Virat Kohli Deep Fake video: ಕೆಲವು ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ವೀಡಿಯೊ ವೈರಲ್ ಆಗಿತ್ತು. ಇದಾದ ಬಳಿಕ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಡೀಪ್‌ ಫೇಕ್ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ವಿರಾಟ್ ಕೊಹ್ಲಿಯ ಡೀಪ್‌ ಫೇಕ್ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ಬೆಟ್ಟಿಂಗ್ ಪ್ರಚಾರ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

 ಇದನ್ನೂ ಓದಿ: IPL 2024: ಈ ದಿನದಂದು ಶುರುವಾಗಲಿದೆ ಐಪಿಎಲ್ 2024ರ ಆವೃತ್ತಿ: ಭಾರತದಲ್ಲೇ ನಡೆಯಲಿದೆ ಮೆಗಾ ಟೂರ್ನಿ


ತುಂಬಾ ಸರಳವಾದ ಭಾಷೆಯಲ್ಲಿ, ಡೀಪ್‌ ಫೇಕ್ ಏನೆಂದು ಹೇಳುವುದಾದರೆ, ಇದೊಂದು ಎಡಿಟ್ ಮಾಡಿದ ವೀಡಿಯೊವಾಗಿದ್ದು, ಇದರಲ್ಲಿ ಬೇರೆಯವರ ಮುಖವನ್ನು ಬೇರೆಯವರ ದೇಹದೊಂದಿಗೆ ಸೇರಿಸುವುದು. ಡೀಪ್‌ ಫೇಕ್ ವೀಡಿಯೊಗಳು ಎಷ್ಟು ನಿಖರವಾಗಿರುತ್ತವೆ ಎಂದರೆ ನೀವು ಅವುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ. ಡೀಪ್‌ಫೇಕ್ ವೀಡಿಯೊಗಳನ್ನು ರಚಿಸಲು ಕೃತಕ ಬುದ್ಧಿಮತ್ತೆ (AI) ಸಹಾಯವನ್ನು ಸಹ ತೆಗೆದುಕೊಳ್ಳಲಾಗುತ್ತದೆ.


 ಇದನ್ನೂ ಓದಿ: ಸಾನಿಯಾ ಮಿರ್ಜಾ ಮತ್ತು ಶೋಹಿಬ್ ಮೂರನೇ ಪತ್ನಿ ಸನಾ ಜಾವೇದ್ ಇಬ್ಬರಲ್ಲಿ ಯಾರು ಹೆಚ್ಚು ಸಿರಿವಂತೆ ? 


ಡೀಪ್‌ ಫೇಕ್ ಫೋಟೋ-ವೀಡಿಯೋಗಳನ್ನು ಗುರುತಿಸುವುದು ಸುಲಭವಲ್ಲ. ಆದರೆ ಅಸಾಧ್ಯವೂ ಅಲ್ಲ. ಅವುಗಳನ್ನು ಗುರುತಿಸಲು ನೀವು ವೀಡಿಯೊವನ್ನು ಬಹಳ ಹತ್ತಿರದಿಂದ ನೋಡಬೇಕು. ಮುಖಭಾವ, ಕಣ್ಣಿನ ಚಲನೆ ಮತ್ತು ದೇಹದ ಶೈಲಿಗೆ ವಿಶೇಷ ಗಮನ ನೀಡಬೇಕು. ಇದಲ್ಲದೆ, ನೀವು ಅವುಗಳನ್ನು ದೇಹದ ಬಣ್ಣದಿಂದ ಗುರುತಿಸಬಹುದು. ಸಾಮಾನ್ಯವಾಗಿ ಇಂತಹ ವಿಡಿಯೋಗಳಲ್ಲಿ ಮುಖ ಮತ್ತು ದೇಹದ ಬಣ್ಣ ಹೊಂದಾಣಿಕೆಯಾಗುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.