ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ…

Hardik Pandya Welcome Parade: ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಹಿಂದಿರುಗಿದ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು. ಇದೀಗ ಹಾರ್ದಿಕ್ ತನ್ನ ತವರು ವಡೋದರಾ ಆಗಮಿಸುತ್ತಿದ್ದಂತೇ ಅಭಿಮಾನಿಗಳ ದಂಡೇ ನೆರೆದಿತ್ತು.

Written by - Bhavishya Shetty | Last Updated : Jul 15, 2024, 09:46 PM IST
    • ಒಂದೇ ಒಂದು ಗೆಲುವಿನ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದ ಪಾಂಡ್ಯ
    • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು.
    • ಹಾರ್ದಿಕ್ ಓಪನ್ ಬಸ್ ರೋಡ್ ಶೋ ನಡೆಸಿ ವಿಜಯೋತ್ಸವ ಆಚರಿಸಿದರು
ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ… title=
File Photo

Hardik Pandya Welcome Parade: ಕೆಲ ದಿನಗಳ ಹಿಂದೆಯಷ್ಟೇ ಅಭಿಮಾನಿಗಳ ಕಿವಿಯಲ್ಲಿ ಗುನುಗುತ್ತಿದ್ದ ಹೆಸರು ಹಾರ್ದಿಕ್ ಪಾಂಡ್ಯ. ಟ್ರೋಲರ್ಸ್’ಗಳಿಗೆ ಆಹಾರವಾಗಿದ್ದ ಪಾಂಡ್ಯ, ಒಂದೇ ಒಂದು ಗೆಲುವಿನ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಹಿಂದಿರುಗಿದ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು. ಇದೀಗ ಹಾರ್ದಿಕ್ ತನ್ನ ತವರು ವಡೋದರಾ ಆಗಮಿಸುತ್ತಿದ್ದಂತೇ ಅಭಿಮಾನಿಗಳ ದಂಡೇ ನೆರೆದಿತ್ತು. ಹಾರ್ದಿಕ್ ಓಪನ್ ಬಸ್ ರೋಡ್ ಶೋ ನಡೆಸಿ ವಿಜಯೋತ್ಸವ ಆಚರಿಸಿದರು.

ಇದನ್ನೂ ಓದಿ: ನಟಿ ಸಾಯಿ ಪಲ್ಲವಿ ಕೂದಲು ಕಡುಕಪ್ಪಾಗಿ ಉದ್ದವಾಗಿ ಬೆಳೆಯಲು ಕಾರಣ ಈ ಎಲೆಯ ರಸವಂತೆ! ಸ್ವತಃ ಅವರೇ ಹೇಳಿದ ಟಿಪ್ಸ್ ಇದು

ಜೂನ್ 29 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ 2024ರ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿತ್ತು. ಇದರೊಂದಿಗೆ ರೋಹಿತ್ ಪಡೆ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು. ಅಂತಿಮ ಪಂದ್ಯದಲ್ಲಿ ಪಂದ್ಯ ಭಾರತದ ಕೈಯಿಂದ ಬಹುತೇಕ ಕೈ ತಪ್ಪಿತು. ಕೊನೆಯ ಓವರ್‌’ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 16 ರನ್‌’ಗಳ ಅಗತ್ಯವಿದ್ದು, ಚೆಂಡು ಹಾರ್ದಿಕ್ ಕೈಯಲ್ಲಿತ್ತು.

ಮುಂದೆ ಡೇವಿಡ್ ಮಿಲ್ಲರ್… ಈತ ಯಾವುದೇ ಸಮಯದಲ್ಲಿ ಪಂದ್ಯವನ್ನು ತಿರುಗಿಸನಲ್ಲ ಸಾಮರ್ಥ್ಯ ಹೊಂದಿದ್ದಾತ. ಆದರೆ ಹಾರ್ದಿಕ್ ಎಸೆತ ಮತ್ತು ಸೂರ್ಯ ಅವರ ಅದ್ಭುತ ಕ್ಯಾಚ್‌’ನಿಂದ ಮಿಲ್ಲರ್ ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಮರಳಿದರು. ಹಾರ್ದಿಕ್ ಕೊನೆಯ ಓವರ್‌’ನ ಹೀರೋ ಎಂದು ಸಾಬೀತುಪಡಿಸಿದರು ಮತ್ತು ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಅಮೂಲ್ಯ ಕೊಡುಗೆ ನೀಡಿದರು.

ಇದನ್ನೂ ಓದಿ:  ನನ್ನ ನಿವೇದಿತಾ ದಾಂಪತ್ಯ ಮುರಿಯಲು ‘ಆ’ ವ್ಯಕ್ತಿಯೇ ಕಾರಣ… ಡಿವೋರ್ಸ್ ಬೆನ್ನಲ್ಲೇ ನುಂಗಲಾರದ ಸತ್ಯ ಬಿಚ್ಚಿಟ್ಟ ಚಂದನ್ ಶೆಟ್ಟಿ

ಆದರೆ ಕಳೆದ 6 ತಿಂಗಳು ಹಾರ್ದಿಕ್ ಪಾಂಡ್ಯ ಅವರಿಗೆ ನೋವಿನಿಂದ ಕೂಡಿತ್ತು. ಐಪಿಎಲ್‌’ನಲ್ಲಿ ಮುಂಬೈ ತಂಡದ ನಾಯಕನಾದ ನಂತರ ಹಾರ್ದಿಕ್‌ ಅವರನ್ನು ತೀವ್ರವಾಗಿ ನಿಂದಿಸಲಾಗಿತ್ತು. ಆದರೆ ಇದೀಗ ಹಾರ್ದಿಕ್ ಅವರ ಆಟ ನೋಡಿ ಅಭಿಮಾನಿಗಳು ಅವರನ್ನು ಹೀರೋ ಎಂದು ಪರಿಗಣಿಸಿದ್ದಾರೆ. ವಿಶ್ವ ಚಾಂಪಿಯನ್ ಹಾರ್ದಿಕ್ ಹುಟ್ಟೂರಿಗೆ ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News