IPL 2024 Opening Date: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 17 ನೇ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಐಎನ್‌ಎಸ್’ನಿಂದ ಬಂದಿರುವ ಮಾಹಿತಿಯ ಪ್ರಕಾರ, ಐಪಿಎಲ್ ಚೇರ್ಮಾನ್ ಅರುಣ್ ಧುಮಾಲ್ ಅವರು ಮಾರ್ಚ್ 22 ರಿಂದ ಪಂದ್ಯಾವಳಿಯನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ 2024ರ ಕಾರಣದಿಂದಾಗಿ ಐಪಿಎಲ್ 2024 ರ ಆರಂಭದ ದಿನಾಂಕ ಮತ್ತು ವೇಳಾಪಟ್ಟಿಯನ್ನು ನಿರ್ಧರಿಸಲಾಗುತ್ತಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: “ಇದೇ ಕಾರಣಕ್ಕೆ ಯುಜ್ವೇಂದ್ರ ಚಹಾಲ್’ರನ್ನು RCBಯಿಂದ ಕೈಬಿಟ್ಟಿದ್ದು”: ಮೈಕ್ ಹಸನ್
ಸಿಎಸ್’ಕೆ ಪಂದ್ಯ ಆರಂಭದ ದಿನ ನಡೆಯಲಿದೆಯೇ?
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ದಿನದಂದು ಅಂದರೆ IPL 2024 ಪ್ರಾರಂಭವಾಗುವ ದಿನದಂದು ಆಡಲಿದೆ. ಅಂದರೆ ಎಂಎಸ್ ಧೋನಿ ಅಭಿಮಾನಿಗಳ ಗಮನ ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಹಿಂದಿನ ಋತುವಿನ ಫೈನಲಿಸ್ಟ್’ಗಳು ಮಾತ್ರ ಮುಂದಿನ ಋತುವಿನ ಆರಂಭಿಕ ಪಂದ್ಯದಲ್ಲಿ ಆಡುತ್ತಾರೆ. ಆದರೆ, ಅದೇ ರೀತಿ ನಡೆಯಬೇಕು ಎಂಬ ಯಾವುದೇ ನಿಯಮವಿಲ್ಲ. ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾದ ನಂತರವೇ ಅನುಮೋದನೆಯ ಅಂತಿಮ ಮುದ್ರೆಯನ್ನು ನೀಡಲಾಗುತ್ತದೆ.
ಲೋಕಸಭೆ ಚುನಾವಣೆಯ ದಿನಾಂಕದ ನಂತರವೇ ಟೂರ್ನಿಯ ವೇಳಾಪಟ್ಟಿ ಹೊರಬರಲಿದೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಚುನಾವಣಾ ವೇಳಾಪಟ್ಟಿಯ ಪ್ರಕಾರ ಐಪಿಎಲ್ ವೇಳಾಪಟ್ಟಿಯನ್ನು ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಅರುಣ್ ಧುಮಾಲ್ ಕೂಡ ಹೇಳಿದ್ದರು.
ಇದನ್ನೂ ಓದಿ: ಸಾಂದೀಪನಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಕೆ: ಮಾರ್ಚ್ 1ರವರೆಗೆ ದಿನಾಂಕ ವಿಸ್ತರಣೆ
ದೇಶದಲ್ಲಿಯೇ ಐಪಿಎಲ್ ನಡೆಯಲಿದೆ!
ಐಪಿಎಲ್ 2024 ಭಾರತದಲ್ಲೇ ನಡೆಯಲಿದೆ. ಇದಕ್ಕೂ ಮುನ್ನ 2009ರ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಲಾಗಿದ್ದು, 2014ರಲ್ಲಿ ಯುಎಇಯಲ್ಲಿ ಒಂದು ಭಾಗವನ್ನು ಆಡಲಾಗಿತ್ತು. ಆದರೆ 2019 ರ ಚುನಾವಣೆಯ ಹೊರತಾಗಿಯೂ, ಭಾರತದಲ್ಲಿ ಐಪಿಎಲ್ ನಡೆಯಿತು. ಈ ಬಾರಿಯ ಟೂರ್ನಮೆಂಟ್ ಬಗ್ಗೆ ಧುಮಾಲ್ ಸ್ಪಷ್ಟನೆ ನೀಡಿದ್ದು, ದೇಶದಲ್ಲೇ ಪಂದ್ಯಾವಳಿ ನಡೆಸುವ ಉತ್ಸಾಹದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.