ವಿರುದ್ಧ ಗೆದ್ದು ನಮೀಬಿಯಾ 2 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕೇವಲ 1 ಅಂಕ ಪಡೆದಿದೆ. ಇದೀಗ ಮುಂಬರುವ ಪಂದ್ಯದಲ್ಲಿ ನಮೀಬಿಯಾ ಮತ್ತು ಒಮನ್ ವಿರುದ್ಧ ಆಡಬೇಕಾಗಿದೆ. ಎರಡೂ ಪಂದ್ಯಗಳನ್ನು ಗೆದ್ದರೂ ಕೇವಲ 5 ಅಂಕ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಸೂಪರ್8 ಎಂಟ್ರಿಯ ಅವಕಾಶಗಳು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿದೆ.


ಸಿ ಗುಂಪು:


ಸಿ ಗುಂಪಿನಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ತಂಡಗಳಿವೆ. ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದಿವೆ. ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿದ್ದು, ಕೇನ್ ವಿಲಿಯಮ್ಸನ್ ತಂಡ ಈಗ ವೆಸ್ಟ್ ಇಂಡೀಸ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿ ವಿರುದ್ಧ ಗೆಲ್ಲಬೇಕಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ನ್ಯೂಜಿಲೆಂಡ್‌’ನ ಸ್ಥಿತಿ ಅತ್ಯಂತ ಕೆಟ್ಟದಾಗಿದೆ.


ಇದನ್ನೂ ಓದಿ: ಪಾಕ್ ವಿರುದ್ಧ ಇತಿಹಾಸ ಸೃಷ್ಟಿಸುವ ತವಕ..ರೋಹಿತ್ ಅಬ್ಬರಿಸಿದ್ರೆ ಈ ದಾಖಲೆ ನಿರ್ಮಾಣ ಖಚಿತ


ಗುಂಪು ಡಿ:


2014ರಲ್ಲಿ ಟೂರ್ನಿ ಗೆದ್ದಿದ್ದ ಶ್ರೀಲಂಕಾ ತಂಡದ ಪ್ರದರ್ಶನ ಇಲ್ಲಿಯವರೆಗೂ ಉತ್ತಮವಾಗಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದ್ದು, ಟಿ20 ವಿಶ್ವಕಪ್‌’ನಿಂದ ಹೊರಗುಳಿಯುವ ಹಂತದಲ್ಲಿದೆ. ವನಿಂದು ಹಸರಂಗ ತಂಡ ನೇಪಾಳ ಮತ್ತು ನೆದರ್ಲೆಂಡ್ಸ್ ವಿರುದ್ಧ ಆಡಬೇಕಿದೆ. ಎರಡೂ ಪಂದ್ಯಗಳನ್ನು ಗೆದ್ದರೂ ಮುಂದಿನ ಸುತ್ತಿನಲ್ಲಿ ಅವರ ಸ್ಥಾನ ಖಚಿತವಾಗುವುದಿಲ್ಲ. ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.