ನವದೆಹಲಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಒಂದು ನಿರ್ದಿಷ್ಟ ಫ್ರಾಂಚೈಸಿ ವಿರುದ್ಧ 1000 ಕ್ಕೂ ಹೆಚ್ಚು ರನ್ ದಾಖಲಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಎರಡು ಫ್ರಾಂಚೈಸಿಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Video: 'ಧೋನಿ ರಿವ್ಯೂ ಸಿಸ್ಟಮ್' ಅನ್ನು ತಪ್ಪಿಸುವುದು ಭಾರೀ ಕಷ್ಟ, ಈ ರೀತಿ ಬ್ಯಾಟ್ಸ್‌ಮನ್ ಅನ್ನು ಚಿಂತೆಗೀಡು ಮಾಡಿದ ಮಹಿ
ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆದ ಮುಂಬೈ ಇಂಡಿಯನ್ಸ್ (Mumbai Indians) ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅವರು ಕೆಕೆಆರ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಇಯೊನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು.ರೋಹಿತ್ ಶರ್ಮಾ ತಂಡಕ್ಕೆ ಮರಳಿದಂತೆ ಮುಂಬೈ ಇಂಡಿಯನ್ಸ್ ಒಂದು ಬದಲಾವಣೆ ಮಾಡಿದೆ.
🚨 Landmark Alert🚨@ImRo45 becomes the first batsman to score 1⃣0⃣0⃣0⃣ runs or more against a team in the IPL. 👏 👏 #VIVOIPL #MIvKKR
Follow the match 👉 https://t.co/SVn8iKC4Hl pic.twitter.com/xU0er9xBcK
— IndianPremierLeague (@IPL) September 23, 2021
'ಒಳ್ಳೆಯ ಭಾವನೆ ಇದೆ. ಆಟವನ್ನು ಎದುರು ನೋಡುತ್ತಿದ್ದೇನೆ. ಕೇವಲ ಒಂದು ಬದಲಾವಣೆ - ಅನ್ಮೋಲ್ ಇಲ್ಲಾ ಎನ್ನುವುದಷ್ಟೇ. ಆದರೆ ತಪ್ಪಿರುವ ಕೆಲವು ಕ್ರಿಕೆಟ್ ಮೂಲಭೂತ ಅಂಶಗಳನ್ನು ನಾವು ಸರಿಯಾಗಿ ಮಾಡಬೇಕಾಗಿದೆ. ನಾವು ಅದರ ಬಗ್ಗೆ ಆಶಾದಾಯಕವಾಗಿದ್ದೇವೆ" ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದರು.
ಇದನ್ನೂ ಓದಿ: IPL 2021: ಮರಳುಗಾಡಿನಲ್ಲಿ ಐಪಿಎಲ್ ಹಬ್ಬ, ಮುಂಬೈ V/s ಚೆನ್ನೈ ಸೆಣಸಾಟ
ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸೋತಿತ್ತು ಮತ್ತು KKR ತನ್ನ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ದಾಖಲಿಸಿದೆ.ರೋಹಿತ್ ನೇತೃತ್ವದ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ ಕೆಕೆಆರ್ ಆರನೇ ಸ್ಥಾನದಲ್ಲಿದೆ.