Shubman Gill Double Century: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗಿಲ್ 19 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಿತ 208 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.  ಈ ಮೂಲಕ ಭಾರತ ಎಂಟು ವಿಕೆಟ್‌ಗೆ 349 ರನ್ ಗಳಿಸಿತು. ಈ ರೋಚಕ ಪಂದ್ಯವನ್ನು ಭಾರತ 12 ರನ್‌ಗಳಿಂದ ಗೆದ್ದುಕೊಂಡಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೇಲೆ ಗಿಲ್, "ನಾನು ಮೈದಾನಕ್ಕೆ ಇಳಿಯಲು ಮತ್ತು ನಾನು ಏನು ಮಾಡಬೇಕೆಂದು ತಾಳ್ಮೆಯಿಂದ ಕಾಯುತ್ತಿದ್ದೆ" ಎಂದು ಹೇಳಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shubman Gillಗೆ ಟಾರ್ಚರ್ ಕೊಡ್ತಿದ್ದಾನೆ ಈ ಆಟಗಾರ: Rohit Sharma ಜೊತೆಗಿನ ಸಂದರ್ಶನದಲ್ಲಿ ಬಹಿರಂಗ!


ಗಿಲ್ ತಮ್ಮ ಕಾರ್ಯತಂತ್ರದ ಬಗ್ಗೆ ಮಾತನಾಡಿ, 'ವಿಕೆಟ್‌ಗಳ ಪತನದ ಸಮಯದಲ್ಲಿ, ಕೆಲವೊಮ್ಮೆ ನಾನು ಮುಕ್ತವಾಗಿ ಆಡಲು ಬಯಸುತ್ತೇನೆ. ಕೊನೆಯಲ್ಲಿ ನಾನು ಅದನ್ನು ಸಾಧಿಸಿದಾಗ ಖುಷಿಪಡುತ್ತೇನೆ. ಕೆಲವೊಮ್ಮೆ ಬೌಲರ್ ಮೇಲಿರುವಾಗ, ನೀವು ಒತ್ತಡವನ್ನು ಅನುಭವಿಸುವಂತೆ ಮಾಡಬೇಕಾಗುತ್ತದೆ. ನಾನು ಡಾಟ್ ಬಾಲ್‌ಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.


 “ನಾನು ನಿಜವಾಗಿಯೂ 200ರ ಬಗ್ಗೆ ಯೋಚಿಸುತ್ತಿರಲಿಲ್ಲ. ಆದರೆ 47 ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿದಾಗ ನನ್ನ ಆಸೆ ಈಡೇರಿತು. ಮೊದಲು ಚೆಂಡನ್ನು ನೋಡುತ್ತಾ ಆಡುತ್ತಿದ್ದೆ” ಎಂದು ಹೇಳಿದ್ದಾರೆ.


ಗಿಲ್ ಈಗ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ 24 ವರ್ಷ, 145 ದಿನಗಳ ಇಶಾನ್, 210 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದರು. ಆದರೆ ಇದೀಗ 23 ವರ್ಷ 132 ದಿನಗಳ ಗಿಲ್ ತಮ್ಮ ಗೆಳಯನ ಈ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.


ಆದರೆ ಪಂದ್ಯದ ವೇಳೆ ಶುಭಮನ್ ಗಿಲ್ ಬಹುತೇಕ ಔಟ್ ಆದ ಸಂದರ್ಭವಿತ್ತು. ಆದರೆ ನಂತರ ಅವರ ಜೊತೆಗಾರ ಶಾರ್ದೂಲ್ ಠಾಕೂರ್ ತಮ್ಮ ವಿಕೆಟ್ ತ್ಯಾಗ ಮಾಡಿದರು. ಬಹುಶಃ ಗಿಲ್ ತನ್ನ ಜೀವನದಲ್ಲಿ ಠಾಕೂರ್ ಅವರ ಈ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ.


ಭಾರತದ ಸ್ಕೋರ್ 47ನೇ ಓವರ್ ನಲ್ಲಿ 302 ರನ್ ಆಗಿದ್ದು, 6 ವಿಕೆಟ್ ಪತನವಾಗಿತ್ತು. ಇದ್ದಕ್ಕಿದ್ದಂತೆ ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ ಒಂದೇ ತುದಿಯಲ್ಲಿ ನಿಂತಿದ್ದರುರ. ಸ್ಯಾಂಟ್ನರ್ ಥ್ರೋ ಎಸೆದರು. ಅದು ಟಾಮ್ ಲ್ಯಾಥಮ್ ಅವರನ್ನು ತಲುಪಿತು. ಬಳಿಕ ಬೇಲ್ ಮೇಲೆ ಬಾಲ್ ಬಿಟ್ಟರು. ಇದಕ್ಕೂ ಮುನ್ನ ಶುಭಮನ್ ಗಿಲ್ ಪೆವಿಲಿಯನ್ ಗೆ ಮರಳುತ್ತಾರೆ ಎಂದು ಅನಿಸಿತ್ತು. ಆದರೆ ಶಾರ್ದೂಲ್ ಠಾಕೂರ್ ವಾಪಸಾದರು. ಅವರ ತ್ಯಾಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: Mohammed Siraj: ಕೀವೀಸ್ ವಿರುದ್ಧ ಸಿರಾಜ್ ಅಬ್ಬರ: ಮಗನ ಸಾಧನೆ ಕಂಡು ತಾಯಿ ಹೇಳಿದ್ದೇನು ಗೊತ್ತಾ?


ಶುಭ್ಮನ್ ಗಿಲ್ ಕವರ್ನಲ್ಲಿ ಆಡುವ ಮೂಲಕ ಚೆಂಡನ್ನು ರನ್ ಮಾಡಿದರು. ಶಾರ್ದೂಲ್ ಠಾಕೂರ್ ಅವರು ಕ್ರೀಸ್ ತಲುಪಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡರು. ಆದ್ದರಿಂದ ಅವರು ನಾನ್-ಸ್ಟ್ರೈಕಿಂಗ್ ಎಂಡ್ ಗೆ ಮರಳಿದರು. ಅವರು ಮೊದಲು ತಲುಪಿದ್ದರು. ಗಿಲ್ ನಂತರ ಬಂದರು. ಬೇಲ್‌ಗಳು ಚೆಲ್ಲಾಪಿಲ್ಲಿಯಾದ ನಂತರ ಆಟಗಾರನೊಬ್ಬ ಪೆವಿಲಿಯನ್‌ಗೆ ಮರಳಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ತಮ್ಮ ವಿಕೆಟ್ ತ್ಯಾಗ ಮಾಡಿದರು. ಆಗ ಗಿಲ್ 137 ಎಸೆತಗಳಲ್ಲಿ 167 ರನ್ ಗಳಿಸಿದ್ದರು. ಒಂದು ವೇಳೆ ಔಟಾಗಿದ್ದರೆ ದ್ವಿಶತಕ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.