ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 52 ಫೈನಲ್ ನಲ್ಲಿ 42 ವರ್ಷದ ವಿನೋದ್ ಕುಮಾರ್ ಅವರು ಕಂಚಿನ ಪದವನ್ನು ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ಆ ಮೂಲಕ ಭಾರತಕ್ಕೆ ಈಗ ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo Paralympics) ನಲ್ಲಿ ಮೂರನೇ ಪದಕ ಲಭಿಸಿದಂತಾಗಿದೆ. ವಿನೋದ್ ಅವರ ಅತ್ಯುತ್ತಮ ಪ್ರಯತ್ನವನ್ನು 19.1 ಮಿನಲ್ಲಿ ದಾಖಲಿಸುವ ಮೂಲಕ  ಹೊಸ ಏಷ್ಯನ್ ದಾಖಲೆಯನ್ನು ಸೃಷ್ಟಿಸಿದರು.


ಇದನ್ನೂ ಓದಿ-Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ


ಏತನ್ಮಧ್ಯೆ, ಇದು ಭಾರತದ ದಿನದ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಭಾರತೀಯ ಪ್ಯಾಡ್ಲರ್ ಭಾವಿನಾ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶದ ಖಾತೆಯನ್ನು ತೆರೆದರು ಮತ್ತು ಮಹಿಳಾ ಟೇಬಲ್ ಟೆನಿಸ್ ಫೈನಲ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.ಇನ್ನೊಂದೆಡೆಗೆ  ಹೈ ಜಂಪರ್ ನಿಶಾದ್ ಕುಮಾರ್ ಕೂಡ ತಮ್ಮ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು. ಅವರ 2.06 ಮೀಟರ್ ಪ್ರಯತ್ನವು ಪುರುಷರ ಹೈಜಂಪ್ T45-T47 ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆಯನ್ನು ಸೃಷ್ಟಿಸಿತು.


ಇದನ್ನೂ ಓದಿ-Anand Mahindra Tweet: ಬಾಲಕನೋರ್ವನ ಕಳರಿಪಯಟ್ಟು ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹಿಂದ್ರಾ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.