ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ (Syed Mushtaq Ali Trophy 2021) ಅನೇಕ ಯುವ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಮತ್ತು ಈ ದೇಶೀಯ ಪಂದ್ಯಾವಳಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಚರ್ಚಿಸುತ್ತಿದ್ದಾರೆ. ಈ ವರ್ಷ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಮುಂಬೈ ವಿರುದ್ಧ ಕೇರಳದ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರ್ದುದ್ದೀನ್ ಅವರ ಇನ್ನಿಂಗ್ಸ್ ದೇಶಾದ್ಯಂತ ಚರ್ಚಾ ವಿಷಯವಾಗಿದೆ.


COMMERCIAL BREAK
SCROLL TO CONTINUE READING

37 ಎಸೆತಗಳಲ್ಲಿ ಒಂದು ಶತಕ ಬಾರಿಸಿದ ಅಜರುದ್ದೀನ್  :
ಮುಂಬೈ ವಿರುದ್ಧ ಆಡಿದ ಪಂದ್ಯದಲ್ಲಿ ಕೇರಳವು 197 ರನ್ ಗಳಿಸುವ ಗುರಿಯನ್ನು ಪಡೆದುಕೊಂಡಿತು. ಮೊದಲಿಗೆ ಮುಂಬೈ ಗೆದ್ದಂತೆ ತೋರಿತಾದರೂ ನಂತರ ಮೊಹಮ್ಮದ್ ಅಜರ್ದುದ್ದೀನ್  (Mohammed Azharduddeen) ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿದರು.


ಕೇರಳದ (Kerala) ಯುವ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರ್ದುದ್ದೀನ್ ಮೊದಲು 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ನಂತರ ಅವರು ಕೇವಲ 37 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಅವರು 54 ಎಸೆತಗಳಲ್ಲಿ ಒಟ್ಟು 137 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು.


ಇದನ್ನೂ ಓದಿ - ಮುಂಬೈ ಟಿ-೨೦ ತಂಡಕ್ಕೆ ಪಾದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಪುತ್ರ


ಮೊಹಮ್ಮದ್ ಅಜರ್ದುದ್ದೀನ್ 137 ರನ್ಗಳಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್ ಬಾರಿಸಿದರು. ರೋಚಕ ಪಂದ್ಯದಲ್ಲಿ ಮೊಹಮ್ಮದ್ ಅಜರ್ದುದ್ದೀನ್ ಅವರ ಚೆಂಡು ತಲುಪದ ಮೂಲೆಯೇ ಇಲ್ಲ. ಈ ಇನ್ನಿಂಗ್ಸ್‌ನಲ್ಲಿ ಕೇರಳ ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 201 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.


ಅಜರುದ್ದೀನ್ ಅವರ ಬಕೆಟ್ ಲಿಸ್ಟ್ :
ಮೊಹಮ್ಮದ್ ಅಜರ್ದುದ್ದೀನ್ ಅವರ ಬಿರುಗಾಳಿಯ ಇನ್ನಿಂಗ್ಸ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈಗ ಅವರ ಬಕೆಟ್ ಲಿಸ್ಟ್ ಟ್ವಿಟ್ಟರ್ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಸ್ಟಾರ್ ಪ್ಲೇಯರ್ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದಾರೆ.


ಇದನ್ನೂ ಓದಿ - Australia vs India: ಮಾರ್ನಸ್ ಲಾಬುಷೆನ್ ಭರ್ಜರಿ ಶತಕ,ಆರಂಭಿಕ ಆಘಾತದಿಂದ ಹೊರಬಂದ ಆಸಿಸ್


ಅಜರುದ್ದೀನ್ ಅವರ ಬಕೆಟ್ ಲಿಸ್ಟ್ ನಲ್ಲಿ, ಅವರು ತಮ್ಮ ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.  ಈ ಪಟ್ಟಿಯಲ್ಲಿ ಅವರು  ಐಪಿಎಲ್‌ನಲ್ಲಿ ಆಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ ರಣಜಿ ಟ್ರೋಫಿಯಲ್ಲಿ 4 ಶತಕಗಳನ್ನು ಗಳಿಸಲು ಬಯಸುವ ಮೊಹಮ್ಮದ್ ಅಜರುದ್ದೀನ್ ಸ್ವಂತ ಮನೆ ಕಟ್ಟುವುದರ ಜೊತೆಗೆ ಮರ್ಸಿಡಿಸ್ ಬೆಂಜ್ ಅನ್ನು ಸಹ ಖರೀದಿಸಲು ಬಯಸುವುದಾಗಿ ತಮ್ಮ ಲಿಸ್ಟ್ ನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ಆಟಗಾರರು 2023ರಲ್ಲಿ ಭಾರತಕ್ಕಾಗಿ ವಿಶ್ವಕಪ್ ಆಡಲು ಬಯಸಿದ್ದಾರೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.