Royal Challengers Bengaluru: ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಆಕ್ಷನ್-ಪ್ಯಾಕ್ಡ್ ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2023 ರಲ್ಲಿ ವುಮೆನ್ ಇನ್ ಬ್ಲೂ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅನ್ನು ಸೋಲಿಸಿದೆ. ಈ ಮೂಲಕ ಲೀಗ್’ನಲ್ಲಿ ಸತತ ಎರಡು ಸೋಲುಗಳನ್ನು ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಸುಲಭ ಆಸನ ಮಾಡುತ್ತಾ ಬಂದರೆ ಒಂದೇ ವಾರದಲ್ಲಿ ದೇಹವಾಗುವುದು ಸಣ್ಣ 


ಹೇಲಿ ಮ್ಯಾಥ್ಯೂಸ್ ಅವರ ಬಿರುಸಿನ ಬ್ಯಾಟಿಂಗ್, ಸ್ಮೃತಿ ಮಂಧಾನ ಅವರ ತಂಡವನ್ನು ಸೋಲಿನ ಸುಳಿಗೆ ಸಿಲುಕುವಂತೆ ಮಾಡಿ, ಮುಂಬೈ ಇಂಡಿಯನ್ಸ್‌ಗೆ ಅನುಕೂಲಕರ ಜಯ ಸಾಧಿಸಲು ದಾರಿ ಮಾಡಿಕೊಟ್ಟಿತು.


ಮುಂಬೈನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಹರ್ಮನ್‌ ಪ್ರೀತ್ ಮತ್ತು ತಂಡ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಆರ್‌ ಸಿ ಬಿ ಎಲೈಟ್ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ನೇರ ಸೋಲನ್ನು ಅನುಭವಿಸಿದ್ದಾರೆ. ಈ ಸೋಲು ಕಾಣುತ್ತಿದ್ದಂತೆ ಅಭಿಮಾನಿಗಳು, ಸ್ಮೃತಿ ಮಂಧಾನ ವಿರಾಟ್ ಕೊಹ್ಲಿ ಹಾದಿಯನ್ನೇ ತುಳಿಯುತ್ತಿದ್ದಾರೆಯೇ? ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.


ಬ್ಯಾಟಿಂಗ್’ನಲ್ಲಿ ಅಬ್ಬರ ತೋರಿಸುವ ಸ್ಮೃತಿ ಮಂಧಾನ ನಾಯಕತ್ವ ವಿಚಾರ ಬಂದಾಗ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ. ಪಿಚ್ ಆಧಾರವನ್ನು ಸರಿಯಾಗಿ ಗಮನಿಸದೆ ಟಾಸಿಂಗ್ ಸಂದರ್ಭದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್’ನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತೋರುತ್ತದೆ. ಇವಲ್ಲದೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಹರ್ಮನ್ ಪ್ರೀತ್ ಕೌರ್ ತಮ್ಮ ಅನುಭವಗಳನ್ನು ಇಲ್ಲಿಯೂ ಪ್ರಯೋಗ ಮಾಡುತ್ತಿದ್ದಾರೆ.


ಸದ್ಯ ಆರ್’ಸಿಬಿ, ವುಮೆನ್ಸ್ ಪ್ರೀಮಿಯರ್ ಲೀಗ್’ನಲ್ಲೂ ಸೋಲು ಅನುಭವಿಸುವುತ್ತಿರುವುದನ್ನು ಕಂಡ ಅಭಿಮಾನಿಗಳು ಟ್ವಿಟರ್’ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.


ವುಮೆನ್ಸ್ ಪ್ರೀಮಿಯರ್ ಲೀಗ್ 2023ರ ತಮ್ಮ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಮೃತಿ ಮಂಧಾನ ಮತ್ತು ತಂಡ 18.4 ಓವರ್‌ಗಳಲ್ಲಿ 155 ರನ್‌ ಬಾರಿಸಿದರು. ನಾಯಕಿ ಮಂಧಾನ 17 ಎಸೆತಗಳಲ್ಲಿ 23 ರನ್ ಗಳಿಸಿದರೆ, ಸೂಪರ್‌ಸ್ಟಾರ್ ಎಲ್ಲಿಸ್ ಪೆರ್ರಿ 7 ಎಸೆತಗಳಲ್ಲಿ 13 ರನ್ ಗಳಿಸಿದರು. ರಿಚಾ ಘೋಷ್ (28), ಕನಿಕಾ ಅಹುಜಾ (22), ಶ್ರೇಯಾಂಕ ಪಾಟೀಲ್ (23) ಮತ್ತು ಮೇಗನ್ ಶುಟ್ (20) ಅವರ ಪ್ರಮುಖ ಪಾತ್ರಗಳು 20 ಓವರ್‌ಗಳ ಸ್ಪರ್ಧೆಯಲ್ಲಿ ಆರ್’ಸಿಬಿ 155 ಕಲೆಹಾಕುವಂತೆ ಮಾಡಿತು.


ಮುಂಬೈ ಇಂಡಿಯನ್ಸ್‌’ನ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್, ಆರ್‌ಸಿಬಿ ಬೌಲಿಂಗ್ ದಾಳಿಗೆ ಬಗ್ಗದೆ ಅಜೇಯ 77 ರನ್ ಬಾರಿಸಿದರು. ಮ್ಯಾಥ್ಯೂಸ್ ಅವರು ಬೆಂಗಳೂರು ವಿರುದ್ಧದ ಆಲ್ ರೌಂಡ್ ಪ್ರದರ್ಶನಕ್ಕಾಗಿ ವುಮೆನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: Radhika Pandit Birthday : ರಾಧಿಕಾ ಪಂಡಿತ್ ಯಶ್‌ಗಿಂತ ಎಷ್ಟು ವರ್ಷ ದೊಡ್ಡವರು?


ಈ ಬಳಿಕ ಮಾತನಾಡಿದ ಸ್ಮೃತಿ ಮಂಧಾನ "ನಾವು ಉತ್ತಮ ಅಂಕಗಳನ್ನು ಕಲೆಹಾಕಲು ಕಲಿಯಬಹುದಿತ್ತು. ಈ ಸೋಲನ್ನು ಒಪ್ಪಿಕೊಂಡು ಉತ್ತಮವಾಗಿ ಮರಳಬೇಕು. ನಾವು ಉತ್ತಮ ಬೌಲಿಂಗ್ ತಂಡವನ್ನು ಹೊಂದಿದ್ದೇವೆ. ನಮಗೆ 6-7 ಬೌಲಿಂಗ್ ಆಯ್ಕೆಗಳಿವೆ. ಬ್ಯಾಟರ್‌ಗಳು ರನ್‌’ಗಳನ್ನು ಕಲೆಹಾಕದಿದ್ದಾಗ ನಾವು ಬೌಲರ್‌ಗಳಿಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಇದು ಬಹಳ ಕಡಿಮೆ ಪಂದ್ಯಾವಳಿಯಾಗಿದೆ ”ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.