ನವದೆಹಲಿ: ಟೋಕಿಯೊ ಒಲಂಪಿಕ್ಸ್ ನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು(PV Sindhu)ಕನಸು ನುಚ್ಚುನೂರಾಗಿದೆ.


COMMERCIAL BREAK
SCROLL TO CONTINUE READING

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಹೀನಾಯ ಸೋಲು ಕಂಡಿದ್ದಾರೆ. ಈ ಮೂಲಕ ಟೋಕಿಯೊ ಒಲಂಪಿಕ್ಸ್(Tokyo Olympics 2020) ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಸಿಂಧು ಚಿನ್ನದ ಬೇಟೆಯಾಡುತ್ತಾರೆ ಎಂದುಕೊಂಡಿದ್ದ ಕೋಟ್ಯಂತರ ಭಾರತೀಯರ ಹೃದಯ ಒಡೆದಂತಾಗಿದೆ.


ಇದನ್ನೂ ಓದಿ: Tokyo Olympics: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಬಾಕ್ಸರ್ ಲೊವ್ಲಿನಾ


40 ನಿಮಿಷಗಳ ಕಾಲ ನಡೆದ ಆಟದಲ್ಲಿ ಸಿಂಧು(PV Sindhu) ಆಘಾತ ಅನುಭವಿಸಿದರು. ತೈವಾನ್ ಆಟಗಾರ್ತಿ ತೈ ಜು ಯಿಂಗ್(Tai Tzu Ying)ವಿರುದ್ಧ 18-21, 12-21ರ ನೇರ ಸೆಟ್ ಗಳಿಂದ ಸೋಲು ಕಂಡರು. ಆರಂಭದಿಂದಲೂ ಅತ್ಯಂತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ತೈವಾನ್ ಆಟಗಾರ್ತಿ ಎದುರು ಸಿಂಧು ಕೊನೆವರೆಗೂ ಚೇತರಿಸಿಕೊಳ್ಳಲು ಆಗಲಿಲ್ಲ. ಒಂದು ಹಂತದಲ್ಲಿ ಮೊದಲ ಸೆಟ್ ನಲ್ಲಿ 17-17 ಸಮಬಲದ ಹೋರಾಟ ನಡೆಯುತ್ತಿತ್ತು. ಆದರೆ ತೈ ಜು ಯಿಂಗ್ ಆಕ್ರಮಣಕಾರಿ ಆಟದ ಮೂಲಕ ಮೊದಲ ಸೆಟ್ ತಮ್ಮದಾಗಿಸಿಕೊಂಡು ಮುನ್ನಡೆ ಸಾಧಿಸಿದರು.


MS Dhoni : ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ಎಂಎಸ್ ಧೋನಿ : ಈ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ!


2ನೇ ಸೆಟ್ ನಲ್ಲಿಯೂ ತೈ ಜು ಯಿಂಗ್(Tai Tzu Ying) ಆಕ್ರಮಣಕಾರಿ ಆಟ ಮುಂದುವರೆಯಿತು. ಪರಿಣಾಮ 2 ನೇರ ಸೆಟ್ ಗಳಲ್ಲಿ ಪಂದ್ಯ ಕೈಚೆಲ್ಲಿದ ಸಿಂಧು ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. 3ನೇ ಒಲಿಂಪಿಕ್ಸ್ ಆಡುತ್ತಿರುವ ತೈ ಜು ಯಿಂಗ್ ಇದೇ ಮೊದಲ ಬಾರಿ ಒಲಿಂಪಿಕ್ಸ್ ಪದಕ ಪಡೆಯಲಿದ್ದಾರೆ. 2016ರ ರಿಯೋ ಒಲಂಪಿಕ್ಸ್(Rio Olympic Games 2016) ನಲ್ಲಿ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದ ಸಿಂಧು ಮೇಲೆ ಈ ಬಾರಿ ಬಹುದೊಡ್ಡ ನಿರೀಕ್ಷೆ ಇತ್ತು. ಆದರೆ ಆ ಚಿನ್ನದ ಪದಕದ ನಿರೀಕ್ಷೆ ಹುಸಿಯಾಗಿದೆ.  ಸಿಂಧು ಕಂಚಿನ ಪದಕಕ್ಕಾಗಿ ಮಾತ್ರ ಕಾದಾಟ ನಡೆಸಬೇಕಿದೆ.


 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ