Rohit Sharma Abuse Washington Sundar: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಡಿದ ಈ ಒಂದು ಕೆಲಸ ತಲೆತಗ್ಗಿಸುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಆಟಗಾರನನ್ನು ನಿಂದಿಸಿದ್ದರು. ಕೊನೆಯ ಕೆಲವು ಓವರ್‌ಗಳಲ್ಲಿ ಪಂದ್ಯ ಕೈ ತಪ್ಪುತ್ತಿರುವುದನ್ನು ಕಂಡು ನಾಯಕ ರೋಹಿತ್ ಶರ್ಮಾ ಸಿಟ್ಟುಗೊಂಡಿದ್ದು, ಪರಿಣಾಮ ಮೈದಾನದಲ್ಲಿಯೇ ಆಟಗಾರನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Mehidy Hasan : ಭಾರತ ಸೋಲಿಸಿದ ಈ 25 ವರ್ಷದ ಬಾಂಗ್ಲಾದ ಮೆಹಿದಿ ಹಸನ್ ಯಾರು ಗೊತ್ತಾ?
ಲೈವ್ ಪಂದ್ಯದ ವೇಳೆ ರೋಹಿತ್ ಶರ್ಮಾ ಬೈಯ್ಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಇನಿಂಗ್ಸ್‌ನ 43 ನೇ ಓವರ್‌ನಲ್ಲಿ ನಡೆದಿದೆ. ಶಾರ್ದೂಲ್ ಠಾಕೂರ್ ಅವರ ನಾಲ್ಕನೇ ಎಸೆತದಲ್ಲಿ ಮೆಹದಿ ಹಸನ್ ಮಿರಾಜ್ ಅವರ ಕ್ಯಾಚ್ ಪಡೆಯಲು ವಾಷಿಂಗ್ಟನ್ ಸುಂದರ್ ಪ್ರಯತ್ನಿಸಲಿಲ್ಲ. ಇದರಿಂದ ಕೋಪಗೊಂಡ ರೋಹಿತ್ ಕೆಟ್ಟದಾಗಿ ನಿಂದಿಸಿದ್ದಾರೆ.
ಕೊನೆಯ ಎಸೆತದಲ್ಲಿ ಕೆ ಎಲ್ ರಾಹುಲ್ ಮೆಹದಿ ಹಸನ್ ಮಿರಾಜ್ ಅವರ ಕ್ಯಾಚ್ ಅನ್ನು ಸಹ ಕೈಬಿಟ್ಟರು. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಮೆಹದಿ ಹಸನ್ ಮಿರಾಜ್ ಅವರ ಕ್ಯಾಚ್ ಪಡೆಯಲು ಪ್ರಯತ್ನಿಸದಿದ್ದಾಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಿಟ್ಟು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ವಾಷಿಂಗ್ಟನ್ ಸುಂದರ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದು, ಅದರ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ.
ಬಾಂಗ್ಲಾದೇಶದ ಇನ್ನಿಂಗ್ಸ್‌ನ 43 ನೇ ಓವರ್‌ನಲ್ಲಿ, ಶಾರ್ದೂಲ್ ಠಾಕೂರ್ ಅವರ ನಾಲ್ಕನೇ ಎಸೆತದಲ್ಲಿ ಮೆಹದಿ ಹಸನ್ ಮಿರಾಜ್ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಬ್ಯಾಟ್ ನ ಅಂಚಿಗೆ ತಲುಪಿ ಕ್ಯಾಚ್ ಸಿಗುವ ಹಂತಕ್ಕೆ ಬಂದು ತಲುಪಿತ್ತು. ಆದರೆ ಥರ್ಡ್ ಮ್ಯಾನ್‌ನಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರು ಕ್ಯಾಚ್ ಹಿಡಿಯಲು ಪ್ರಯತ್ನಿಸಲಿಲ್ಲ. ಈ ಹಂತ ಬಹಳ ಆಶ್ಚರ್ಯಕರವಾಗಿ ಕಂಡಿತ್ತು. ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯದಿದ್ದಾಗ ನಾಯಕ ರೋಹಿತ್ ಶರ್ಮಾ ಅವರನ್ನು ನಿಂದಿಸುತ್ತಿರುವುದು ಕಂಡುಬಂದಿತು.
ಇದನ್ನೂ ಓದಿ: IND vs BAN: ಸಿಂಪಲ್ ಕ್ಯಾಚ್ ಕೈಚೆಲ್ಲಿದ ರಾಹುಲ್ ಬಗ್ಗೆ ರೋಹಿತ್ ನೀಡಿದ್ರು ಆಘಾತಕಾರಿ ಪ್ರತಿಕ್ರಿಯೆ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ವಿರುದ್ಧ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ. “ಯುವ ಆಟಗಾರರನ್ನು ನಿಂದಿಸುತ್ತಿರುವುದಕ್ಕೆ ರೋಹಿತ್ ಶರ್ಮಾಗೆ ನಾಚಿಕೆ ಆಗಬೇಕು” ಎಂದು ಓರ್ವ ಸೋಶಿಯಲ್ ಮೀಡಿಯಾ ಯೂಸರ್ ಹೇಳಿದ್ದಾರೆ. ಮತ್ತೋರ್ವ ಬಳಕೆದಾರ ಸುಂದರ್ ವರ್ತನೆಗೂ ಅಸಮಾಧಾನ ತೋರಿದ್ದಾರೆ. “ನೀವು ನಿಮ್ಮ ಕಣ್ಣುಗಳನ್ನು ಪರೀಕ್ಷಿಸಬೇಕು ಎಂದು ನಾನು ಭಾವಿಸುತ್ತೇನೆ. ಫೀಲ್ಡರ್ ಒಂದು ಇಂಚು ಕೂಡ ಮುಂದಕ್ಕೆ ಚಲಿಸಲಿಲ್ಲ. ಇದು ಬೇಜವಾಬ್ದಾರಿ ವರ್ತನೆಯನ್ನು ತೋರಿಸುತ್ತದೆ. ನಾವು ನಮ್ಮ ಹೃದಯವನ್ನು ಬಾಯಿಯಲ್ಲಿ ಇಟ್ಟುಕೊಂಡು ಭಾರತದ ಗೆಲುವಿಗಾಗಿ ಪಂದ್ಯವನ್ನು ನೋಡುತ್ತಿದ್ದೇವೆ. ಆದರೆ ಇದು ನಮಗೆ ಅವಮಾನದಂತಾಗಿದೆ” ಎಂದು ಕೆಂಡಕಾರಿದ್ದಾರೆ. ಮತ್ತೊಬ್ಬರು, “ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವ ಸ್ಥಾನದಲ್ಲಿ ಇಲ್ಲ” ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.