ನವದೆಹಲಿ: Umpire Signal Wide Ball - ಕ್ರಿಕೆಟ್‌ನಲ್ಲಿ (Cricket News) ಅಂಪೈರ್‌ ಪಾತ್ರ ಬಹಳ ಮುಖ್ಯ. ಅಂಪೈರಿಂಗ್‌ನಲ್ಲಿನ ದೊಡ್ಡ ಸವಾಲು ಎಂದರೆ ನಿರ್ಣಯ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದು. ನಿಮ್ಮ ಪ್ರತಿ ಚೆಂಡಿನ ಮೇಲೆ ಅವರು ನಿಗಾ ಇಡಬೇಕು, ಏಕೆಂದರೆ ಅಂಪೈರ್‌ನ ತಪ್ಪು ನಿರ್ಧಾರವು ಗೆಲುವು ಮತ್ತು ಸೋಲಿನ ಮೇಲೆ ಪರಿಣಾಮ ಬೀರುತ್ತದೆ. ಅಂಪೈರ್‌ಗಳು ಯಾವಾಗಲೂ ಜಾಗರೂಕರಾಗಿರಬೇಕು. ಅಂಪೈರ್‌ಗಳು ತಪ್ಪು ಮಾಡಿದಾಗ ಮಾತ್ರ ಜನರ ಗಮನ ಸೆಳೆಯುತ್ತಾರೆ, ಆದರೆ ಕೆಲವು ಅಂಪೈರ್‌ಗಳು ತಮ್ಮ ನಿರ್ಧಾರಗಳನ್ನು ನೀಡುವ ವಿಧಾನದಿಂದ ಪ್ರಸಿದ್ಧರಾಗುತ್ತಾರೆ. ಮಹಾರಾಷ್ಟ್ರದ ಟಿ20 ಟೂರ್ನಿಯಲ್ಲೂ ಇಂಥದ್ದೇ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಅಂಪೈರ್ ಈ ರೀತಿಯಲ್ಲಿ ವೈಡ್ ಬಾಲ್ ನಿರ್ಣಯ ನೀಡಿದ್ದಾರೆ (Umpire Signals Wide Ball With Leg)
ಇಂದು ನಾವು ಮಾತನಾಡಲು ಹೊರಟಿರುವ ಅಂಪೈರ್ ತುಂಬಾ ವಿಶಿಷ್ಟ ರೀತಿಯಲ್ಲಿ ತಮ್ಮ ವೈಡ್ ಬಾಲ್ ನಿರ್ಣಯವನ್ನು ನೀದುತಾರೆ.  ಮಹಾರಾಷ್ಟ್ರದ  ( Maharashtra) ಸ್ಥಳೀಯ ಪಂದ್ಯಾವಳಿಯಾದ ಪುರಂದರ ಪ್ರೀಮಿಯರ್ ಲೀಗ್‌ (Purandhar Premier League)  ಅಂಪೈರಿಂಗ್‌ನ ವಿಶಿಷ್ಟ ಶೈಲಿಗೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಅಂಪೈರ್ ವೈಡ್ ಬಾಲ್ ನೀಡಲು ತನ್ನ ಎರಡೂ ಕೈಗಳನ್ನು ಚಾಚುತ್ತಾನೆ, ಆದರೆ ಇಲ್ಲಿ ಅಂಪೈರ್ ಹಾಗೆ ಮಾಡಲಿಲ್ಲ. ಅಂಪೈರ್ ಮೊದಲು ತಲೆಯ ಮೇಲೆ ನಮಸ್ಕರಿಸಿ, ನಂತರ ತಲೆಕೆಳಗಾಗಿ ತಿರುಗಿ ಎರಡು ಕಾಲುಗಳನ್ನು ಅಗಲಿಸಿ ವೈಡ್ ಸಿಗ್ನಲ್ ನೀಡಿದ್ದಾರೆ. ಇದು ಅಲ್ಲಿದ್ದವರೆಲ್ಲರ ಅಚ್ಚರಿಗೆ ಕಾರಣವಾಗಿದೆ. 


ಇದನ್ನೂ ಓದಿ-India's Best Captain: ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಇವರೇ ಟೀಂ ಇಂಡಿಯಾದ ಅತ್ಯುತ್ತಮ ಕ್ಯಾಪ್ಟನ್


ವಿಡಿಯೋ ವೈರಲ್ ಆಗುತ್ತಿದೆ
ಈ ರೀತಿ ಅಂಪೈರ್ ವೈಡ್ ಸಿಗ್ನಲ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕಾಮೆಂಟ್‌ಗಳಲ್ಲಿ, ಜನರು ಗೋವಿಂದಾ ಮತ್ತು ಟೈಗರ್ ಶ್ರಾಫ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಜನರು ತಾವು ಕಂಡದ್ದು ನಿಜವೇ ಎಂದು ತಮ್ಮ ಕಣ್ಣುಗಳ ಮೇಲೆ ಅವರಿಗೆ ವಿಶ್ವಾಸವೇ ಆಗುತ್ತಿಲ್ಲ.


ಮಾಯಾಂಕ್ ಅಗರ್ವಾಲ್ ಭಾರತೀಯ ತಂಡದ ಆಸ್ತಿ- ನಾಯಕ ವಿರಾಟ್ ಕೊಹ್ಲಿ


ಭಾರತ vs ನ್ಯೂಜಿಲೆಂಡ್ ಪಂದ್ಯವು ಸುದ್ದಿ ಮಾಡಿತು
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯಲ್ಲಿ, ಕಳಪೆ ಅಂಪೈರಿಂಗ್ ಸಾಕಷ್ಟು ಸುದ್ದಿ ಮಾಡಿದೆ. ಎರಡನೇ ಟೆಸ್ಟ್‌ನ ಮೊದಲ ದಿನದಂದು, ಭಾರತೀಯ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು, ಆದರೆ ರಿಪ್ಲೇಗಳನ್ನು  ವೀಕ್ಷಿಸಿದಾಗ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅದೇ ಸರಣಿಯಲ್ಲಿ, ಮೂರನೇ ಅಂಪೈರ್ ಅನ್ನು ಉಲ್ಲೇಖಿಸಿ ಅಂಪೈರಿಂಗ್ ನಿರ್ಧಾರವನ್ನು ಹಲವಾರು ಬಾರಿ ಬದಲಾಯಿಸಲಾಯಿತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದ್ದವು.


ಇದನ್ನೂ ಓದಿ-ನೂತನ ದಾಖಲೆ ನಿರ್ಮಿಸಿದ ನಾಯಕ ವಿರಾಟ್ ಕೊಹ್ಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ