Anand Mahindra Tweet: ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರು ಕಲರಿಪಯಟ್ಟು (Kalaripayttu)ಅಭ್ಯಾಸ ಮಾಡುತ್ತಿರುವ ಹುಡುಗನ ವೀಡಿಯೊದಿಂದ ಪ್ರಭಾವಿತಗೊಂಡು, ಅದರ ಒಂದು ಕ್ಲಿಪ್ಪ್ ಅನ್ನು ತಮ್ಮ ಅಭಿಮಾನಿಗಳು ಜೊತೆಗೆ ಹಂಚಿಕೊಂಡಿದ್ದಾರೆ. ಆದರೆ, ಮಹೀಂದ್ರ ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಬಾಲಕನ ಲಿಂಗವನ್ನು ತಪ್ಪಾಗಿ ಗುರುತಿಸಿದ್ದಾರೆ. ಹೌದು, ವಿಡಿಯೋದಲ್ಲಿ ಕಳರಿಪಯಟ್ಟು ಅಭ್ಯಾಸ ನಡೆಸುತ್ತಿರುವ ಬಾಲಕನನ್ನು ಬಾಲಕಿಯಂದು ಭಾವಿಸಿರುವ ಆನಂದ ಮಹಿದ್ರಾ ತಮ್ಮ ಶೀರ್ಷಿಕೆಯಲ್ಲಿ 'ಎಚ್ಚರಿಕೆ: ಈ ಹುಡುಗಿಯ ದಾರಿಯಲ್ಲಿ ಬರಬೇಡಿ!' ಎಂದು ಹೇಳಿದ್ದಾರೆ. ಆದರೆ, ಅದೇನೇ ಇದ್ದರು ಕೂಡ ವಿಡಿಯೋ ಮಾತ್ರ ಸಕತ್ ವೈರಲ್ ಆಗುತ್ತಿದೆ.
ಅದ್ಭುತ ವಿಡಿಯೋ ಹಂಚಿಕೊಂಡ ಆನಂದ್ ಮಹಿಂದ್ರ
ಅದೇನೇ ಇರಲಿ ಆನಂದ್ ಮಹಿಂದ್ರಾ ಅವರು ಹಂಚಿಕೊಂಡಿರುವ ವಿಡಿಯೋವನ್ನು (Anand Mahindra Viral Video) ವಿಕ್ಷೀಸುತ್ತಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿನ ಬಾಲಕನ ಹೆಸರು ನೀಲಕಂದನ್ ನಾಯರ್. ಆನಂದ್ ಮಹಿಂದ್ರಾ ಅವರು ಹಂಚಿಕೊಂಡಿರುವ ವಿಡಿಯೋಗೆ ನೀಲಕಂದನ್ (Neelakandan Nair) ಕೂಡ ಪ್ರತಿಕ್ರಿಯೆ ನೀಡಿ, ಅವರ ತಪ್ಪನ್ನು ಸುಧಾರಿಸಿ "ನಾನು ಬಾಲಕಿಯಲ್ಲ, ನಾನು 10 ವರ್ಷದ ಬಾಲಕ" ಎಂದು ಬರೆದಿದ್ದಾರೆ.
ಕಳರಿಪಯಟ್ಟು ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ ಇದು
ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಈ ವಿಡಿಯೋ ಜೊತೆಗೆ ಜನರು ಈ ಕಲೆಯ ಬಗ್ಗೆ ತಿಳಿದುಕೊಳ್ಳಬೇಕು. ಕಲರಿಪಯಟ್ಟು, ಒಂದು ಪ್ರಾಚೀನ ಸಮರ ಕಲೆ, ಆಧುನಿಕ ಕೇರಳದಲ್ಲಿ ಹುಟ್ಟಿಕೊಂಡಿತು. ಕಳರಿಪಯಟ್ಟುವನ್ನು ಕಲಾರಿ ಎಂದೂ ಕೂಡ ಕರೆಯುತ್ತಾರೆ. ಪ್ರಾಚೀನ ಕಾಲದ ಯುದ್ಧಭೂಮಿಗಾಗಿ ಕಳರಿಪಯಟ್ಟು ಅನ್ನು ವಿನ್ಯಾಸಗೊಳಿಸಲಾಗಿತ್ತು ಮತ್ತು ಭಾರತದ ಪಾಲಿಗೆ ಇದು ತುಂಬಾ ವಿಶಿಷ್ಟವಾಗಿದೆ. ಏಕೆಂದರೆ ಇದರಲ್ಲಿ ಕಠಾರಿ, ಕೋಲು ಮತ್ತು ಖಡ್ಗಗಳಂತಹ ಆಯುಧಗಳನ್ನು ಬಳಸಲಾಗುತ್ತದೆ.
WARNING: Do NOT get in this young woman’s way! And Kalaripayattu needs to be given a significantly greater share of the limelight in our sporting priorities. This can—and will— catch the world’s attention. pic.twitter.com/OJmJqxKhdN
— anand mahindra (@anandmahindra) August 26, 2021
ಇದನ್ನೂ ಓದಿ-India vs Eng 3rd Test: ಭಾರತ ಈ ಟೆಸ್ಟ್ ಪಂದ್ಯದಲ್ಲಿ ಸೋಲಲಿದೆ-ಮೈಕಲ್ ವಾನ್
ಆನಂದ್ ಮಹಿಂದ್ರಾ ಅವರ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗೆ ಒಳಗಾಗಿದೆ
ವಿಡಿಯೋ ಹಂಚಿಕೊಂಡು ಮಾರ್ಷಲ್ ಆರ್ಟ್ಸ್ ಫಾರ್ಮ್ ಬಗ್ಗೆ ಮಾತನಾಡಿರುವ ಆನಂದ್ ಮಹೀಂದ್ರಾ, 'ನಮ್ಮ ಕ್ರೀಡಾ ಆದ್ಯತೆಗಳಲ್ಲಿ ಕಳರಿಪಯಟ್ಟುಗೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಇದು ವಿಶ್ವಾದ್ಯಂತದ ಜನರನ್ನು ಆಕರ್ಷಿಸಲಿದೆ ಮತ್ತು ಅವರ ಗಮನ ಕೂಡ ಸೆಳೆಯಲಿದೆ' ಎಂದಿದ್ದಾರೆ. ಪ್ರಸ್ತುತ ಅವರು ಹಂಚಿಕೊಂಡಿರುವ ಈ ವೀಡಿಯೋವನ್ನು 2 ಲಕ್ಷಕ್ಕೂ ಅಧಿಕ ಬಾರಿಗೆ ವಿಕ್ಷೀಸಲಾಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.