Virat Kohli Childhood Coach: ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡ ಗುರುವಾರ ಭಾರತಕ್ಕೆ ಆಗಮಿಸಿದಾಗ ಇಡೀ ದೇಶವೇ ಅವರನ್ನು ಸ್ವಾಗತಿಸಲು ಮುಂದಾಗಿತ್ತು. ಭಾರತದ ಐತಿಹಾಸಿಕ ಗೆಲುವನ್ನು ಸ್ಮರಣೀಯವಾಗಿಸಲು ಬಿಸಿಸಿಐ ಕೂಡ ವ್ಯವಸ್ಥೆಗಳನ್ನು ಮಾಡಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ


ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾಗಾಗಿ ಆಯೋಜಿಸಿದ್ದ ವಿಜಯೋತ್ಸವ ಪರೇಡ್ ಮತ್ತು ಅದ್ಧೂರಿ ಸಮಾರಂಭವನ್ನು ಇಡೀ ಭಾರತವೇ ಸಂಭ್ರಮಿಸಿತ್ತು. ಇದೀಗ ಆ ಘಟನೆಗಳಿಗೆ ಸಂಬಂಧಿಸಿದ ಹಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಒಂದು ವಿರಾಟ್ ತಮ್ಮ ಬಾಲ್ಯದ ಕೋಚ್ ಅನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು.


ಕೊಹ್ಲಿಯನ್ನು ಸ್ವಾಗತಿಸಲು ಅವರ ಬಾಲ್ಯದ ಗುರು ರಾಜ್‌ ಕುಮಾರ್ ಶರ್ಮಾ ಆಗಮಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಭಾವುಕರಾದ ಕೊಹ್ಲಿ ಅಪ್ಪಿಹಿಡಿದಿದ್ದಾರೆ. ಅದರ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ:  ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?


ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಏಸ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಜೀವನದಲ್ಲಿ ಅವರ ಬಾಲ್ಯದ ಕೋಚ್ ರಾಜ್‌ ಕುಮಾರ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಹ್ಲಿಗೆ ಕ್ರಿಕೆಟ್’ನಲ್ಲಿ ಆರಂಭಿಕ ತರಬೇತಿ ನೀಡಿದ್ದು ರಾಜ್ ಕುಮಾರ್. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಹ್ಲಿಯ ಅದ್ಭುತ ಸಾಧನೆಗಳಿಗಾಗಿ ರಾಜ್‌ ಕುಮಾರ್ ಅವರಿಗೆ 2016 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ