Australia vs India: ಮಾರ್ನಸ್ ಲಾಬುಷೆನ್ ಭರ್ಜರಿ ಶತಕ,ಆರಂಭಿಕ ಆಘಾತದಿಂದ ಹೊರಬಂದ ಆಸಿಸ್

ಬ್ರಿಸ್ಪೇನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮೊದಲ ದಿನದಾಂತ್ಯಕ್ಕೆ 5 ವಿಕೆಟ್ ಗಳನ್ನು ಕಳೆದುಕೊಂಡು 275 ರನ್ ಗಳಿಸಿದೆ.

Last Updated : Jan 15, 2021, 03:50 PM IST
  • ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸಿಸ್ ತಂಡಕ್ಕೆ ಭಾರತದ ಬೌಲರ್ ಗಳು ಮಾರಕವಾಗಿ ಪರಣಮಿಸಿದರು.
  • ತಂಡದ ಮೊತ್ತ ನಾಲ್ಕು ರನ್ ಆಗಿದ್ದಾಗ ಡೇವಿಡ್ ವಾರ್ನರ್ ಅವರು ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರು.
  • ಇದಾದ ನಂತರ ಮಾರ್ಕಸ್ ಹ್ಯಾರಿಸ್ ಕೂಡ 5 ರನ್ ಗೆ ವಿಕೆಟ್ ಕಳೆದುಕೊಂಡರು.
Australia vs India: ಮಾರ್ನಸ್ ಲಾಬುಷೆನ್ ಭರ್ಜರಿ ಶತಕ,ಆರಂಭಿಕ ಆಘಾತದಿಂದ ಹೊರಬಂದ ಆಸಿಸ್ title=
Photo Courtesy: Twitter

ನವದೆಹಲಿ: ಬ್ರಿಸ್ಪೇನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮೊದಲ ದಿನದಾಂತ್ಯಕ್ಕೆ 5 ವಿಕೆಟ್ ಗಳನ್ನು ಕಳೆದುಕೊಂಡು 275 ರನ್ ಗಳಿಸಿದೆ.

ಇದನ್ನೂ ಓದಿ: Australia vs India:ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಉಪನಾಯಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸಿಸ್ ತಂಡಕ್ಕೆ ಭಾರತದ ಬೌಲರ್ ಗಳು ಮಾರಕವಾಗಿ ಪರಣಮಿಸಿದರು. ತಂಡದ ಮೊತ್ತ ನಾಲ್ಕು ರನ್ ಆಗಿದ್ದಾಗ ಡೇವಿಡ್ ವಾರ್ನರ್ ಅವರು ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರು.ಇದಾದ ನಂತರ ಮಾರ್ಕಸ್ ಹ್ಯಾರಿಸ್ ಕೂಡ 5 ರನ್ ಗೆ ವಿಕೆಟ್ ಕಳೆದುಕೊಂಡರು.

ಇದನ್ನೂ ಓದಿ: India vs Australia: ವಿಲ್ ಪುಕೊವ್ಸ್ಕಿ,ಮಾರ್ನಸ್ ಲ್ಯಾಬುಸ್ಚಾಗ್ನೆ ಅರ್ಧಶತಕ, ಸುಸ್ಥಿತಿಯಲ್ಲಿ ಆಸಿಸ್

ಇದಾದ ನಂತರ ಕ್ರಿಸ್ ಗೆ ಬಂದ ಮಾರ್ನಸ್ ಲಾಬುಷೆನ್ (Marnus Labuschagne) ಅವರು 204 ಎಸೆತಗಳಲ್ಲಿ 108 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡ್ಯೂಯ್ದುರು.ನಂತರ ಬಂದಂತಹ ಸ್ಟೀವ್ ಸ್ಮಿತ್ 36, ಮ್ಯಾಥೂ ವಾಡೆ 45, ಗಳಿಸಿದರು. ಸಧ್ಯ ಕ್ಯಾಮರೂನ್ ಗ್ರೀನ್ 28, ಟಿಮ್ ಪೈನೆ 38 ಗಳಿಸಿ ಕ್ರಿಸ್ ನಲ್ಲಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಪಿತೃತ್ವ ರಜೆ ಬಗ್ಗೆ ಮಾಜಿ ಆಟಗಾರ ಫಾರೂಕ್ ಇಂಜನಿಯರ್ ಹೇಳಿದ್ದೇನು?

ಭಾರತದ ಪರವಾಗಿ ಟಿ ನಟರಾಜನ್ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಮಿಂಚಿದರು.ಇನ್ನೊಂದೆಡೆಗೆ ಮೊಹಮದ್ ಸಿರಾಜ್ ಹಾಗೂ ಶಾರ್ದುಲ್ ಟಾಕೂರ್, ಹಾಗೂ ವಾಷ್ಟಿಂಗ್ ಟನ್ ತಲಾ ಒಂದೊಂದು ವಿಕೆಟ್ ಗಳನ್ನು ಪಡೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News