ಸಾಕ್ಷಿಗಿಂತ ಮೊದಲು ಧೋನಿಯನ್ನು ಇಷ್ಟಪಡುತ್ತಿದ್ದರಂತೆ ಈ ನಟಿ, ಸಂಬಂಧದ ಬಗ್ಗೆ ನಡೆದಿತ್ತು ಭಾರೀ ಚರ್ಚೆ
ರಾಯ್ ಲಕ್ಷ್ಮಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಆದರೆ, ಉತ್ತರ ಭಾರತದ ಪ್ರೇಕ್ಷಕರು, ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮಾಜಿ ಗೆಳತಿ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ.
ನವದೆಹಲಿ : ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಸಾಕ್ಷಿ ಮದುವೆಗೂ ಮುನ್ನ ದಕ್ಷಿಣ ಭಾರತದ ಚಲನಚಿತ್ರ ನಟಿ ರಾಯ್ ಲಕ್ಷ್ಮಿ (Raai Lakshmi) ಜೊತೆ ಮಹಿಯ ಸಂಬಂಧದ ಬಗ್ಗೆ ಚರ್ಚೆ ಕೇಳಿ ಬಂದಿತ್ತು. ಆ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆಟ ಮಾತ್ರವಲ್ಲದೆ, ಅವರ ಪ್ರೀತಿಯ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಬಗ್ಗೆ ಧೋನಿ ಏನನ್ನೂ ಹೇಳಿರಲಿಲ್ಲ, ಆದರೆ ನಟಿ ಈ ಬಗ್ಗೆ ಹೇಳಿಕೊಂಡಿದ್ದರು. ರಾಯ್ ಲಕ್ಷ್ಮಿ ಮತ್ತು ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಪ್ರೇಮಕಥೆ ಕೂಡ ಬಹಳ ಪ್ರಸಿದ್ಧವಾಗಿದೆ. 2008ರ ಐಪಿಎಲ್ ವೇಳೆ ಇವರಿಬ್ಬರು ಭೇಟಿಯಾಗಿದ್ದರು. ಈ ವೇಳೆ ಅವರಿಬ್ಬರ ಸಂಬಂಧದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು.
ಸಾಕ್ಷಿಗೂ ಮುನ್ನ ಧೋನಿಯನ್ನು ಇಷ್ಟಪಟ್ಟಿದ್ದ ನಟಿ :
ರಾಯ್ ಲಕ್ಷ್ಮಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಆದರೆ, ಉತ್ತರ ಭಾರತದ ಪ್ರೇಕ್ಷಕರು, ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮಾಜಿ ಗೆಳತಿ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ. 2008ರಲ್ಲಿ ಐಪಿಎಲ್ನ (IPL) ಮೊದಲ ಸೀಸನ್ನಲ್ಲಿ ರಾಯ್ ಲಕ್ಷ್ಮಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಈ ವೇಳೆ ಅವರು ಧೋನಿಯನ್ನು ಭೇಟಿಯಾದರು. ಇಲ್ಲಿಂದ ಇವರಿಬ್ಬರ ನಡುವೆ ಪ್ರೀತಿಯೂ ಹೆಚ್ಚಾಗತೊಡಗಿತು. ಆ ದಿನಗಳಲ್ಲಿ, ಧೋನಿ ಮತ್ತು ರಾಯ್ ಲಕ್ಷ್ಮಿ ಅವರ ಸಂಬಂಧದ ಸುದ್ದಿ ಆಗಾಗ್ಗೆ ಕೇಳಿಬರುತ್ತಿತ್ತು.
Yuvraj Singh: ಯುವರಾಜ್ ಸಿಂಗ್ ಇಂತಹ ಕೆಲಸಕ್ಕೆ ಸೊಸೆ ಗಂಭೀರ ಆರೋಪ ಮಾಡಿದ್ದರು!
ಧೋನಿ (Dhoni) ಮತ್ತು ರಾಯ್ ಲಕ್ಷ್ಮಿ ಅವರ ಪ್ರತ್ಯೇಕತೆಯ ಹಿಂದಿನ ಕಾರಣ ಏನು ಎಂದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಕೆಲವು ಸಮಯದ ಹಿಂದೆ, ಧೋನಿ ಜೊತೆಗಿನ ಸಂಬಂಧವು ತನ್ನ ಜೀವನದ ದೊಡ್ಡ ತಪ್ಪು ಎಂದು ನಟಿ ಹೇಳಿದ್ದರು. ಆ ವಿಷಯವಾಗಿ ಹಲವು ವರ್ಷಗಳೇ ಕಳೆದಿದ್ದು, ಈಗ ಆ ವಿಷಯದ ಬಗ್ಗೆ ಚರ್ಚೆ ನಿಲ್ಲಿಸುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.
South Africa Series: ದಕ್ಷಿಣ ಆಫ್ರಿಕಾ ಪ್ರವಾಸ; ಸರಣಿ ಆರಂಭಕ್ಕೂ ಮೊದಲೇ ರದ್ದುಗೊಳ್ಳುತ್ತದೆಯೇ?
ಧೋನಿ ಮದುವೆಯ ನಂತರ, ನಮ್ಮಿಬ್ಬರ ನಡುವೆ ಪ್ರೀತಿ ಇರಲಿಲ್ಲ, ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ರಾಯ್ ಲಕ್ಷ್ಮಿ ಎಂದು ಹೇಳಿದ್ದರು. ನಾವು ಯಾವತ್ತು ಪರಸ್ಪರ ಡೇಟ್ ಮಾಡಿರಲಿಲ್ಲ ಎಂದು ಕೂಡಾ ಹೇಳಿದ್ದರು. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಬಿಡುಗಡೆಯಾದಾಗಲೂ ರಾಯ್ ಲಕ್ಷ್ಮೀ ಹೇಳಿಕೆ ನೀಡಿದ್ದರು. ನಾನು ಮತ್ತು ಧೋನಿ ನಮ್ಮ ಜೀವನದಲ್ಲಿ ಸಾಕಷ್ಟು ,ಮುಂದುವರೆದಿದ್ದೇವೆ, ಆದರೆ ಜನರು ಮಾತ್ರ ನಮ್ಮ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.