South Africa Series: ದಕ್ಷಿಣ ಆಫ್ರಿಕಾ ಪ್ರವಾಸ; ಸರಣಿ ಆರಂಭಕ್ಕೂ ಮೊದಲೇ ರದ್ದುಗೊಳ್ಳುತ್ತದೆಯೇ?

South Africa Series: ಟೀಂ ಇಂಡಿಯಾ ಇದೇ ತಿಂಗಳ 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಮತ್ತು ನಂತರ ಸಮಾನ ಸಂಖ್ಯೆಯ ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಆದರೆ ಈ ಸರಣಿಯ ಆರಂಭದ ಮುಂಚೆಯೇ, ಅದರ ರದ್ದತಿಯ ಅಪಾಯವಿದೆ. 

Written by - Yashaswini V | Last Updated : Dec 21, 2021, 07:57 AM IST
  • ಕರೋನಾ ಭೀತಿ ಹಿನ್ನಲೆ
  • ದಕ್ಷಿಣ ಆಫ್ರಿಕಾ ಮಹತ್ವದ ಹೆಜ್ಜೆ ಇಟ್ಟಿದೆ
  • ರದ್ದಾಗಲಿದೆಯೇ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ?
South Africa Series: ದಕ್ಷಿಣ ಆಫ್ರಿಕಾ ಪ್ರವಾಸ; ಸರಣಿ ಆರಂಭಕ್ಕೂ ಮೊದಲೇ ರದ್ದುಗೊಳ್ಳುತ್ತದೆಯೇ?  title=
South Africa tour cancelled

South Africa Series: ಟೀಂ ಇಂಡಿಯಾ (Team India) ಇದೇ ತಿಂಗಳ 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು ನಂತರ 3 ಏಕದಿನ ಸರಣಿಯನ್ನು ಆಡಬೇಕಾಗಿದೆ. ಭಾರತದ ದೃಷ್ಟಿಯಿಂದ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಲ್ಲಿಯವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡವು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಸರಣಿಯ ಪ್ರಾರಂಭಕ್ಕೂ ಮುಂಚೆಯೇ, ಅದು ರದ್ದುಗೊಳ್ಳುವ ಅಪಾಯವಿದೆ.

ದಕ್ಷಿಣ ಆಫ್ರಿಕಾ ಮಹತ್ವದ ಹೆಜ್ಜೆ:
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎರಡನೇ ಬಾರಿಗೆ T20 Mzansi ಸೂಪರ್ ಲೀಗ್ (MSL) ಅನ್ನು ರದ್ದುಗೊಳಿಸಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಸೋಮವಾರ ತಿಳಿಸಿದೆ. ಎಂಎಸ್‌ಎಲ್ ಫೆಬ್ರವರಿಯಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ನ ಓಮಿಕ್ರಾನ್ (Omicron) ರೂಪದ ಹರಡುವಿಕೆಯ ನಂತರ ಹಲವಾರು ದೇಶಗಳು ದಕ್ಷಿಣ ಆಫ್ರಿಕಾದ (South Africa) ಮೇಲೆ ಪ್ರಯಾಣ ನಿಷೇಧದಿಂದಾಗಿ ಪಂದ್ಯಾವಳಿಯನ್ನು ರದ್ದುಗೊಳಿಸಲು ಒತ್ತಾಯಿಸಲಾಯಿತು ಎಂದು ಮಂಡಳಿ ತಿಳಿಸಿದೆ. ಈ ಹಿಂದೆ 2020 ರಲ್ಲಿಯೂ ಸಾಂಕ್ರಾಮಿಕ ರೋಗದಿಂದಾಗಿ ಈ ಲೀಗ್ ಅನ್ನು ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ- Pakistan ಲೆಗ್ ಸ್ಪಿನ್ನರ್ Yasir Shah ವಿರುದ್ಧ ಗನ್ ಪಾಯಿಂಟ್ ಮೇಲೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ!

ದೊಡ್ಡ ಲೀಗ್ ರದ್ದುಗೊಳಿಸಲಾಗಿದೆ:
"ಎಮ್‌ಎಸ್‌ಎಲ್‌ನ 2021 ರ ಋತುವನ್ನು ರದ್ದುಗೊಳಿಸುವ ನಿರ್ಧಾರವು CSL ಮತ್ತು ಅದರ ಕಾರ್ಯತಂತ್ರದ ಪಾಲುದಾರರು ಕೋವಿಡ್‌-19 (COVID-19) ರ ನಂತರ ಪಂದ್ಯಾವಳಿಯನ್ನು ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಪರಿಶೀಲಿಸುವ ಮೂಲಕ ತಮ್ಮ ಮಾರುಕಟ್ಟೆ ಮತ್ತು ವ್ಯಾಪಾರ ಸ್ಥಾನವನ್ನು ಮರಳಿ ಪಡೆಯಲು ಅವಕಾಶವನ್ನು ಹೊಂದಿದ್ದಾರೆ" ಎಂದು CSA ಆಕ್ಟಿಂಗ್ ಸಿಇಒ ಫೋಲೆಟ್ಸಿ ಮೊಸೆಕಿ (CEO Foletsi Mosecki) ಹೇಳಿದರು. ಇದಕ್ಕಾಗಿ ಎಂಎಸ್‌ಎಲ್ ಬದಲಿಗೆ ದೇಶೀಯ ಸಿಎಸ್‌ಎ ಟಿ20 ಚಾಲೆಂಜ್ ನಡೆಯಲಿದ್ದು, ಇದರಲ್ಲಿ ಎಂಟು ವಿಭಾಗಗಳ ತಂಡಗಳು ಭಾಗವಹಿಸಲಿದ್ದು, 2022ರ ಫೆಬ್ರುವರಿಯಲ್ಲಿ ಈ ಟೂರ್ನಿ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- IPL Mega Auction: ಈ ಆಟಗಾರರನ್ನು ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಬೇಕೆಂದು ಆಕಾಶ್ ಚೋಪ್ರಾ ಬಯಸಿದ್ದಾರೆ

ಕರೋನಾ ಹಾಹಾಕಾರ:
ಕಳೆದ ವಾರ ಕರೋನಾ ನಾಲ್ಕನೇ ತರಂಗದಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ -19 ರ ದಾಖಲೆಯ ದೈನಂದಿನ ಪ್ರಕರಣಗಳು ವರದಿಯಾಗಿವೆ. ನಾಲ್ಕನೇ ತರಂಗಕ್ಕೆ ಕಾರಣ ಓಮಿಕ್ರಾನ್ ರೂಪ ಎಂದು ನಂಬಲಾಗಿದೆ. ಭಾನುವಾರ, CSA ಕೋವಿಡ್ -19 ರ ಭಯದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಉಳಿದ ನಾಲ್ಕು ದಿನಗಳ ಫ್ರಾಂಚೈಸಿ ಸರಣಿಯನ್ನು ಮುಂದೂಡಿದೆ. ಇದು ದೇಶದ ಅಗ್ರ ದೇಶೀಯ ಸ್ಪರ್ಧೆಯಾಗಿದೆ. ಸೆಂಚುರಿಯನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗುವ ಒಂದು ವಾರದ ಮೊದಲು MSL ರದ್ದತಿಯನ್ನು ಘೋಷಿಸಲಾಗಿದೆ. ಇದೀಗ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೂ ಕರೋನಾ ಕರಿನೆರಳಿನ ಪ್ರಭಾವ ಬೀರುವ ಭೀತಿ ಇದ್ದು ಸರಣಿ ರದ್ದಾಗಬಹುದು ಎಂದು ಊಹಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News