Mohammed Siraj: ಕೀವೀಸ್ ವಿರುದ್ಧ ಸಿರಾಜ್ ಅಬ್ಬರ: ಮಗನ ಸಾಧನೆ ಕಂಡು ತಾಯಿ ಹೇಳಿದ್ದೇನು ಗೊತ್ತಾ?

Mohammed Siraj Family: ಹೈದರಾಬಾದ್ ಸಿರಾಜ್ ಅವರ ತವರು ನೆಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ವೀಕ್ಷಿಸಲು ಅವರ ಕುಟುಂಬ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈಗ ಅದರ ಚಿತ್ರವೊಂದು ವೈರಲ್ ಆಗುತ್ತಿದೆ. ಇದೇ ವೇಳೆ ಸಿರಾಜ್ ತಾಯಿ ಮಗನಿಗೆ ದೊಡ್ಡ ವಿಷಯ ತಿಳಿಸಿದ್ದಾರೆ.

Written by - Bhavishya Shetty | Last Updated : Jan 19, 2023, 01:33 PM IST
    • ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ
    • ಸಿರಾಜ್ ತಮ್ಮ ಸ್ವಂತ ಅರ್ಹತೆಯ ಮೇಲೆ ಮೊದಲು ಐಪಿಎಲ್ ಆಡಿದ್ದಾರೆ
    • ನ್ಯೂಜಿಲೆಂಡ್ ವಿರುದ್ಧದ ಮೊದಲ ODI ವೀಕ್ಷಿಸಲು ಅವರ ಇಡೀ ಕುಟುಂಬ ಆಗಮಿಸಿತ್ತು
Mohammed Siraj: ಕೀವೀಸ್ ವಿರುದ್ಧ ಸಿರಾಜ್ ಅಬ್ಬರ: ಮಗನ ಸಾಧನೆ ಕಂಡು ತಾಯಿ ಹೇಳಿದ್ದೇನು ಗೊತ್ತಾ? title=
Mohammad Siraj

Mohammed Siraj Family: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಬೌಲಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸಿರಾಜ್ ತಮ್ಮ ಕೊನೆಯ ಓವರ್‌ನಲ್ಲಿ 2 ವಿಕೆಟ್ ಕಬಳಿಸಿ ಪಂದ್ಯವನ್ನು ಭಾರತದ ಪರವಾಗಿ ತಿರುಗುವಂತೆ ಮಾಡಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

ಇದನ್ನೂ ಓದಿ: Team India: ಭಾರತ 3ನೇ ಬಾರಿ ವಿಶ್ವಕಪ್ ಗೆಲ್ಲುವುದು ಖಚಿತ! ಆದರೆ ಈ ಪಂದ್ಯ ವಿಜೇತರು ಇದ್ದರೆ ಮಾತ್ರ ಸಾಧ್ಯ

ಹೈದರಾಬಾದ್ ಸಿರಾಜ್ ಅವರ ತವರು ನೆಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ವೀಕ್ಷಿಸಲು ಅವರ ಕುಟುಂಬ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈಗ ಅದರ ಚಿತ್ರವೊಂದು ವೈರಲ್ ಆಗುತ್ತಿದೆ. ಇದೇ ವೇಳೆ ಸಿರಾಜ್ ತಾಯಿ ಮಗನಿಗೆ ದೊಡ್ಡ ವಿಷಯ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಬಡ ಕುಟುಂಬದವರಾದರೂ ತಮ್ಮ ಕಠಿಣ ಪರಿಶ್ರಮದ ಬಲದಿಂದ ದೇಶಕ್ಕಾಗಿ ಆಡುವ ಕನಸನ್ನು ನನಸಾಗಿಸಿಕೊಂಡರು. ಸಿರಾಜ್ ಅವರ ತಂದೆ ಆಟೋ ಡ್ರೈವರ್ ಆಗಿದ್ದರು. ಆದರೆ ಸಿರಾಜ್ ತಮ್ಮ ಸ್ವಂತ ಅರ್ಹತೆಯ ಮೇಲೆ ಮೊದಲು ಐಪಿಎಲ್ ಆಡಿದ್ದಾರೆ. ಈಗ ಟೀಮ್ ಇಂಡಿಯಾ ಪರ ಕ್ರಿಕೆಟ್ ಆಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ODI ವೀಕ್ಷಿಸಲು ಅವರ ಇಡೀ ಕುಟುಂಬ ಆಗಮಿಸಿತ್ತು.

ಮೊದಲ ಏಕದಿನ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಅವರ ತಾಯಿ, ತಮ್ಮ ಮಗ ಬೌಲಿಂಗ್ ಮಾಡುವಾಗ ನಿರಂತರವಾಗಿ ಪ್ರಾರ್ಥಿಸುತ್ತಿರುವುದು ಕಂಡುಬಂದಿತ್ತು. ಪಂದ್ಯದ ನಂತರ, ಬಿಸಿಸಿಐ ಮೊಹಮ್ಮದ್ ಸಿರಾಜ್ ಅವರ ತಾಯಿಯ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಅವರು, 'ನನ್ನ ಮಗ ಭಾರತಕ್ಕಾಗಿ ಉತ್ತಮ ಪ್ರದರ್ಶನವನ್ನು ಮುಂದುವರೆಸಬೇಕು. ವಿಶ್ವಕಪ್‌ನಲ್ಲಿಯೂ ಆಡಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Shubman Gillಗೆ ಟಾರ್ಚರ್ ಕೊಡ್ತಿದ್ದಾನೆ ಈ ಆಟಗಾರ: Rohit Sharma ಜೊತೆಗಿನ ಸಂದರ್ಶನದಲ್ಲಿ ಬಹಿರಂಗ!

ಮೊಹಮ್ಮದ್ ಸಿರಾಜ್ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಿದ್ದರು. ತಮ್ಮ 10 ಓವರ್‌ಗಳಲ್ಲಿ 46 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಅವರಿಂದಲೇ ಟೀಮ್ ಇಂಡಿಯಾ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕೆಲವು ಸಮಯದಿಂದ, ಭಾರತೀಯ ವೇಗದ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ. ಭಾರತ ಪರ 20 ಏಕದಿನ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News