amit mishra: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕೊಹ್ಲಿ ವರ್ತನೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅಮಿತ್ ಮಿಶ್ರಾ ಆಘಾತಕಾರಿ ಸಂಗತಿಯನ್ನು ಹೇಳಿದ್ದಾರೆ. ಭಾರತ ತಂಡ ಮತ್ತು ದೇಶೀಯ ಕ್ರಿಕೆಟ್ ಎರಡರಲ್ಲೂ ಕೊಹ್ಲಿಯೊಂದಿಗೆ ಆಡಿರುವ ಅಮಿತ್ ಮಿಶ್ರಾ, ಯುವ ವಿರಾಟ್ ಕೊಹ್ಲಿ ಮತ್ತು ಪ್ರಸ್ತುತ ವಿರಾಟ್ ಕೊಹ್ಲಿ ನಡುವೆ ದೊಡ್ಡ ವ್ಯತ್ಯಾಸವನ್ನು ತೋರಿಸಿದ್ದಾರೆ.


ಇದನ್ನೂ ಓದಿ-ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ…


ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ರೋಹಿತ್‌ ಶರ್ಮಾ ಯಶಸ್ಸಿನ ಹೊರತಾಗಿಯೂ ಯಾವಾಗಲೂ ಒಂದೇ ರೀತಿ ಇರುತ್ತಾರೆ.. ಆದರೆ ವಿರಾಟ್ ಕೊಹ್ಲಿ ಖ್ಯಾತಿ, ಅಧಿಕಾರ ಮತ್ತು ನಾಯಕತ್ವದ ನಂತರ ಸಾಕಷ್ಟು ಬದಲಾಗಿದ್ದಾರೆ. ಅಂದಿನ ‘ಚಿಕು’ಗೂ ಇಂದಿನ ಕೊಹ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. 12-13 ವರ್ಷ ವಯಸ್ಸಿನಿಂದಲೂ ಕೊಹ್ಲಿಯನ್ನು ನೋಡಿದ್ದೇನೆ.. 


ಆ ಸಮಯದಲ್ಲಿ ಅವರು ಸಮೋಸಾ ಮತ್ತು ಪಿಜ್ಜಾ ತಿನ್ನಲು ಇಷ್ಟಪಡುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ, ಖ್ಯಾತಿ ಗಳಿಸಿ ಟೀಂ ಇಂಡಿಯಾ ನಾಯಕನಾದ ಬಳಿಕ ಕೊಹ್ಲಿ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಕಂಡುಕೊಂಡಿದ್ದಾರೆ. ಮಿಶ್ರಾ ಪ್ರಕಾರ, ಈ ಬದಲಾವಣೆಯಿಂದಾಗಿ ಯುವ ಆಟಗಾರರಿಗೆ ಅವರನ್ನು ಸಂಪರ್ಕಿಸುವುದು ಕಷ್ಟಕರವಾಗಿದೆ. ಈಗ ನಾನು ಕೊಹ್ಲಿ ಜತೆ ಮಾತನಾಡುವುದು ತುಂಬಾ ಕಡಿಮೆ ಎಂದಿದ್ದಾರೆ.


ಇದನ್ನೂ ಓದಿ-ಭಾರತದ ಖಾಯಂ T20 ನಾಯಕ ಯಾರು? ಹಾರ್ದಿಕ್ ಪಾಂಡ್ಯ ಟೆನ್ಷನ್ ಹೆಚ್ಚಿಸಿದ ಈ ಸ್ಟಾರ್ ಬ್ಯಾಟ್ಸ್’ಮನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ