VIDEO: ಐಸಿಸಿ ಟಿ 20 ವಿಶ್ವಕಪ್ 2021 ಗೀತೆ ಬಿಡುಗಡೆ, ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡ Virat - Pollard
ICC T20 World Cup anthem launch: ಐಸಿಸಿ ಪುರುಷರ ಟಿ 20 ವಿಶ್ವಕಪ್ಗಾಗಿ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಕೊಹ್ಲಿ ಜೊತೆಗೆ ವೆಸ್ಟ್ ಇಂಡೀಸ್ ನಾಯಕ ಪೊಲಾರ್ಡ್, ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಕೂಡ ಇದ್ದಾರೆ.
ನವದೆಹಲಿ: ICC T20 World Cup anthem launch- ಐಪಿಎಲ್ 2021 (IPL 2021) ರ ನಂತರ ಐಸಿಸಿ ಪುರುಷರ ಟಿ 20 ವಿಶ್ವಕಪ್ (ICC T20 World Cup ) ಆರಂಭವಾಗಲಿದೆ. ಈ ಪಂದ್ಯಾವಳಿಯ ಆರಂಭಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ 20 ವಿಶ್ವಕಪ್ ಗಾಗಿ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಿದೆ.
ಟಿ 20 ವಿಶ್ವಕಪ್ ಗೀತೆ ಬಿಡುಗಡೆ:
ಐಸಿಸಿ ಟಿ 20 ವಿಶ್ವಕಪ್ (ICC T20 World Cup) ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ. ಟಿ 20 ವಿಶ್ವಕಪ್‌ನ ಈ ಗೀತೆಯಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ (Indian captain Virat Kohli) ಮತ್ತು ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರ ಸಂಗೀತ ನಿರ್ದೇಶನದಲ್ಲಿ ರಚಿಸಲಾದ ಈ ಅನಿಮೇಟೆಡ್ ವಿಡಿಯೋ ವಿಶ್ವದಾದ್ಯಂತ ಯುವ ಟಿ 20 ಅಭಿಮಾನಿಗಳನ್ನು ಮತ್ತು ಕೆಲವು ಕ್ರೀಡಾಪಟುಗಳನ್ನು ಒಳಗೊಂಡಿದೆ.
ಕೊಹ್ಲಿ ಮತ್ತು ಪೊಲಾರ್ಡ್ ಹೊರತುಪಡಿಸಿ, ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ (Rashid Khan) ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಕೂಡ ಈ ಗೀತೆಯಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
IPL Big News: ಸನ್‌ರೈಸರ್ಸ್ ವೇಗಿ ಟಿ.ನಟರಾಜನ್ ಗೆ ಕೋವಿಡ್ ದೃಢ; ಪಂದ್ಯ ನಡೆಯುತ್ತೋ ಇಲ್ಲವೋ..?
ಕ್ರಿಕೆಟ್ ನ ಮಹಾಕುಂಭದ ಬಗ್ಗೆ ಕ್ರಿಕೆಟಿಗರು ಹೇಳಿದ್ದೇನು?
'ಟಿ 20 ಕ್ರಿಕೆಟ್ (T20 cricket) ತನ್ನ ಅಭಿಮಾನಿಗಳನ್ನು ಆಕರ್ಷಿಸಲು ನಿರಂತರವಾಗಿ ಹೊಸತನವನ್ನು ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಪ್ರಪಂಚದಾದ್ಯಂತದ ಅನೇಕ ಜನರು ಈ ಪಂದ್ಯಾವಳಿಯನ್ನು ವೀಕ್ಷಿಸುತ್ತಾರೆ, ನಾನು ಅವರನ್ನು ದುಬೈನಲ್ಲಿ ಮನರಂಜಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ (West Indies captain Kieron Pollard) ಹೇಳಿದ್ದನ್ನು ಉಲ್ಲೇಖಿಸಲಾಗಿದೆ.
ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Australian all-rounder Glenn Maxwell) - ಐಸಿಸಿ ಟಿ 20 ವಿಶ್ವಕಪ್ ತುಂಬಾ ಕಷ್ಟಕರ ಮತ್ತು ವಿನೋದಮಯವಾಗಿದೆ. ಈ ಟ್ರೋಫಿಗೆ ಅರ್ಹವಾದ ಅನೇಕ ತಂಡಗಳಿವೆ. ಪ್ರತಿ ಪಂದ್ಯವೂ ಫೈನಲ್‌ನಂತೆ ಇರುತ್ತದೆ. ನಾವು ಅದನ್ನು ಆದಷ್ಟು ಬೇಗ ಆರಂಭಿಸಲು ಬಯಸುತ್ತೇವೆ '. ಕೋವಿಡ್ -19 ಸಾಂಕ್ರಾಮಿಕದ ನಂತರ, ವಿಶ್ವದ 16 ದೇಶಗಳು ಅತಿದೊಡ್ಡ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.
ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭವಾಗಲಿದೆ :
ಅಕ್ಟೋಬರ್ 17 ರಿಂದ ಯುಎಇಯಲ್ಲಿ (UAE) ಐಸಿಸಿ ಟಿ 20 ವಿಶ್ವಕಪ್ (ICC T20 World Cup) ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾವಳಿಯ ಅಂತಿಮ ಪಂದ್ಯ ನವೆಂಬರ್ 16 ರಂದು ನಡೆಯಲಿದೆ. ವಾಸ್ತವವಾಗಿ ಈ ಪಂದ್ಯಾವಳಿಯು ಐಪಿಎಲ್ ಫೈನಲ್‌ನ ಕೆಲವು ದಿನಗಳ ನಂತರ ಆರಂಭವಾಗುತ್ತದೆ. ಅಕ್ಟೋಬರ್ 15 ರಂದು ಐಪಿಎಲ್ ಫೈನಲ್ ಮುಗಿದ ತಕ್ಷಣ ಈ ಪಂದ್ಯಾವಳಿ ಆರಂಭವಾಗಲಿದೆ.
ಇದನ್ನೂ ಓದಿ- IPL 2021: ರೋಹಿತ್ ಶರ್ಮಾ ಮಾಡಿದ ನೂತನ ದಾಖಲೆ ಏನು ಗೊತ್ತಾ?
ಪಂದ್ಯಾವಳಿಯ ವೇಳಾಪಟ್ಟಿ ಹೀಗಿರುತ್ತದೆ:
ಮೊದಲ ಸುತ್ತಿನಲ್ಲಿ 8 ತಂಡಗಳ ನಡುವೆ 12 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ನಾಲ್ಕು (ಪ್ರತಿ ಗುಂಪಿನಿಂದ ಅಗ್ರ ಎರಡು) ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ. ಎಂಟು ತಂಡಗಳಲ್ಲಿ ನಾಲ್ಕು (ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್, ನಮೀಬಿಯಾ, ಓಮನ್, ಪಪುವಾ ನ್ಯೂಗಿನಿಯಾ) ಮೊದಲ 12 ಶ್ರೇಯಾಂಕಿತ ಟಿ 20 ತಂಡಗಳಲ್ಲಿ ಸ್ಥಾನ ಪಡೆಯುವ ಮೂಲಕ ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ.
ಇದರ ನಂತರ 30 ಪಂದ್ಯಗಳನ್ನು ಸೂಪರ್ 12 ಹಂತದಲ್ಲಿ ಆಡಲಾಗುತ್ತದೆ. ಇದು ಅಕ್ಟೋಬರ್ 24 ರಿಂದ ಆರಂಭವಾಗಲಿದೆ. ಸೂಪರ್ 12 ರಲ್ಲಿ, ತಂಡಗಳನ್ನು ತಲಾ ಆರು ಜನರ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪಂದ್ಯಗಳು ಯುಎಇಯ ಮೂರು ಸ್ಥಳಗಳಲ್ಲಿ ನಡೆಯುತ್ತವೆ - ದುಬೈ, ಅಬುಧಾಬಿ ಮತ್ತು ಶಾರ್ಜಾ. ಇದರ ನಂತರ ಮೂರು ನಾಕೌಟ್ ಪಂದ್ಯಗಳು ನಡೆಯಲಿವೆ-ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.