ನವದೆಹಲಿ: ICC World Cup - ಐಪಿಎಲ್ 2021 ರ ಎರಡನೇ ಹಂತದ ರೋಮಾಂಚನವು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಆದರೆ ಕ್ರಿಕೆಟ್ ವಿಶ್ವಕಪ್ 2019 ಅನ್ನು ಆಡಿದ ಮತ್ತು ಐಸಿಸಿಯ ಪ್ರಮುಖ ಸದಸ್ಯನಾಗಿರುವ ಒಂದು ದೇಶವಿದೆ, ಅಲ್ಲಿ ಭಾರತದ ಮೆಗಾ ಟಿ 20 ಲೀಗ್‌ಗಳನ್ನು ವೀಕ್ಷಿಸುವುದನ್ನು ನಿಷೇಧಿಸಲಾಗಿದೆ .
ಅಫ್ಘಾನಿಸ್ಥಾನದಲ್ಲಿ IPL ವೀಕ್ಷಣೆಯ ಮೇಲೆ ಬ್ಯಾನ್
ಹೌದು, ನಾವು ಅಫ್ಘಾನಿಸ್ತಾನದ ಬಗ್ಗೆ ಮಾತನಾಡುತ್ತಿದ್ದೇವೆ, ಅಲ್ಲಿ ಐಪಿಎಲ್ 2021 (IPL 2021) ರ ನೇರ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 'ಇಸ್ಲಾಮಿಕ್ ವಿರೋಧಿ ವಿಷಯಗಳು' ಈ ನಿಷೇಧಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮಹಿಳೆಯರ ಕ್ರಿಕೆಟ್ ಆಟದ ಮೇಲೆ ನಿಷೇಧ
ಇತ್ತೀಚೆಗೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದಿದೆ, ಈ ಕಾರಣದಿಂದಾಗಿ ಕ್ರೀಡಾಕೂಟಗಳು ಸೇರಿದಂತೆ ಹಲವು ರೀತಿಯ ಮನರಂಜನೆಯನ್ನು ಅಲ್ಲಿ ನಿಷೇಧಿಸಲಾಗಿದೆ. ಈ ದೇಶದಲ್ಲಿ ಮಹಿಳೆಯರಿಗೆ ಯಾವುದೇ ಕ್ರೀಡೆಗಳನ್ನು ಆಡಲು ಅವಕಾಶವಿಲ್ಲ. ಆದರೆ, ಪುರುಷರಿಗೆ ಕ್ರಿಕೆಟ್ ಆಡಲು ಅವಕಾಶವಿದೆ.
ಮಹಿಳೆಯರಿಗೆ ಸಿಗಲಿದೆ ಅನುಮತಿ
ಅಫ್ಘಾನಿಸ್ತಾನದ ಹೊಸ ಡೈರೆಕ್ಟರ್ ಜನರಲ್ ಆಫ್ ಸ್ಪೋರ್ಟ್ಸ್ ಅಹ್ಮದ್ ರುಸ್ತಮಜಾಯಿ ಅವರನ್ನು ಮಹಿಳೆಯರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದೇ ಎಂದು ಪ್ರಶ್ನಿಸಲಾಗಿ ಅವರು ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ICC ಶಿಕ್ಷೆ ನೀಡುವ ಸಾಧ್ಯತೆ
ಐಸಿಸಿಯ ನಿಯಮಗಳ ಪ್ರಕಾರ, ಸಕ್ರಿಯ ಮಹಿಳಾ ಕ್ರಿಕೆಟ್ ತಂಡ ಹೊಂದಿರುವ ದೇಶಕ್ಕೆ ಮಾತ್ರ ಟೆಸ್ಟ್ ಆಡುವ ದೇಶದ ಸ್ಥಾನಮಾನ ನೀಡಲಾಗುತ್ತದೆ. ಆದರೆ, ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡವನ್ನು ಶಿಕ್ಷಿಸದಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಆಸ್ಟ್ರೇಲಿಯಾವನ್ನು ವಿನಂತಿಸಿದೆ.
ಅವಿತುಕೊಂಡ ಮಹಿಳಾ ಕ್ರಿಕೆಟ್ ಆಟಗಾರ್ತಿಯರು
ಈ ಕುರಿತು ಎಸ್ಬಿಎಸ್ ರೇಡಿಯೋ ಪಾಶ್ಟೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಸಿಬಿ ಚೇರ್ಮನ್ ಅಜೀಜುಲ್ಲಾ ಫಜಲಿ, ತಮ್ಮ ದೇಶದಲ್ಲಿ ಮಹಿಳೆಯರು ಕ್ರಿಕೆಟ್ ಆಡಲು ಸಾಧ್ಯವಾಗಲಿದೆ ಎಂದು ಇನ್ನೂ ಆಶಿಸುತ್ತೇನೆ ಎಂದು ಹೇಳಿದ್ದರು. 25 ಮಹಿಳಾ ಆಟಗಾರ್ತಿಯರ ತಂಡ ಅಫ್ಘಾನಿಸ್ತಾನದಲ್ಲಿ ಉಳಿಯಲು ನಿರ್ಧರಿಸಿದೆ. ಬಿಬಿಸಿ ವರದಿಯ ಪ್ರಕಾರ, ಮಹಿಳಾ ಕ್ರಿಕೆಟಿಗರು ಸದ್ಯ ಆಫ್ಘಾನಿಸ್ತಾನದಲ್ಲಿ ಅವಿತು ಕುಳಿತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ-IPL 2021, PBKS vs RR: ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ
ಧಮ್ಕಿ ಹಾಕಿದ ಕ್ರಿಕೆಟ್ ಆಸ್ಟ್ರೇಲಿಯಾ
ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಫ್ಘಾನಿಸ್ತಾನಕ್ಕೆ ಬೆದರಿಕೆಯೊಡ್ಡಿದ್ದು, ಮಹಿಳೆಯರಿಗೆ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡದಿದ್ದರೆ, ಅದರ ಟೆಸ್ಟ್ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಹೇಳಿದೆ. ತಾಲಿಬಾನ್‌ನ ಈ ನಿರ್ಧಾರವು ಅಫ್ಘಾನ್ ತಂಡದ ಟೆಸ್ಟ್ ಸ್ಥಿತಿಯನ್ನು ಕಸಿದುಕೊಳ್ಳಬಹುದು ಎಂದು ಅದು ಹೇಳಿದೆ.
ಇದನ್ನೂ ಓದಿ-IPL 2021: ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ತುತ್ತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು
T20 WC ಆಡಲಿದೆ ಆಫ್ಘಾನ್ ತಂಡ
ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಟವು ತುಂಬಾ ಜನಪ್ರಿಯವಾಗಿದೆ, ಅಫ್ಘಾನಿಸ್ತಾನ ತಂಡವು 2019 ರ ಐಸಿಸಿ ವಿಶ್ವಕಪ್ ಆಡಿದೆ ಮತ್ತು ಇದೀಗ ಟಿ 20 ವಿಶ್ವಕಪ್ 2021 ಯುಎಇ ಮತ್ತು ಓಮನ್ ನಲ್ಲಿ 17 ಅಕ್ಟೋಬರ್ ನಿಂದ 14 ನವೆಂಬರ್ ವರೆಗೆ ನಡೆಯಲಿದೆ. ಟಿ 20 ವಿಶ್ವಕಪ್ 2021)ನಲ್ಲಿ ಅಫ್ಘಾನಿಸ್ತಾನ ಭಾಗವಹಿಸಲಿದೆ.
ಇದನ್ನೂ ಓದಿ-ಶಾಂತ ಮನಸ್ಥಿತಿಗೆ ನೀರಜ್ ಚೋಪ್ರಾ ಕೊಟ್ಟ ಉಪಾಯವೇನು ಗೊತ್ತೇ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.