ICC Ranking 2023: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಟೆಸ್ಟ್ ಬೌಲಿಂಗ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಯಾಂಕದಲ್ಲಿ, ಇಬ್ಬರು ಆಟಗಾರರು ಒಟ್ಟಾಗಿ ನಂಬರ್-1 ಬೌಲರ್ ಆಗಿದ್ದಾರೆ. ಈ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಒಬ್ಬ ಆಟಗಾರ ನಂಬರ್-1 ಟೆಸ್ಟ್ ಬೌಲರ್ ಆಗಿದ್ದರೆ, ಮತ್ತೊಬ್ಬ ಬೌಲರ್ ಇಂಗ್ಲೆಂಡ್ ಕ್ರಿಕೆಟ್ ತಂಡದವರಾಗಿದ್ದಾರೆ. ಈ ಇಬ್ಬರೂ ಬೌಲರ್‌ಗಳು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 859 ಅಂಕಗಳನ್ನು ಹೊಂದಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Team India : ಟೀಂ ಇಂಡಿಯಾದಿಂದ ಈ ಆಟಗಾರ ಹಠಾತ್ ಔಟ್..! 


ಕಳೆದ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ 36 ವರ್ಷದ ಆರ್ ಅಶ್ವಿನ್ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರಿಂದ ಅಗ್ರ ಬೌಲರ್ ಕಿರೀಟವನ್ನು ಕಸಿದುಕೊಂಡರು. ಆದರೆ ಇತ್ತೀಚಿನ ಶ್ರೇಯಾಂಕದಲ್ಲಿ ಈ ಇಬ್ಬರೂ ಆಟಗಾರರು 859 ಅಂಕಗಳೊಂದಿಗೆ ನಂಬರ್ 1 ಬೌಲರ್ ಎನಿಸಿಕೊಂಡಿದ್ದಾರೆ. ಆರ್ ಅಶ್ವಿನ್ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ.


ಆರ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ತವರಿನಲ್ಲಿ ಉಳಿದಿರುವ 1 ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ನಂ.1 ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. ಬೌಲಿಂಗ್ ಜೊತೆಗೆ ಆರ್ ಅಶ್ವಿನ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರವೀಂದ್ರ ಜಡೇಜಾ ಬೌಲರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಸ್ಪ್ರೀತ್ ಬುಮ್ರಾ ಆರನೇ ಸ್ಥಾನಕ್ಕೆ ತಲುಪಿದ್ದಾರೆ.


ಇದನ್ನೂ ಓದಿ: ಉಪನಾಯಕತ್ವ ಕಿತ್ತುಕೊಂಡ ಬೆನ್ನೆಲ್ಲೇ ಹೀಗೆ ಪ್ರತಿಕ್ರಿಯೆ ನೀಡಿದ ಕೆಎಲ್ ರಾಹುಲ್: ಕ್ರೀಡಾಲೋಕದಲ್ಲೇ ತಲ್ಲಣ ಸೃಷ್ಟಿ!


ಆರ್ ಅಶ್ವಿನ್ ಇದುವರೆಗೆ ಟೀಂ ಇಂಡಿಯಾ ಪರ 91 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆರ್ ಅಶ್ವಿನ್ ಈ ಪಂದ್ಯಗಳಲ್ಲಿ ಒಟ್ಟು 467 ವಿಕೆಟ್ ಪಡೆದಿದ್ದಾರೆ. ಅವರು ಟೆಸ್ಟ್‌’ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಟೀಂ ಇಂಡಿಯಾ ಪರ 113 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 151 ಮತ್ತು ಟಿ20ಯಲ್ಲಿ 72 ವಿಕೆಟ್ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ