IND vs IRE: ಐರ್ಲ್ಯಾಂಡ್ಗೆ ದುಃಸ್ವಪ್ನವಾದ ಈ 3 ಆಟಗಾರರಿಂದಲೇ ಟೀಂ ಇಂಡಿಯಾಗೆ ಗೆಲುವು!
ಈ ಮೊದಲ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಸರಣಿಯಲ್ಲಿ ದೀಪಕ್‌ಗೆ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ದೀಪಕ್‌ಗೆ ವಿಶ್ವಾಸ ತುಂಬುವ ಕೆಲಸ ಮಾಡಿದ್ದರು.
ಟೀಂ ಇಂಡಿಯಾ ಮತ್ತು ಐರ್ಲ್ಯಾಂಡ್ ನಡುವಿನ ಮೊದಲ ಟಿ20 ಪಂದ್ಯವು ಭಾನುವಾರ ಡಬ್ಲಿನ್‌ನಲ್ಲಿ ನಡೆದಿದ್ದು, 12-12 ಓವರ್‌ಗಳ ಈ ಪಂದ್ಯದಲ್ಲಿ ಯುವ ಭಾರತ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ. ತಂಡದ ಈ ಗೆಲುವಿಗೆ ಎಲ್ಲಾ ಆಟಗಾರರ ಪಾತ್ರ ಮಹತ್ವದ್ದಾಗಿತ್ತು. ಆದರೆ ಈ ಮೂವರು ಆಟಗಾರರು ಬೃಹತ್ ಕೊಡುಗೆ ನೀಡಿದ್ದಾರೆ ಎಂದು ಹೇಳಬಹುದು.
ಇದನ್ನೂ ಓದಿ: ʼHow Can You Stopʼ, ಪೊಲೀಸರಿಗೇ ಅವಾಜ್ ಹಾಕಿದ ಈ ಪಕ್ಷದ ಅಭ್ಯರ್ಥಿ: ವಿಡಿಯೋ ವೈರಲ್
ದೀಪಕ್ ಹೂಡಾ:
ಈ ಮೊದಲ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಸರಣಿಯಲ್ಲಿ ದೀಪಕ್‌ಗೆ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ದೀಪಕ್‌ಗೆ ವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಇನ್ನು ಈ ಬಾರಿಯ ಪಂದ್ಯದಲ್ಲಿ ದೀಪಕ್ ಹೂಡಾ ಆರಂಭಿಕರಾಗಿ ಕಣಕ್ಕಿಳಿದಿದ್ದು, 29 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ ಅವರು ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಹಾರ್ದಿಕ್ ಪಾಂಡ್ಯ:
ಐರ್ಲ್ಯಾಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಕಮಾಂಡ್ ಹಾರ್ದಿಕ್ ಪಾಂಡ್ಯ ಕೈಯಲ್ಲಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಇನ್ನಿಂಗ್ಸ್ ಆಡಿದ್ದು, ವಿಕೆಟ್ ಕೂಡ ಪಡೆದಿದ್ದಾರೆ. 12 ಎಸೆತಗಳಲ್ಲಿ 24 ರನ್ ಬಾರಿಸಿದ ಪಾಂಡ್ಯ ಮೊದಲು ಬೌಲಿಂಗ್ ಮಾಡುವಾಗ 1 ವಿಕೆಟ್ ಪಡೆದರು. ಈ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ 1 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: ನಿಮಗೇ ಗೊತ್ತಿಲ್ಲದಂತೆ ನಿಮ್ಮ ಪತ್ತೇದಾರಿ ಮಾಡುತ್ತಿರಬಹುದು ಈ ಅಪ್ ,ತಕ್ಷಣ ಡಿಲೀಟ್ ಮಾಡಿ
ಯುಜುವೇಂದ್ರ ಚಹಾಲ್:
ಐರ್ಲ್ಯಾಂಡ್‌ನಲ್ಲೂ ಯುಜುವೇಂದ್ರ ಚಹಾಲ್ ಅವರ ಸ್ಪಿನ್ ಮ್ಯಾಜಿಕ್ ಮುಂದುವರಿದಿದೆ. ಚಹಾಲ್ ಐಪಿಎಲ್ 2022 ರಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಯುಜುವೇಂದ್ರ ಚಹಾಲ್ ಈ ಪಂದ್ಯದ ಅತ್ಯಂತ ಪ್ರಭಾವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 3 ಓವರ್‌ಗಳಲ್ಲಿ ಬೌಲಿಂಗ್ ಮಾಡಿದ ಚಹಾಲ್, 3.66 ರ ಎಕಾನಮಿಯೊಂದಿಗೆ ಕೇವಲ 11 ರನ್‌ಗಳನ್ನು ನೀಡಿ, ಒಂದು ವಿಕೆಟ್ ಪಡೆದಿದ್ದಾರೆ. ಜೊತೆಗೆ ಇವರ ಈ ಅದ್ಭುತ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.