ICC ODI World Cup 2023: ಭಾರತದೊಂದಿಗಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ತನ್ನ ವಿಶ್ವಕಪ್ ಪಂದ್ಯವನ್ನು ಆಡುವ ಊಹಾಪೋಹವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬುಧವಾರ ತಳ್ಳಿಹಾಕಿದೆ, ಇದು ಶುದ್ಧ ಕಲ್ಪನೆ ಎಂದು ಬಣ್ಣಿಸಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ತನ್ನ ಲೀಗ್ ಪಂದ್ಯಗಳನ್ನು ಆಡುವ ಬಗ್ಗೆ ಚರ್ಚಿಸಲಾಗಿದೆ ಎಂಬ ವರದಿಗಳ ನಂತರ ಐಸಿಸಿ ನಿರಾಕರಣೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ವಿರಾಟ ದಾಖಲೆ ಬರೆಯಲಿದ್ದಾರೆ ಕೊಹ್ಲಿ ! ಆಗಲಿದ್ದಾರೆ ವಿಶ್ವದ ಮೊದಲ ಸಾಧಕ


"PCB ಮುಖ್ಯಸ್ಥ ನಜಮ್ ಸೇಥಿ ಅವರು ಬಾಂಗ್ಲಾದೇಶದ ಕೌಂಟರ್‌ಪರ್ಟ್ ನಜ್ಮುಲ್ ಹಸನ್ ಪಾಪೋನ್ ಅವರೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿದ್ದಾರೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದು ಖಚಿತವಾಗಿ ಹೇಳಬಹುದು. ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ಆಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ” ಎಂದು ಐಸಿಸಿ ಬೋರ್ಡ್ ತಿಳಿಸಿದೆ,


ವೀಸಾವನ್ನು ಪಡೆದುಕೊಳ್ಳುವುದು ಚರ್ಚೆಯ ವಿಷಯವಾಗಿದೆ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಎಲ್ಲಾ ಸಹಾಯದ ಭರವಸೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. “ವೀಸಾ ಪಡೆಯಲು ಯಾವುದೇ ತೊಂದರೆಯಾಗುವುದಿಲ್ಲ. ಎಲ್ಲಾ ಭಾಗವಹಿಸುವ ದೇಶಗಳಿಗೆ ಸಮಯಕ್ಕೆ ವೀಸಾಗಳನ್ನು ನೀಡಲಾಗುತ್ತದೆ” ಎಂದು ಬಿಸಿಸಿಐ ಹೇಳಿದೆ.


ಏಷ್ಯಾ ಕಪ್ ಆತಿಥ್ಯಕ್ಕೆ ಒತ್ತಡ ಸೃಷ್ಟಿ!


ಇಡೀ ಏಷ್ಯಾ ಕಪ್ ಅನ್ನು ಆತಿಥ್ಯ ವಹಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಪಿಸಿಬಿ ಇದನ್ನು ಮಾಡುತ್ತಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಗಳು ಅರ್ಥಮಾಡಿಕೊಂಡಿದ್ದಾರೆ. ಆದರೆ ಇದು ಕಾರ್ಯಸಾಧ್ಯವಾದ ಪರಿಹಾರವಾಗಿ ಕಾಣುತ್ತಿಲ್ಲ. ಇನ್ನು ಬಿಸಿಸಿಐ ಮೂಲಗಳು, "ಇದು ಏಷ್ಯಾ ಕಪ್ ಸಮಸ್ಯೆಯಿಂದಾಗಿ ಪಿಸಿಬಿ ಪ್ರಾರಂಭಿಸಿದ ಕೆಲವು ರೀತಿಯ ಒತ್ತಡದ ತಂತ್ರ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಅಂತಿಮವಾಗಿ ಏಷ್ಯಾ ಕಪ್ ಯುಎಇ ಅಥವಾ ಕತಾರ್‌ನಲ್ಲಿ ಆಯೋಜಿಸಬಹುದು. ಬಹುಶಃ ಪಾಕಿಸ್ತಾನವೂ ಆಡಬೇಕಾಗುತ್ತದೆ ಈ ಎರಡು ದೇಶಗಳಲ್ಲಿ ಒಂದರಲ್ಲಿ ಪಂದ್ಯಗಳು ನಡೆಯುತ್ತವೆ” ಎಂದು ಹೇಳಿದೆ.


ಇದನ್ನೂ ಓದಿ: IPL 2023: ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವುದು ಇದೇ ತಂಡ: ಸಾಕ್ಷಿ ಹೇಳುತ್ತಿದೆ ಈ 4 ಕಾರಣಗಳು


ಏಷ್ಯಾ ಕಪ್ ವಿವಾದ:


ಏಷ್ಯಾ ಕಪ್‌ ಪಂದ್ಯ ಆಡಲು ಭಾರತವು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ. ಹೀಗಾಹಿ ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್  ಕೌನ್ಸಿಲ್ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.