Team India 2023 schedule: 2023ರಲ್ಲಿ ಹೀಗಿರಲಿದೆ ಟೀಂ ಇಂಡಿಯಾದ ಕ್ರಿಕೆಟ್ ವೇಳಾಪಟ್ಟಿ
Team India 2023 schedule: ಭಾರತ ತಂಡ ಸದ್ಯ ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಸರಣಿ ಮುಗಿಯುತ್ತಿದ್ದಂತೆ, ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಚಟ್ಟೋಗ್ರಾಮ್‌ನಲ್ಲಿ ಆರಂಭವಾಗಲಿದೆ. ಇದಾದ ನಂತರ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರು ಸ್ವದೇಶಿ ODI ಮತ್ತು T20 ಪಂದ್ಯಗಳನ್ನು ಆಡಲಿದೆ.
Team India 2023 schedule: ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಡಿಸೆಂಬರ್ 7 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಪಂದ್ಯದ ಬಳಿಕ ಟೆಸ್ಟ್ ಆಡಲಿದೆ. ಇದು ಟೀಂ ಇಂಡಿಯಾದ ವರ್ಷ ಕೊನೆಯ ಟೆಸ್ಟ್ ಆಗಲಿದೆ. ಇದಾದ ಬಳಿಕ ಅಂದರೆ ಮುಂದಿನ ವರ್ಷ 2023 ರಲ್ಲಿ ಭಾರತ ಸಾಲು ಸಾಲು ಸರಣಿಗಳಲ್ಲಿ ಭಾಗಿಯಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ, ಭಾರತ 2023ರಲ್ಲಿ ಒಟ್ಟು 8 ಟೆಸ್ಟ್‌ಗಳು, 18 ODIಗಳು ಮತ್ತು 17 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಇದರ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Team India : ಭಾರತದ ಕಳಪೆ ಪ್ರದರ್ಶನದಿಂದ ಕಂಗೆಟ್ಟ ಬಿಸಿಸಿಐ : ಈಗ ಟಿ20 ಟೀಂಗೆ ಹೊಸ 'BOSS'
ಭಾರತ ತಂಡ ಸದ್ಯ ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಸರಣಿ ಮುಗಿಯುತ್ತಿದ್ದಂತೆ, ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಚಟ್ಟೋಗ್ರಾಮ್‌ನಲ್ಲಿ ಆರಂಭವಾಗಲಿದೆ. ಇದಾದ ನಂತರ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರು ಸ್ವದೇಶಿ ODI ಮತ್ತು T20 ಪಂದ್ಯಗಳನ್ನು ಆಡಲಿದೆ.
ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸರಣಿಯ ಬಳಿಕ ನ್ಯೂಜಿಲೆಂಡ್ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಕಿವೀಸ್ ತಂಡವು ಜನವರಿ ಅಂತ್ಯದ ವೇಳೆಗೆ ಭಾರತದಲ್ಲಿ ಮೂರು ODI ಮತ್ತು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇನ್ನು ಈ ಸರಣಿಯು ಫೆಬ್ರವರಿ 2023ರ ವರೆಗೆ ಮುಂದುವರಿಯಲಿದೆ. ಇದಾದ ಬಳಿಕ ಫೆಬ್ರವರಿ-ಮಾರ್ಚ್ 2023ರಲ್ಲಿ ಭಾರತವು ತವರಿನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಾಗಿದ್ದು, 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವೂ ಆಗಿರುತ್ತದೆ.
2023ರಲ್ಲಿ ಭಾರತದ ಕ್ರಿಕೆಟ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ:
ಭಾರತ vs ಶ್ರೀಲಂಕಾ: ಜನವರಿ 2023
ಭಾರತ vs ನ್ಯೂಜಿಲೆಂಡ್: ಜನವರಿ–ಫೆಬ್ರವರಿ 2023
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಫೆಬ್ರವರಿ–ಮಾರ್ಚ್ 2023
ವೆಸ್ಟ್ ಇಂಡೀಸ್ vs ಭಾರತ: ಜುಲೈ–ಆಗಸ್ಟ್ 2023 (2 ಟೆಸ್ಟ್, 3 ODI ಮತ್ತು 3 T-20 ಅಂತರಾಷ್ಟ್ರೀಯ)
ಏಷ್ಯಾ ಕಪ್ 2023 (ಪಾಕಿಸ್ತಾನ): ಸೆಪ್ಟೆಂಬರ್ 2023
ಭಾರತ vs ಆಸ್ಟ್ರೇಲಿಯಾ: ಸೆಪ್ಟೆಂಬರ್ 2023 (3 ODIಗಳು)
ICC ಪುರುಷರ ಕ್ರಿಕೆಟ್ ವಿಶ್ವಕಪ್ 2023: ಅಕ್ಟೋಬರ್ - ನವೆಂಬರ್ 2023
ಭಾರತ vs ಆಸ್ಟ್ರೇಲಿಯಾ: ನವೆಂಬರ್ - ಡಿಸೆಂಬರ್ 2023 (5 T20Is)
ಭಾರತ vs ದಕ್ಷಿಣ ಆಫ್ರಿಕಾ: ಡಿಸೆಂಬರ್ 2023 - ಜನವರಿ 2024 (2 ಟೆಸ್ಟ್, 3 ODIಗಳು ಮತ್ತು 3 T20)ರ ವರೆಗೆ ನಡೆಯಲಿದೆ.
ಇದನ್ನೂ ಓದಿ: ಮಗನನ್ನು ಡ್ರೈವ್‌ಗೆ ಕರೆದೊಯ್ಯದ ಶೋಯೆಬ್ : ಆಗಿದ್ರೆ.. ಸಾನಿಯಾ ಡೈವೋರ್ಸ್ ಸುಳ್ಳಾ ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.