IND vs BAN: 9 ವಿಕೆಟ್ ಪತನದ ನಂತರವೂ ಗೆದ್ದ ಬಾಂಗ್ಲಾ: ಗೆಲುವಿಗೆ ಕಾರಣ ಇದುವೇ ಎಂದ ಆಟಗಾರ

IND vs BAN:  ಭಾರತದ ವಿರುದ್ಧದ ಈ ರೋಚಕ ಗೆಲುವಿನ ನಂತರ ಬಾಂಗ್ಲಾದೇಶದ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮೆಹದಿ ಹಸನ್ ಮಿರಾಜ್ ಭಾರತದ ವಿರುದ್ಧ ಗೆಲುವು ಸಾಧಿಸಲು ಇದುವೇ ಪ್ರಮುಖ ಕಾರಣ ಎಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 40ನೇ ಓವರ್‌ನಲ್ಲಿ ಬಾಂಗ್ಲಾದೇಶವು 4 ವಿಕೆಟ್ ನಷ್ಟಕ್ಕೆ 128ರನ್ ಗಳಿಸಿತ್ತು.

Written by - Bhavishya Shetty | Last Updated : Dec 5, 2022, 02:11 PM IST
    • ಬಾಂಗ್ಲಾದೇಶ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು
    • 9 ವಿಕೆಟ್ ಪತನದ ನಂತರವೂ ಗೆದ್ದ ಬಾಂಗ್ಲಾ
    • ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡುಕೊಂಡ ಬಾಂಗ್ಲಾ
IND vs BAN: 9 ವಿಕೆಟ್ ಪತನದ ನಂತರವೂ ಗೆದ್ದ ಬಾಂಗ್ಲಾ: ಗೆಲುವಿಗೆ ಕಾರಣ ಇದುವೇ ಎಂದ ಆಟಗಾರ title=
Mehidy Hasan Miraz

IND vs BAN: ಬಾಂಗ್ಲಾದೇಶ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಅಂತಿಮ ಹಂತದಲ್ಲಿ ಕಳಪೆ ಫೀಲ್ಡಿಂಗ್ ನಿಂದಾಗಿ ಟೀಂ ಇಂಡಿಯ ಮರೆಯಲಾಗದಂತಹ ಸೋಲನುಭವಿಸಿದೆ. 9 ವಿಕೆಟ್‌ಗಳ ಪತನದ ನಂತರ ಬಾಂಗ್ಲಾದೇಶ ತಂಡ ಕೊನೆಯ ವಿಕೆಟ್‌ಗೆ 51 ರನ್ ಪೇರಿಸುವ ಮೂಲಕ ಜಯವನ್ನು ದಾಖಲಿಸಿತ್ತು. ಬಾಂಗ್ಲಾದೇಶದ ಆಲ್ ರೌಂಡರ್ ಮೆಹದಿ ಹಸನ್ ಮಿರಾಜ್ ಮತ್ತು ಮುಸ್ತಾಫಿಜುರ್ ರೆಹಮಾನ್ ಜೊತೆಗೂಡಿ ಟೀಂ ಇಂಡಿಯಾದ ಗೆಲುವನ್ನು ಕೊನೆ ಹಂತದಲ್ಲಿ ಕಸಿದುಕೊಂಡರು.

ಇದನ್ನೂ ಓದಿ: IND vs BAN: ಸಿಂಪಲ್ ಕ್ಯಾಚ್ ಕೈಚೆಲ್ಲಿದ ರಾಹುಲ್ ಬಗ್ಗೆ ರೋಹಿತ್ ನೀಡಿದ್ರು ಆಘಾತಕಾರಿ ಪ್ರತಿಕ್ರಿಯೆ

9 ವಿಕೆಟ್ ಪತನದ ನಂತರವೂ ಗೆದ್ದ ಬಾಂಗ್ಲಾ!

ಭಾರತದ ವಿರುದ್ಧದ ಈ ರೋಚಕ ಗೆಲುವಿನ ನಂತರ ಬಾಂಗ್ಲಾದೇಶದ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮೆಹದಿ ಹಸನ್ ಮಿರಾಜ್ ಭಾರತದ ವಿರುದ್ಧ ಗೆಲುವು ಸಾಧಿಸಲು ಇದುವೇ ಪ್ರಮುಖ ಕಾರಣ ಎಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 40ನೇ ಓವರ್‌ನಲ್ಲಿ ಬಾಂಗ್ಲಾದೇಶವು 4 ವಿಕೆಟ್ ನಷ್ಟಕ್ಕೆ 128ರನ್ ಗಳಿಸಿತ್ತು. ಆದರೆ ಬಳಿಕ 136 ರನ್ ಆಗುವಷ್ಟರಲ್ಲಿ 9 ವಿಕೆಟ್ ಗಳು ಪತನಗೊಂಡಿತ್ತು. ಕ್ರೀಡಾ ಪ್ರೇಮಿಗಳು ಇದು ಭಾರತದ ಗೆಲುವಿನ ಮುನ್ಸೂಚನೆ ಎಂದು ಭಾವಿಸಿದ್ದರು. ಬಾಂಗ್ಲಾದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಮಹಮ್ಮದುಲ್ಲಾ ಮತ್ತು ಮುಶ್ಫಿಕರ್ ರಹೀಮ್ ಅವರು ಬ್ಯಾಕ್ ಟು ಬ್ಯಾಕ್ ಔಟಾದಾಗ ಬಾಂಗ್ಲಾದೇಶ ವಿರುದ್ಧ ಈ ಪಂದ್ಯವನ್ನು ಭಾರತ ತಂಡವು ಸುಲಭವಾಗಿ ಗೆಲ್ಲುತ್ತದೆ ಎಂದು ಅನಿಸಿತ್ತು. ಆದರೆ ಆಗಿದ್ದೇ ಬೇರೆ.

ಆದರೆ ಮೆಹದಿ ಹಸನ್ ಮಿರಾಜ್ ಮತ್ತು ಮುಸ್ತಫಿಜುರ್ ರೆಹಮಾನ್ ಬಾಂಗ್ಲಾ ತಂಡಕ್ಕೆ ನೆರವಾದರು. ರೆಹಮಾನ್ ಅವರು ಔಟಾಗದೆ 10 ರನ್ ಗಳಿಸಿದ್ದಾಗ ಎರಡು ಬೌಂಡರಿಗಳನ್ನು ಹೊಡೆದರು. ಅದೇ ಸಮಯದಲ್ಲಿ, ಮೆಹದಿ ಹಸನ್ ಮಿರಾಜ್ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಅವರು ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಬಾಂಗ್ಲಾದೇಶಕ್ಕೆ ಉತ್ತಮ ಕಂಬ್ಯಾಕ್ ಮಾಡಿದರು.

ಬಾಂಗ್ಲಾದೇಶ ತಂಡಕ್ಕೆ 1-0 ಮುನ್ನಡೆ

ಡ್ರಾಪ್ ಕ್ಯಾಚ್‌ಗಳು, ಕಳಪೆ ಫೀಲ್ಡಿಂಗ್, ಓವರ್‌ಥ್ರೋ ಮತ್ತು ಕಳಪೆ ಬೌಲಿಂಗ್‌ನಿಂದಾಗಿ ಭಾರತ ಕೊನೆಯ ಆರು ಓವರ್‌ಗಳಲ್ಲಿ ಒತ್ತಡಕ್ಕೆ ಸಿಲುಕಿತು. ಮೆಹಿದಿ ಮತ್ತು ಮುಸ್ತಫಿಜುರ್ ಅವರು ಕೊನೆಯ ವಿಕೆಟ್‌ನಲ್ಲಿ ಅದ್ಭುತ ಪ್ರತಿದಾಳಿ ನಡೆಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡುಕೊಂಡರು.

ಮೆಹದಿ ಹಸನ್ ಈ ಗೆಲುವಿನ ಬಳಿಕ ಮಾತನಾಡಿದ್ದು, “ಅಲ್ಲಾ ಧನ್ಯವಾದಗಳು. ನಾನು ನಿಜವಾಗಿಯೂ ಸಂತೋಷ ಮತ್ತು ಉತ್ಸುಕನಾಗಿದ್ದೇನೆ. ಮುಸ್ತಫಿಜುರ್ ಮತ್ತು ನಾನು ನಂಬಿಕೆಯನ್ನು ಹೊಂದಬೇಕು ಎಂದು ಭಾವಿಸಿದೆವು. ಸುಮ್ಮನಿದ್ದು 20 ಎಸೆತಗಳನ್ನು ಆಡುವಂತೆ ಹೇಳಿದ್ದೆ. ಬಳಿಕ ಕೇವಲ ಒಂದು ಕ್ಷೇತ್ರವನ್ನು ಕೇಂದ್ರೀಕರಿಸಲು ಮತ್ತು ಆ ತಂತ್ರವನ್ನೇ ಅನುಸರಿಸಲು ಸೂಚಿಸುತ್ತಿದ್ದೆ” ಎಂದು ಗೆಲುವಿನ ರಹಸ್ಯ ಹೇಳಿದರು.  

ಇದನ್ನೂ ಓದಿ: Rohit Sharma Abuse Washington Sundar: ಮೈದಾನದಲ್ಲೇ ವಾಷಿಂಗ್ಟನ್ ಸುಂದರ್ ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ರೋಹಿತ್ ಶರ್ಮಾ!!

ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಮೆಹದಿ, 'ನಾನು ಬೌಲಿಂಗ್ ಮಾಡುವುದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ವಿಕೆಟ್ ಪಡೆಯಲು ಪ್ರಯತ್ನಿಸಿದೆ. ನಾನು ಬೌಲಿಂಗ್ ಮಾಡುವುದನ್ನು ಆನಂದಿಸುತ್ತೇನೆ. ಈ ಪಂದ್ಯ ನನಗೆ ನಿಜಕ್ಕೂ ಸ್ಮರಣೀಯ” ಎಂದು ನುಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News