ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಸೋತಿದೆ. ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್, ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ನಿರ್ಹುವಾ ವಿರುದ್ಧ ಸೋಲು ಅನುಭವಿಸಿದ್ದಾರೆ. ಭಾನುವಾರ ಮತ ಎಣಿಕೆ ಕಾರ್ಯ ನಡೆದಿದ್ದು, ಮತ ಎಣಿಕೆಗೂ ಮುನ್ನ ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಎಂಬವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Angarak Yoga Effect: ಇಂದಿನಿಂದ 3 ರಾಶಿಯವರ ಸಂಕಷ್ಟ ಹೆಚ್ಚಿಸಲಿದ್ದಾರೆ ರಾಹು-ಮಂಗಳ
ಮತ ಎಣಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಟ್ರಾಂಗ್ ರೂಮ್‌ಗೆ ತೆರಳಲು ಯತ್ನಿಸಿದ ಧರ್ಮೇಂದ್ರ ಯಾದವ್‌ರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ದಾಳಿ ನಡೆಸಿದ ಯಾದವ್ "ನೀವು ಹೇಗೆ ನಮ್ಮನ್ನು ತಡೆಯುತ್ತಿದ್ದೀರಾ? ನೀವು ನಮ್ಮನ್ನು ಏಕೆ ಒಳಗೆ ಬಿಡುತ್ತಿಲ್ಲ? ನೀವು ಮತ ಪೆಟ್ಟಿಗೆಯನ್ನು ಬದಲಾಯಿಸಲು ಯತ್ನಿಸುತ್ತಿದ್ದೀರಾ?" ಎಂದು ಪ್ರಶ್ನಿಸಿದರು. ಇದೇ ವೇಳೆ ಒಬ್ಬ ಪೊಲೀಸ್ ಪೇದೆ ʼನೀವು ಹೀಗೆ ಮಾತನಾಡಬಾರದುʼ ಎಂದು ಹೇಳುತ್ತಿರುವುದು ಕಂಡುಬಂದಿದೆ.
"ನಾನು ಅಭ್ಯರ್ಥಿ ಎಂದು ನೀವು ಪರಿಗಣಿಸುತ್ತಿಲ್ಲ" ಎಂದು ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಅವರು ಪೊಲೀಸರ ವಿರುದ್ಧ ಗುಡುಗಿದ್ದಾರೆ. ಈ ಘಟನೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸರು, "ಪರಿಸ್ಥಿತಿ ಸರಿಯಾಗಿದೆ" ಎಂದರು. ಧರ್ಮೇಂದ್ರ ಯಾದವ್ ಮತ್ತು ಪೊಲೀಸರ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.
How can you Rok ? Dharmendra yadav to s.h.o. pic.twitter.com/eXxqRBFUJD
— Agniveer Doland Trump (@Battlestar_ind) June 26, 2022
ಇದನ್ನೂ ಓದಿ: Vegetable Price: ಗ್ರಾಹಕರೇ ಗಮನಿಸಿ... ಇಂದು ಕರ್ನಾಟಕದಲ್ಲಿ ತರಕಾರಿ ಬೆಲೆ ಹೀಗಿದೆ
ಧರ್ಮೇಂದ್ರ ಯಾದವ್ ಅವರು ಬಿಜೆಪಿ ಅಭ್ಯರ್ಥಿ ನಿರ್ಹುವಾ ವಿರುದ್ಧ 8679 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ನಿರ್ಹುವಾ 3,12,768 ಮತಗಳನ್ನು ಪಡೆದರೆ, ಎಸ್ಪಿಯ ಧರ್ಮೇಂದ್ರ ಯಾದವ್ 3,04,089 ಮತಗಳನ್ನು ಪಡೆದಿದ್ದಾರೆ. ಬಿಎಸ್‌ಪಿ ಪಕ್ಷದ ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ ಕೂಡ 2,66,210 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು. ಇನ್ನು ಅಜಂಗಢದಲ್ಲಿ 5369 ಜನರು ನೋಟಾ ಬಟನ್ ಒತ್ತಿದ್ದಾರೆ. ಅಜಂಗಢ ಕ್ಷೇತ್ರದಲ್ಲಿ ಕಳೆದ ಜೂನ್ 23 ರಂದು ಉಪಚುನಾವಣೆಯಲ್ಲಿ ಮತದಾನ ನಡೆದಿತ್ತು. ಈ ವೇಳೆ ಇಲ್ಲಿ ಶೇ.49.43ರಷ್ಟು ಮತದಾನವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.